CONNECT WITH US  

ಎಕ್ಸ್‌ಟ್ರಾ ಕೆಜಿಗೆ‌ ಎಕ್ಸರ್‌ಸೈಜ್‌

ತುಂಬಾ ಜನ ವ್ಯಾಯಾಮ ಮಾಡುವ ನೆಪದಲ್ಲಿ ಅತಿಯಾದ ವ್ಯಾಯಾಮ ಮಾಡುತ್ತಾರೆ. ಅಂಥವರಿಗೆ ವ್ಯಾಯಾಮ ಎಷ್ಟು ಹೊತ್ತು ಮಾಡಬೇಕು ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿರುತ್ತದೆ.

ಕೆಲವರಿಗೆ ವ್ಯಾಯಾಮದ ಕುರಿತಾಗಿ ಒಂದು ರೀತಿಯ ತಪ್ಪು ಭಾವನೆ ಇರುತ್ತದೆ- ದಿನದಲ್ಲಿ  ಒಂದು ಗಂಟೆ ವ್ಯಾಯಾಮ ಮಾಡುವ ಜಾಗದಲ್ಲಿ  ಮೂರು ಗಂಟೆ ವ್ಯಾಯಾಮ ಮಾಡಿದರೆ ಬೇಗನೇ ಸಣ್ಣಗಾಗಬಹುದು, ಅದರಿಂದ ಹೆಚ್ಚು ಲಾಭ ಪಡೆಯಬಹುದು ಎಂದೆಲ್ಲಾ. ಪ್ರತಿದಿನ ಆರೋಗ್ಯಕ್ಕಾಗಿ, ಫಿಟ್‌ನೆಸ್‌ಗಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಆದರೆ ಅದು ಹೆಚ್ಚಾದರೆ  ಅದರಿಂದ ಆರೋಗ್ಯದ ಮೇಲೆ ಅಷ್ಟೇ ಕೆಡುಕು ಉಂಟಾಗುತ್ತದೆ. ತುಂಬಾ ಜನ ವ್ಯಾಯಾಮ ಮಾಡುವ ನೆಪದಲ್ಲಿ ಅತಿಯಾದ ವ್ಯಾಯಾಮ ಮಾಡುತ್ತಾರೆ. ಅಂಥವರಿಗೆ ವ್ಯಾಯಾಮ ಎಷ್ಟು ಹೊತ್ತು ಮಾಡಬೇಕು ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿರುತ್ತದೆ. ಅತಿಯಾದ ವ್ಯಾಯಾಮ ದೈಹಿಕವಾಗಿ, ಮಾನಸಿಕವಾಗಿ ತೊಂದರೆ ಉಂಟುಮಾಡುತ್ತದೆ. ಮೂಳೆಗಳ ಸವೆತ, ಸ್ನಾಯುಗಳ ಸೆಡೆತ, ಹೀಗೆ ಪ್ರಾರಂಭದಲ್ಲಿ ಚಿಕ್ಕದಾಗಿ ಕಾಣುವ ಈ ಸಮಸ್ಯೆಗಳು ವಯಸ್ಸಾದ ಹಾಗೇ ದೊಡ್ಡದಾಗಿ ಕಾಡುತ್ತ ಹೋಗುತ್ತವೆ.

ಅತಿಯಾದ ವ್ಯಾಯಾಮ ಮಾಡುವುದು ನಮ್ಮ ದೇಹವನ್ನು ನಾವು ಒತ್ತಾಯಪೂರ್ವಕವಾಗಿ ದಂಡಿಸಿದಂತಾಗುತ್ತದೆ. ಇಷ್ಟಪಟ್ಟು ನಿಯಮಿತವಾಗಿ ಮಾಡುವ ವ್ಯಾಯಾಮ ದೇಹಕ್ಕೆ ಆರೋಗ್ಯ ಮತ್ತು ಚೈತನ್ಯವನ್ನು ಕೊಟ್ಟರೆ ಬಲವಂತವಾಗಿ ಗಂಟಾನುಗಟ್ಟಲೇ ಮಾಡುವ ವ್ಯಾಯಾಮ ಈ ಕೆಳಕಂಡ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ:

-ತಲೆನೋವು
- ಆಯಾಸ
- ಹೃದಯ ಬಡಿತದಲ್ಲಿ  ಏರಿಳಿತ
- ಸ್ನಾಯುಗಳಲ್ಲಿ  ನೋವು
- ನಿಶ್ಯಕ್ತಿ
- ನಿರಾಸಕ್ತಿ
- ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು.

ಬಿಡುವಿಲ್ಲದಂತೆ ವ್ಯಾಯಾಮ ಮಾಡುತ್ತ ಇದ್ದರೆ, ಹೃದಯದ ಬಡಿತದಲ್ಲಿ  ಗಣನೀಯವಾದ ಏರಿಳಿಕೆ ಕಂಡುಬರುತ್ತದೆ. ಕಾಲು, ಸಂಧಿಗಳಲ್ಲಿ ನೋವು ಬಂದರೂ ಅದನ್ನು ನಿರ್ಲಕ್ಷÂ ಮಾಡಿ ವ್ಯಾಯಾಮ ಮಾಡುತ್ತಲೇ ಹೋದರು ದೇಹದ ಒಳಭಾಗದಲ್ಲಿ  ಗಾಯಗಳಾಗಿರುತ್ತವೆ. ಹುಡುಗಿಯರು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದಲ್ಲಿ ,
ಹಾರ್ಮೋನ್‌ಗಳಲ್ಲಿ  ವ್ಯತ್ಯಾಸ ಉಂಟಾಗಿ ಆ ಮೂಲಕ ಅವರ ಮಾಸಿಕ ಮುಟ್ಟು ಕೂಡ ಏರುಪೇರಾಗುವ ಸಾಧ್ಯತೆ ಇರುತ್ತದೆ. ವಾರದಲ್ಲಿ  ಐದು ದಿನ 40-60 ನಿಮಿಷ ವ್ಯಾಯಾಮ ಮಾಡಿದರೆ ಸಾಕು. ನೀವು ಆರೋಗ್ಯವಂತರಾಗಿಯೂ, ಫಿಟ್‌ ಆಗಿಯೂ ಇರಬಹುದು. ನಮಗೆ ಹುಷಾರು ತಪ್ಪಿದಾಗ, ನಿಶ್ಯಕ್ತಿ ಎನಿಸಿದಾಗ ವ್ಯಾಯಾಮ ಮಾಡದೆ ದೇಹಕ್ಕೆ  ವಿಶ್ರಾಂತಿ ಕೊಡುವುದು ತುಂಬಾ ಮುಖ್ಯವಾಗುತ್ತದೆ. ನೀವು ವ್ಯಾಯಾಮ ಮಾಡುತ್ತಲೇ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಪ್ರೋಟಿನ್‌, ವಿಟಮಿನ್‌, ಮಿನರಲ್‌ಗ‌ಳು ಇರುವಂತೆ ನೋಡಿಕೊಳ್ಳಿ.

Trending videos

Back to Top