ತನುಶ್ರೀ ಸಿಡಿಸುವ ಮೀ ಟೂ ಬಾಂಬ್‌


Team Udayavani, Mar 8, 2019, 12:30 AM IST

q-21.jpg

ಇನ್ಸ್‌ಪಿರೇಷನ್‌ ಕಿರುಚಿತ್ರದಲ್ಲಿ ಬಾಲಿವುಡ್‌ನ‌ ಲೈಂಗಿಕ ಕಿರುಕುಳದ ಕಥೆ ಬಿಚ್ಚಿಡಲಿದ್ದಾರಂತೆ ತನುಶ್ರೀ ದತ್ತಾ!
ಕಳೆದ ವರ್ಷ ಬಾಲಿವುಡ್‌ನ‌ಲ್ಲಿ “ಮೀ ಟೂ’ ಆರೋಪ ಮಾಡಿ ಸುದ್ದಿಯಾಗಿದ್ದ ಬಾಲಿವುಡ್‌ ನಟಿ ತನುಶ್ರೀ ದತ್ತಾ, ಈ ವರ್ಷ ಕೂಡ ಮತ್ತೆ ಅದೇ ವಿಷಯದ ಮೂಲಕ ಸುದ್ದಿಯಾಗುವ ಸುಳಿವನ್ನು ನೀಡಿದ್ದಾರೆ. ಹೌದು, ಸದ್ಯಕ್ಕೆ ಬಾಲಿವುಡ್‌ನ‌ಲ್ಲಿ “ಮೀ ಟೂ’ ವಿವಾದ ಕೊಂಚ ಮಟ್ಟಿಗೆ ತಣ್ಣಗಾಗಿದೆ. ಆದರೆ ತನುಶ್ರೀ ದತ್ತಾ ಮಾತ್ರ ತಾವು ಮಾಡಿರುವ “ಮೀ ಟೂ’ ಆರೋಪವನ್ನು ಅಷ್ಟು ಸುಲಭವಾಗಿಬಿಡುವಂತೆ ಕಾಣುತ್ತಿಲ್ಲ. ಸದ್ಯ ತನುಶ್ರೀ ಮಾಡಿರುವ “ಮೀ ಟೂ’ ಆರೋಪ ನ್ಯಾಯಾಲಯದ ಅಂಗಳದಲ್ಲಿದೆ. ಇದರ ನಡುವೆಯೇ ತನುಶ್ರೀ ಬಾಲಿವುಡ್‌ನ‌ಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ, ಮಹಿಳಾ ದೌರ್ಜನ್ಯವನ್ನು ಇನ್ಸ್‌ಪಿರೇಷನ್‌ ಎನ್ನುವ ಹೆಸರಿನ ಕಿರುಚಿತ್ರದ ಮೂಲಕ ತೆರೆದಿಡಲು ಸಜ್ಜಾಗಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ತನುಶ್ರೀ ಇನ್ಸ್‌ಪಿರೇಷನ್‌ ಕಿರುಚಿತ್ರದ ತಯಾರಿಯನ್ನು ನಡೆಸುತ್ತಿದ್ದು, ಸದ್ಯ ಈ ಕಿರುಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದೆ. ಇನ್ನು ಈ ಕಿರುಚಿತ್ರಕ್ಕೆ ಸ್ವತಃ ತನುಶ್ರೀ ದತ್ತಾ ಅವರೇ ಸಂಭಾಷಣೆಯನ್ನು ಬರೆದಿದ್ದು, ಚಿತ್ರರಂಗದಲ್ಲಿ ಅವರು ಲೈಂಗಿಕ ಕಿರುಕುಳದ ಸಂದರ್ಭದಲ್ಲಿ ಎದುರಿಸಿದ್ದ ಮಾತುಗಳು, ಪ್ರಶ್ನೆಗಳನ್ನೇ ಈ ಚಿತ್ರದ ಸಂಭಾಷಣೆಯಲ್ಲೂ ಬಳಸಿಕೊಂಡಿದ್ದಾರಂತೆ.

ಅಂದ ಹಾಗೆ, ಇದೇ ಮಾರ್ಚ್‌ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಸೋಷಿಯಲ್‌ ಮೀಡಿಯಾಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಇನ್ಸ್‌ ಪಿರೇಷನ್‌ ಕಿರುಚಿತ್ರ ಬಿಡುಗಡೆಯಾಗಲಿದೆ.

ತಮ್ಮ ಇನ್ಸ್‌ಪಿರೇಷನ್‌ ಕಿರುಚಿತ್ರದ ಬಗ್ಗೆ ಮಾತನಾಡುವ ತನುಶ್ರೀ ದತ್ತಾ, “ಬಹಳ ಸಮಯದಿಂದಲೂ ಲೈಂಗಿಕ ಕಿರುಕುಳದಂಥ ಸೂಕ್ಷ್ಮ ವಿಚಾರವನ್ನು ಸಮಾಜದ ಮುಂದೆ ಹೇಳಬೇಕು ಎಂದುಕೊಂಡಿದ್ದೆ. ಆದರೆ ನಾನು ಅದನ್ನು ಹೇಳಲು ಮುಂದಾದಾಗ ನನ್ನ ಹೇಳಿಕೆಗೆ ಬೇರೆ ಅರ್ಥಗಳನ್ನು ಕಲ್ಪಿಸಲಾಯಿತು. ನನ್ನ ಭಾವನೆಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಕಿರುಚಿತ್ರದ ಮೂಲಕ ನಾನು ಹೇಳಬೇಕು ಎಂದುಕೊಂಡಿರುವ ವಿಷಯವನ್ನು ಹೇಳಲಿದ್ದೇನೆ. ಬಾಲಿವುಡ್‌ನ‌ಲ್ಲಿ ನಡೆದ ಮತ್ತು ನಡೆಯುತ್ತಿರುವ ಲೈಂಗಿಕ ಕಿರುಕುಳ ವಿಷಯವೇ ಈ ಕಿರುಚಿತ್ರದ ಕಥಾವಸ್ತು. ಹೊಸದಾಗಿ ಚಿತ್ರೋದ್ಯಮಕ್ಕೆ ಕಾಲಿಡುವ ಯುವತಿಯರ ಮೇಲಾಗುವ ದೌರ್ಜನ್ಯವನ್ನು ಈ ಕಿರುಚಿತ್ರ ಬಿಚ್ಚಿಡಲಿದೆ. ಕೇವಲ  ಚಿತ್ರರಂಗ ಮಾತ್ರವಲ್ಲದೆ, ಸರಿಯಾದ ಮಾರ್ಗದರ್ಶಕರು, ಸೂಕ್ತ ಮಾರ್ಗದರ್ಶನ ಇಲ್ಲದಿದ್ದರೆ ಇತರ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಹೇಗೆ ಶೋಷಣೆಗೆ ಒಳಗಾಗುತ್ತಾರೆ ಅನ್ನೋದನ್ನೂ ಈ ಕಿರುಚಿತ್ರ ಹೇಳಲಿದೆ’ ಎನ್ನುತ್ತಾರೆ.

ಒಟ್ಟಾರೆ ತನುಶ್ರೀ ದತ್ತಾ, ಇನ್ಸ್‌ಪಿರೇಷನ್‌ ಕಿರುಚಿತ್ರದಲ್ಲಿ ಏನೇನು ಇರಲಿದೆ, ಇದರ ಮೂಲಕ ಮತ್ತೆ ಇನ್ಯಾವ ವಿವಾದಗಳು ಶುರುವಾಗುತ್ತವೆಯೋ, ಬಾಲಿವುಡ್‌ ಮತಾöವ ಪ್ರಖ್ಯಾತರ ಹೆಸರುಗಳು  ಮಾರ್ಚ್‌ 8, ಅಂದರೆ ಇಂದು ಹೊರಬೀಳಬಹುದು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.