CONNECT WITH US  

ಮೋದಿ,ಷರೀಫ್ "ಹಾಯ್‌, ಹಲೋ':ಸನಿಹದಲ್ಲೇ ಇದ್ದರೂ ಮಾತನಾಡಲಿಲ್ಲ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಮಂಗಳವಾರ ನಡೆದ ಶಾಂತಿಪಾಲನಾ ಶೃಂಗಸಭೆಯಲ್ಲಿ ಎದುರು- ಬದುರು ಕುಳಿತಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರು ಪರಸ್ಪರ ಹಸ್ತಲಾಘವ ಮಾಡಲಿಲ್ಲ. ಅನೌಪಚಾರಿಕವಾಗಿಯೂ ಮಾತುಕತೆ ನಡೆಸಲಿಲ್ಲ. ಅದರ ಬದಲು, ದೂರದಿಂದಲೇ ಕೈಬೀಸಿ ಇಬ್ಬರೂ ನಾಯಕರು ಉಭಯ ಕುಶಲೋಪರಿ ಶಾಸ್ತ್ರ ಮುಗಿಸಿದರು.

ಸಭೆಗೆ ಮೊದಲೇ ಆಗಮಿಸಿದ ಮೋದಿ, ಕುದುರೆ ಲಾಳಾಕೃತಿಯಂತಿದ್ದ ಆಸನ ವ್ಯವಸ್ಥೆಯಲ್ಲಿ ಬಲಭಾಗ ಹೋಗಿ ಕುಳಿತರು. ಅದಾದ ಕೆಲವೇ ನಿಮಿಷಗಳಲ್ಲಿ ಮೋದಿ ಅವರು ಕುಳಿತಿದ್ದ ಕಡೆಯಿಂದಲೇ ಆಗಮಿಸಿದ ಷರೀಫ್ ಅವರು ಎಡಭಾಗದಲ್ಲಿ ಕುಳಿತುಕೊಂಡರು. ಈ ವೇಳೆ ಇಬ್ಬರೂ ನಾಯಕರು ಪರಸ್ಪರ ನಗಲೂ ಇಲ್ಲ. ಕೈಬೀಸಲೂ ಇಲ್ಲ. 

ಕಾರ್ಯಕ್ರಮ ಆರಂಭವಾಗಬೇಕು ಎನ್ನುವಷ್ಟರಲ್ಲಿ ಮೋದಿಯತ್ತ ಷರೀಫ್ ಕೈಬೀಸಿದರು. ಇದನ್ನು ಗಮನಿಸಿದ ಮೋದಿ ಕೂಡ ನಗುತ್ತಾ ಕೈ ಎತ್ತಿ ಅಲ್ಲಾಡಿಸಿದರು. ಅದಾದ ತರುವಾಯ ಕೈಬೀಸುವ ಸರತಿ ಮೋದಿ ಅವರದಾಗಿತ್ತು. ಷರೀಫ್ ಅದನ್ನು ನೋಡಿ ತಲೆಯಾಡಿಸಿ ನಕ್ಕರು. ಒಬ್ಬರು ಮತ್ತೂಬ್ಬರ ಹತ್ತಿರ ಹೋಗಿ ಮಾತಾಡಲೂ ಇಲ್ಲ. ಆದರೆ  ಪರಸ್ಪರರು ತಮ್ಮ ಭಾಷಣ ಮುಗಿಸಿದಾಗ ಚಪ್ಪಾಳೆ ಹೊಡೆಯುವುದನ್ನು ಮರೆಯಲಿಲ್ಲ.

Trending videos

Back to Top