“ಮೈ’ ಮನದಲ್ಲಿ ಸ್ವಾತಂತ್ರ್ಯ

Team Udayavani, Aug 16, 2017, 1:00 PM IST

16-AVALU-4.jpg

ಆಗಸ್ಟ್‌ ಬಂತಂದ್ರೆ, ತಿರಂಗಾ ಬಣ್ಣದ ಓಕುಳಿ ಎಲ್ಲೆಲ್ಲೂ ಚೆಲ್ಲಾಡಿದಂತೆ ಅನಿಸುತ್ತದೆ. ಕೇಸರಿ, ಬಿಳಿ, ಹಸಿರು ನಾನಾ ರೂಪದಲ್ಲಿ ಕಣ್ಣನ್ನು ಸೆಳೆಯುತ್ತದೆ. ದೇಶಭಕ್ತಿ ಹೃದಯದಲ್ಲಷ್ಟೇ ಅಲ್ಲ ಧರಿಸುವ ಬಟ್ಟೆಯಲ್ಲೂ ರಾರಾಜಿಸುತ್ತದೆ. “ಐ-ಡೇ’ ಸೆಲೆಬ್ರೇಷನ್‌ಗೆ ಟ್ರೆಂಡಿಯಾಗಿ ಏನಪ್ಪಾ ಧರಿಸೋದು ಅನ್ನೋ ಟೆನ್ಶನ್‌ ಯಾಕೆ?

ಧಾರ್ಮಿಕ ಹಬ್ಬಗಳಿಗಷ್ಟೇ ಚೆಂದನೆಯ ಡ್ರೆಸ್‌ ಹಾಕಿದರೆ ಸಾಕೆ? ಸ್ವಾತಂತ್ರ್ಯ ದಿನದಂದೂ ಕಚೇರಿಯಲ್ಲಿ “ಐ-ಡೇ’ ಸೆಲೆಬ್ರೇಷನ್‌ ಮಾಡೋಣ ಎನ್ನುವ ಫ್ಯಾಶನ್‌ ಪ್ರಿಯರಿಗಾಗಿ ಮಾರ್ಕೆಟ್‌ನಲ್ಲಿ ತಿರಂಗಾ ಟ್ರೆಂಡ್‌ ಶುರುವಾಗಿದೆ. ಮೈ ಮನಕ್ಕೊಪ್ಪುವಂಥ ಸಾಂಪ್ರದಾಯಿಕ ಹಾಗೂ ನೂತನ ವಿನ್ಯಾಸದ ಡಿಸೈನರ್‌ ಔಟ್‌ಫಿಟ್‌ಗಳು ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿವೆ. 

ತಿರಂಗಾ ಸ್ಯಾರಿ ಕ್ರೇಜ್‌!
ತಿರಂಗಾ ಸೀರೆಗಳು ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿವೆ. ಕೇಸರಿ, ಬಿಳಿ, ಹಸಿರಿನ ಅಂಚಿನ ಸೀರೆಗೆ ಹೆಚ್ಚಿನ ಬೇಡಿಕೆ ಇದೆ. ಬಿಳಿ ಸೀರೆ ಉಟ್ಟು ಅದಕ್ಕೆ ಕೇಸರಿ ಅಥವಾ ಹಸಿರು ಬಣ್ಣದ ಬ್ಲೌಸ್‌ ಅನ್ನು ಕೂಡ ಮ್ಯಾಚ್‌ ಮಾಡಬಹುದು. ವಿಶೇಷವಾಗಿ, ಐ-ಡೇಗಾಗಿಯೇ ಕ್ರೀಂ, ಕೇಸರಿ, ಹಸಿರು, ಬಿಳಿ, ನೀಲಿ ಬಣ್ಣದ ಸೀರೆಗಳು ಲಭ್ಯವಿದೆ.

ಐ-ಡೇ ಟೀ ಶರ್ಟ್‌
ದೇಶಪ್ರೇಮ ಸಾರುವ, ರಾಷ್ಟ್ರಾಭಿಮಾನದ ವಾಕ್ಯ ಹಾಗೂ ಚಿತ್ರಗಳ ಪ್ರಿಂಟೆಡ್‌ ಟೀ ಶರ್ಟ್‌ಗಳು ಟ್ರೆಂಡ್‌ನ‌ಲ್ಲಿವೆ. ತುಂಬಾ ಆರಾಮದಾಯಕ ಎನ್ನಿಸುವ ಈ ಶರ್ಟ್‌ಗಳನ್ನು ಯಾರು ಬೇಕಾದರೂ ಧರಿಸಬಹುದು. 

ಐ -ಡೇ ಖಾದಿ ಕುರ್ತಾ
ಇಂಥ ವಿಶಿಷ್ಟ ಆಚರಣೆಗಳ ಸಂದರ್ಭದಲ್ಲಿ ಖಾದಿ ಕುರ್ತಾ ಧರಿಸುವ ಖದರೇ ಬೇರೆ! ಖಾದಿ ಆಫೀಸ್‌ ವೇರ್‌ ಕುರ್ತಾ ಜತೆಗೆ ಕೇಸರಿ ಅಥವಾ ಹಸಿರು ಲೆಗ್ಗಿನ್ಸ್‌ ಧರಿಸಿ ಮಿಕ್ಸ್‌- ಮ್ಯಾಚ್‌ ಮಾಡಿ ಮಿಂಚಬಹುದು. ಜತೆಗೆ ಖಾದಿ ವೇಸ್ಟ್‌ ಕೋಟ್‌ ಧರಿಸಿದರೆ ಲುಕ್‌ ಇನ್ನಷ್ಟು ಟ್ರೆಂಡಿ ಎನಿಸುತ್ತದೆ.

ತ್ರಿವರ್ಣದ ದುಪಟ್ಟಾ
ಇನ್ನೂ ಸಿಂಪಲ್‌ ಆಗಿ ರೆಡಿಯಾಗಬೇಕೆನ್ನುವವರಿಗೆ ತಿರಂಗಾ ದುಪಟ್ಟಾ ಹೇಳಿ ಮಾಡಿಸಿದ್ದು. ಬಿಳಿ ಕುರ್ತಾ ಜತೆಗೆ ಕೇಸರಿ, ಹಸಿರು, ಬಿಳಿ ಬಣ್ಣದ ಪ್ರಿಂಟೆಡ್‌ ದುಪಟ್ಟಾ ಚೆನ್ನಾಗಿ ಸೂಟ್‌ ಆಗುತ್ತದೆ. 

ಬಟ್ಟೆಗೆ ಮಾತ್ರ ಬಣ್ಣವೇ?
ಈ ತಿರಂಗಾ ಕ್ರೇಜ್‌ ಕೇವಲ ಉಡುಪಿಗಷ್ಟೇ ಸೀಮಿತವಾಗದೆ ಫ್ಯಾಷನ್‌ ಆಕ್ಸಸರೀಸ್‌ಗೂ ವಿಸ್ತರಿಸಿಕೊಂಡಿದೆ. ಐ-ಡೇ ಪ್ರಯುಕ್ತ ನೀವು ತಿರಂಗ ಬ್ಯಾಂಗಲ್‌, ತಿರಂಗಾ ನೇಲ್‌ ಆರ್ಟ್‌, ಬಿಂದಿ, ತಿರಂಗಾ ಐ ಮೇಕಪ್‌, ತಿರಂಗಾ ಫ್ಯಾಶನ್‌ ಆಕ್ಸೆಸರೀಸ್‌ ಕೂಡ ಟ್ರೈ ಮಾಡಬಹುದು. ನಿಮ್ಮ ಐ-ಡೇ ಉಡುಪಿಗೆ ಹೊಂದುವ ಟ್ರೆಂಡಿ ತಿರಂಗಾ ಫ್ಯಾಷನ್‌ ಜ್ಯುವೆಲರಿ ಬಳಸಿ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ರಚಿಸಿಕೊಳ್ಳಿ.

ತಿರಂಗಾ ಫೇಸ್‌ ಟ್ಯಾಟೂ…
ಹೌದು… ಇದು ಈಗಿನ ಲೇಟೆಸ್ಟ್‌ ಟ್ರೆಂಡ್‌. ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಐ-ಡೇಯಂದು ಮುಖಕ್ಕೆ ತಿರಂಗಾ ಫೇಸ್‌ ಪೇಂಟ್‌ ಮಾಡಿಕೊಳ್ಳಬಹುದು. ಐ-ಡೇ ಡ್ರೈವ್‌ಗಳಲ್ಲಿ ಪಾಲ್ಗೊಳ್ಳುವವರು ಈ ರೀತಿಯ ತಿರಂಗಾ ಫೇಸ್‌ ಟ್ಯಾಟೂಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ಚಿತ್ರಶ್ರೀ ಹರ್ಷ 

ಟಾಪ್ ನ್ಯೂಸ್

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.