CONNECT WITH US  

ಪನಾಮಾ ಗೇಟ್‌:ಷರೀಫ್ ಪುತ್ರಿಯಿಂದ ಸುಳ್ಳು ದಾಖಲೆ ಪತ್ರ ಸಲ್ಲಿಕೆ:ವರದಿ

ಇಸ್ಲಾಮಾಬಾದ್‌ : ಪನಾಮಾಗೇಟ್‌ ಭ್ರಷ್ಟಾಚಾರ ಹಗರಣ ತನಿಖೆ ನಡೆಸಿರುವ ಜಂಟಿ ತನಿಖಾ ತಂಡವು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರ ಪುತ್ರಿ ಮರ್ಯಾಮ್‌ ನವಾಜ್‌ ಸುಳ್ಳು ಹಾಗೂ ತಿರುಚಲ್ಪಟ್ಟ ದಾಖಲೆ ಪತ್ರಗಳನ್ನು ಸಲ್ಲಿಸಿರುವುದಾಗಿ ಹೇಳಿದೆ. 

ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾಗಿರುವರೆನ್ನಲಾದ ಪನಾಮಾ ಗೇಟ್‌ ಭ್ರಷ್ಟಾಚಾರದ ತನಿಖೆ ನಡೆಸುವುದಕ್ಕೆ ಪಾಕ್‌ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ಜಂಟಿ ತನಿಖಾ ತಂಡ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. 

1999 ನ್ಯಾಶನಲ್‌ ಅಕೌಂಟೆಬಿಲಿಟಿ ಆರ್ಡಿನೆನ್ಸ್‌ (ಎನ್‌ಎಬಿ) ಇದರ ಅಡಿ ಪ್ರಧಾನಿ ನವಾಜ್‌ ಷರೀಫ್, ಅವರ ಪುತ್ರರಾದ ಹಸನ್‌ ನವಾಜ್‌ ಮತ್ತು ಹುಸೇನ್‌ ನವಾಜ್‌ ಮಾತ್ರವಲ್ಲದೆ ಪುತ್ರಿ ಮರ್ಯಾಮ್‌ ವಿರುದ್ಧ ಭ್ರಷ್ಟಾಚಾರದ ಕೇಸನ್ನು ದಾಖಲಿಸುವಂತೆ ಜೆಐಟಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. 
 

Trending videos

Back to Top