ರೊಟ್ಟಿ ತಿಂದು ಜಟ್ಟಿಯಾಗಿ…

Team Udayavani, Feb 21, 2018, 6:30 AM IST

cuckiing.jpg

ಅಡುಗೆಯಲ್ಲಿ ಸ್ವಲ್ಪ ಆಸಕ್ತಿ ಮತ್ತು ಪ್ರೀತಿ ಇದ್ದರೆ, ಮನೆಯಲ್ಲೇ ಇರುವ ಸಾಮಗ್ರಿಯನ್ನು ಬಳಸಿ ಥರ ಥರದ ತಿಂಡಿಗಳನ್ನು ತಯಾರಿಸಬಹುದು. ಈ ವಿಭಾಗಕ್ಕೆ ಸೇರುವ ಖಾದ್ಯ ರೊಟ್ಟಿ. ಸಂಜೆ ಮತ್ತು ಬೆಳಗ್ಗೆ ಎರಡೂ ಹೊತ್ತಿಗೆ ತಿನ್ನಬಹುದಾದ ರುಚಿರುಚಿಯಾದ ರೊಟ್ಟಿಗಳ ಪರಿಚಯವನ್ನು ಇಲ್ಲಿ ನೀಡಿದ್ದೇವೆ.

1. ರಾಗಿ ಉಬ್ಬು ರೊಟ್ಟಿ
ಬೇಕಾದ ಸಾಮಗ್ರಿ:
ರಾಗಿ ಹಿಟ್ಟು- 3/4 ಕಪ್‌, ಗೋಧಿ ಹಿಟ್ಟು- 1/4 ಕಪ್‌, ನೀರು- 1 ಕಪ್‌, ಉಪ್ಪು- 1/2 ಚಮಚ

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ಒಂದು ಚಮಚದಷ್ಟು ರಾಗಿ ಹಿಟ್ಟನ್ನು ಸೇರಿಸಿ, ಚೆನ್ನಾಗಿ ಗಂಟಿಲ್ಲದಂತೆ ಕಲಸಿ. ಆಮೇಲೆ ಉಳಿದ ಎರಡೂ ಹಿಟ್ಟುಗಳನ್ನು ಸೇರಿಸಿ, ಸ್ಟೌವ್‌ ಆರಿಸಿಬಿಡಿ. ಚೆನ್ನಾಗಿ ಕಲಸಿ. ತಣ್ಣಗಾದ ಮೇಲೆ ನಾದಿಕೊಂಡು ಉಂಡೆ ಮಾಡಿಟ್ಟುಕೊಳ್ಳಿ. ಚಪಾತಿ ಮಣೆಯ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಉದುರಿಸಿಕೊಂಡು ಅದರ ಮೇಲೆ ಹಿಟ್ಟಿನ ಉಂಡೆ ಇಟ್ಟು ತೆಳುವಾಗಿ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ಎರಡೂ ಬದಿ ಕಾಯಿಸಿ, ಇದು ಚೆನ್ನಾಗಿ ಉಬ್ಬುತ್ತದೆ ಹಾಗೂ ತುಂಬಾ ಸಮಯದವರೆಗೂ ಮೆದುವಾಗಿ ಉಳಿಯುತ್ತದೆ. ಸ್ವಲ್ಪ ಖಾರವಾದ ಪಲ್ಯದೊಂದಿಗೆ ತಿನ್ನಲು ತುಂಬಾ ರುಚಿ.

2. ಅಕ್ಕಿ ಉಬ್ಬು ರೊಟ್ಟಿ
ಬೇಕಾದ ಸಾಮಗ್ರಿ:
ಅಕ್ಕಿ ಹಿಟ್ಟು- 1 ಕಪ್‌,  ನೀರು- 1/2 ಕಪ್‌, ಉಪ್ಪು- 1/2 ಚಮಚ

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ಅದನ್ನು ಅಕ್ಕಿ ಹಿಟ್ಟಿಗೆ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ತಣಿದ ಮೇಲೆ (ಬೇಕಿದ್ದರೆ ನೀರನ್ನು ಹಾಕಿ) ನಾದಿಕೊಂಡು ಉಂಡೆ ಮಾಡಿಟ್ಟುಕೊಳ್ಳಿ. ಚಪಾತಿ ಮಣೆಯ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಉದುರಿಸಿಕೊಂಡು ಅದರ ಮೇಲೆ ಹಿಟ್ಟಿನ ಉಂಡೆ ಇಟ್ಟು ತೆಳುವಾಗಿ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ಎರಡೂ ಬದಿ ಕಾಯಿಸಿ. ಈ ರೊಟ್ಟಿ ಚೆನ್ನಾಗಿ ಉಬ್ಬುತ್ತದೆ ಹಾಗೂ ಮೆದುವಾಗಿ ಬರುತ್ತದೆ. ಸ್ವಲ್ಪ ಖಾರವಾದ ಪಲ್ಯದೊಂದಿಗೆ, ಚಟ್ನಿಯೊಂದಿಗೆ ತಿನ್ನಲು ತುಂಬಾ ರುಚಿ.

3. ಸಬ್ಬಸಿಗೆ ಸೊಪ್ಪಿನ ಅಕ್ಕಿ ರೊಟ್ಟಿ
ಬೇಕಾದ ಸಾಮಗ್ರಿ:
ಸಬ್ಬಸಿಗೆ ಸೊಪ್ಪು- ಒಂದು ಕಟ್ಟು, ಅವಲಕ್ಕಿ- 1/2 ಕಪ್‌, ಅಕ್ಕಿ ಹಿಟ್ಟು- 1 ಕಪ್‌, ನೀರು- 1/2 ಕಪ್‌, ಉಪ್ಪು- 1/2 ಚಮಚ

ಮಾಡುವ ವಿಧಾನ: ಸಬ್ಬಸಿಗೆ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಒಂದು ದೊಡ್ಡ ಬೌಲ್ನಲ್ಲಿ ಅಕ್ಕಿಹಿಟ್ಟು, ನೆನೆದ ಅವಲಕ್ಕಿ, ಕಟ್‌ ಮಾಡಿದ ಸಬ್ಬಸ್ಸಿಗೆ ಸೊಪ್ಪು, ಉಪ್ಪು ಹಾಕಿ ಕಲಸಿ. ಒಂದು ಬಾಣಲೆಯಲ್ಲಿ ನೀರು ಹಾಕಿ ಕುದಿಸಿಕೊಂಡು ಅದನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬೌಲ್ಗೆ ಸೇರಿಸಿಕೊಂಡು ಹದವಾಗಿ ಹಿಟ್ಟನ್ನು ಕಲಸಿಡಿ. ಇದರಿಂದ ಐದು ದೊಡ್ಡ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. ಈಗ ಒಂದು ಒದ್ದೆ ಬಟ್ಟೆಯ ಮೇಲೆ ಉಂಡೆಯನ್ನು ಇಟ್ಟು, ಕೈಯಿಂದ ರೊಟ್ಟಿ ತಟ್ಟಿ. ಎಷ್ಟು ಸಾಧ್ಯವೋ ಅಷ್ಟು ತೆಳುವಾಗಿ ತಟ್ಟಿಕೊಳ್ಳಿ. ನಂತರ ಕಾಯ್ದ ಹೆಂಚಿನ ಮೇಲೆ ಹಾಕಿ, ಬಟ್ಟೆಯನ್ನು ನಿಧಾನವಾಗಿ ಎಳೆಯಿರಿ. ಎರಡೂ ಕಡೆ ಕಾಯಿಸಿ ಪಲ್ಯ, ಚಟ್ನಿಯೊಂದಿಗೆ ಸವಿಯಿರಿ. ಈ ರೊಟ್ಟಿ ಉಬ್ಬುವುದಿಲ್ಲ. ಅವಲಕ್ಕಿ ಹಾಕುವುದರಿಂದ ರೊಟ್ಟಿ ಮೃದುವಾಗುವುದು.

4. ಉಪ್ಪು ಸೊಳೆ ರೊಟ್ಟಿ
ಬೇಕಾದ ಸಾಮಗ್ರಿ:
ಉಪ್ಪು ಸೊಳೆ- 1 ಕಪ್‌, ತೆಂಗಿನ ತುರಿ- 1/2 ಕಪ್‌, ಜೀರಿಗೆ- 1 ಚಮಚ, ಹಸಿಮೆಣಸು- 3, ಅಕ್ಕಿ ಹಿಟ್ಟು- 1/2 ಕಪ್‌ ಉಪ್ಪು- ಬೇಡ

ಮಾಡುವ ವಿಧಾನ: ಉಪ್ಪು ಸೊಳೆಯನ್ನು 2 ರಿಂದ 3 ಗಂಟೆ ನೀರಿನಲ್ಲಿ ನೆನೆಸಿ ಅದರ ನೀರನ್ನು ಅಗಾಗ ಬದಲಾಯಿಸಿ. ಇದು ಅದರಲ್ಲಿರುವ ಹೆಚ್ಚಿನ ಉಪ್ಪನ್ನು ತೆಗೆಯಲು ಸಹಾಯಕ. ರಾತ್ರಿಯಿಡೀ ಕೂಡ ಅದನ್ನು ನೀರಲ್ಲಿ ಹಾಕಿಡಬಹುದು. ಈ ಸೊಳೆಗಳನ್ನು ತೆಂಗಿನತುರಿ, ಜೀರಿಗೆ, ಹಸಿಮೆಣಸಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅಕ್ಕಿ ಹಿಟ್ಟು ಸೇರಿಸಿ ಕಲಸಿಕೊಳ್ಳಿ. ಹಿಟ್ಟು ತುಂಬಾ ಗಟ್ಟಿಯೂ, ತೆಳುವೂ ಅಲ್ಲದೆ ಹದವಾಗಿರಬೇಕು.

ಅಕ್ಕಿ ಹಿಟ್ಟನ್ನು ಹಾಗೆ ಹೊಂದಿಸಿಕೊಳ್ಳಿ. ಈ ಹಿಟ್ಟಿನಿಂದ ಐದು ದೊಡ್ಡ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. ಈಗ ಒಂದು ಒದ್ದೆ ಬಟ್ಟೆಯ ಮೇಲೆ ಉಂಡೆಯನ್ನು ಇಟ್ಟು, ಕೈಯಿಂದ ರೊಟ್ಟಿ ತಟ್ಟಿ. ಎಷ್ಟು ಸಾಧ್ಯವೋ ಅಷ್ಟು ತೆಳುವಾಗಿ ತಟ್ಟಿಕೊಳ್ಳಿ. ನಂತರ ಕಾಯ್ದ ಹೆಂಚಿನ ಮೇಲೆ ಹಾಕಿ, ಬಟ್ಟೆಯನ್ನು ನಿಧಾನವಾಗಿ ಎಳೆಯಿರಿ. ಎರಡೂ ಕಡೆ ಕಾಯಿಸಿ ಪಲ್ಯ, ಚಟ್ನಿಯೊಂದಿಗೆ ಸವಿಯಿರಿ. ಈ ರೊಟ್ಟಿ ಕೂಡ ಉಬ್ಬುವುದಿಲ್ಲ ಆದರೆ ಮೃದುವಾಗಿರುತ್ತದೆ.

ವಿ. ಸೂಚನೆ: ಬಲಿತ ಹಲಸಿನಕಾಯಿಯ ಸೊಳೆಗಳನ್ನು ಉಪ್ಪು ಹಾಕಿ ಸಂರಕ್ಷಿಸಿ ಇಟ್ಟರೆ, ಸೀಜನ್‌ ಇರದ ಕಾಲದಲ್ಲಿ ತಿನ್ನಬಹುದು. ಈ ಪದ್ದತಿ ದಕ್ಷಿಣಕನ್ನಡ ಮತ್ತು ಮಲೆನಾಡಿನ ಕಡೆ ಇದೆ. ಅಂಥ ಸೊಳೆಗಳನ್ನು ಉಪ್ಪು ಸೊಳೆ ಎಂದು ಕರೆಯುತ್ತಾರೆ.

* ಸುಮನ್‌, ದುಬೈ

ಟಾಪ್ ನ್ಯೂಸ್

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.