CONNECT WITH US  

ಮಾನ್‌ಸೂನ್‌ ಫಿಟ್‌ನೆಸ್‌ ಈ ಚಳಿಗೆ ಬೆವರು ಒಳ್ಳೆಯದು

ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಇರುವುದೇ ಕಷ್ಟ. ಅಂತದ್ದರಲ್ಲಿ ಲೀಟರ್‌ಗಟ್ಟಲೇ ಬೆವರು ಸುರಿಸಿ ವ್ಯಾಯಾಮ ಮಾಡುವುದು ಇನ್ನೂ ಕಷ್ಟ. ಅದೇ ಚಳಿಗಾಲ ಹಂಗಲ್ಲ, ಮಳೆಗಾಲ ಹಿಂಗಲ್ಲ, ನಿಮ್ಮ ದೇಹದ ಚಳಿಯನ್ನು ಹೊಡೆದೋಡಿಸಲು ವ್ಯಾಯಾಮವೊಂದೇ ಮಾರ್ಗ. ಮನಸೊಂದಿದ್ದರೆ ಕೊರೆಯುವ ಚಳಿಯಿರಲಿ, ನೆತ್ತಿ ಸುಡುವ ಬಿಸಿಲಿರಲಿ- ವ್ಯಾಯಾಮ ಮಾಡಿಯೇ ತೀರಬಹುದು. ಆದರೆ ವ್ಯಾಯಾಮದಲ್ಲಿ ಸ್ವಲ್ಪಮಟ್ಟಿಗಿನ ಬದಲಾವಣೆಗಳನ್ನು ಮಾತ್ರ ಮಾಡಿಕೊಳ್ಳಬೇಕು ಅಷ್ಟೇ.

ಅದೇನೆಂದರೆ ವ್ಯಾಯಾಮಕ್ಕಾಗಿ ಹೊರಾಂಗಣವನ್ನು ಆಯ್ದುಕೊಳ್ಳುವುದು. ನಿಮಗೆ ಇನ್ನು ಸುಲಭವಾಗಿ ಅರ್ಥ ಮಾಡಿಸುವುದೇ ಆದಲ್ಲಿ, ಟೀಮ್‌ನ್ಪೋರ್ಟ್ಸ್ ಆಡುವುದು. ನಿಮಗೆ ಯಾವ ರೀತಿಯ ಹೊರಾಂಗಣ ಕ್ರೀಡೆಗಳಿಷ್ಟವೋ, ಅವುಗಳನ್ನು ಆಯ್ದುಕೊಂಡು ನಿಮ್ಮ ವರ್ಕ್‌ ಔಟ್‌ ಪ್ಲಾನ್‌ ಮಾಡುವುದು.

ಈಜುವುದು
ಈಜುವುದು ಒಂದು ಜನಪ್ರಿಯ ಮತ್ತು ಎಲ್ಲರಿಗೂ ಇಷ್ಟವಾದ ಒಂದು ಫಿಟೆ°ಸ್‌ ಮಂತ್ರ. ನಿಮಗೆ ಚೆನ್ನಾಗಿ ಈಜು ಗೊತ್ತಿದ್ದಲ್ಲಿ ಕೊಳ, ಹೊಳೆ, ಕೆರೆ ಯಾವುದರಲ್ಲಿ ಬೇಕಾ ದರೂ ಈಜಬಹುದು. ಆದರೆ ತೀರಾ ಅಪಾಯಕಾರಿ ಸುಳಿಯಲ್ಲಿರುವ ಜಾಗದಲ್ಲಿ ಲೈಫ್ ಗಾರ್ಡ್‌ಗಳಿಲ್ಲದೆ ಈಜುವುದು ಒಳಿತಲ್ಲ.

ಜಿಗಿತ
ಒಳ್ಳೆಯ ಶೂಗಳನ್ನು ಧರಿಸಿ ಎತ್ತರ ಜಿಗಿತ ಮತ್ತು ಉದ್ದ ಜಿಗಿತ ಮಾಡಿದರೆ ಕಾಲು, ಹಿಮ್ಮಡಿಗಳಿಗೆಲ್ಲಾ ಒಳ್ಳೆಯ ವ್ಯಾಯಾಮವಾಗುತ್ತದೆ. ಆದರೆ ನಿಮಗೆ ಜಿಗಿತದ ಬಗ್ಗೆ ಏನು ಜ್ಞಾನವಿಲ್ಲದೆ ಅದನ್ನು ಪ್ರಯತ್ನಿಸುವುದು ಕ್ಷೇಮವಲ್ಲ. ಏಕೆಂದರೆ, ಅದರಿಂದಾಗಿ ಸ್ನಾಯುಗಳ ಸೆಳಕು ಉಂಟಾಗಬಹುದು.

ಸೈಕ್ಲಿಂಗ್‌
ಸೈಕ್ಲಿಂಗ್‌ ಗ್ರೂಪ್‌ನಲ್ಲಿ ಮಾಡಬಹುದಾದ ಒಂದು ಉತ್ತಮ ವ್ಯಾಯಾಮ. ಗುಣಮಟ್ಟದ ಸೈಕಲ್‌, ಹೆಲ್ಮೆಟ್‌, ನೀರಿನ ಬಾಟಲ್‌ ಒಂದಷ್ಟು ಹುಮ್ಮಸು ಇದ್ದರೆ ಆರಾಮವಾಗಿ ಸೈಕ್ಲಿಂಗ್‌ ಮಾಡಬಹುದು. ನಿಮಗೆ ಅಭ್ಯಾಸವೇ ಇಲ್ಲದಿದ್ದರೇ ಅತಿ ದೂರದ ಪ್ರಯಾಣ ಬೇಡ.

ಬ್ಯಾಡ್‌ಮಿಂಟನ್‌
ನಿಮ್ಮ ದೇಹಕ್ಕೆ ಒಳ್ಳೆಯ ಆಕಾರ ಬೇಕೆಂದರೆ, ಬ್ಯಾಡ್‌ಮಿಂಟನ್‌ ಆಟವಾಡುವುದು ಒಳ್ಳೆಯದು. ಒಳ್ಳೆಯ ನೆಟ್‌ ಮತ್ತು ಬ್ಯಾಟ್‌ ಹಾಗೂ ಬ್ಯಾಡ್‌ಮಿಂಟನ್‌ ಕೋರ್ಟ್‌ ಇದ್ದರೆ ಬ್ಯಾಡ್‌ಮಿಂಟನ್‌ ಚೆನ್ನಾಗಿ ಆಡಬಹುದು. ಎಷ್ಟು ಹೊತ್ತು ಆಟವಾಡುತ್ತೀರಿ ಅಷ್ಟು ಕ್ಯಾಲೋರಿ ನೀವು ಕಳೆದುಕೊಳ್ಳಬಹುದು.

ಬೀಚ್‌ ವಾಲಿಬಾಲ್‌
ಬೀಚ್‌ ವಾಲಿಬಾಲ್‌ನಲ್ಲಿ ಸಾಮಾನ್ಯವಾಗಿ ನಮ್ಮ ದೇಹದ ಎಲ್ಲಾ ಸ್ನಾಯುಗಳಿಗೂ ವ್ಯಾಯಾಮವಾದಂತಾಗುತ್ತದೆ.

Trending videos

Back to Top