ಎನ್‌ಸಿಸಿ ಮಧುರ ನೆನಪು


Team Udayavani, Feb 8, 2019, 12:30 AM IST

14.jpg

ದೇಶಾಭಿಮಾನ, ಸಾಹಸ, ನಾಯಕತ್ವ ಗುಣ, ರಾಷ್ಟ್ರೀಯತೆಯನ್ನು ಹುರಿದುಂಬಿಸುವ ಎನ್‌ಸಿಸಿಯಲ್ಲಿ, ತೊಡಗಿಕೊಳ್ಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಂಟೆದೆ ಬೇಕು. ಸೇನಾಶಿಸ್ತಿನಲ್ಲಿ ನಡೆಯುವ ವಿವಿಧ ತರಬೇತಿ, ಕ್ಯಾಂಪ್‌ಗ್ಳಲ್ಲಿ ವಿವಿಧ ಹಂತಗಳಿಗೆ ಅರ್ಹತೆ ಪಡೆಯುವುದು ಕೂಡಾ ಒಂದು ದೊಡ್ಡ ಹೋರಾಟವೇ. ಇಂತಹ ಆಳ ಸಮುದ್ರದಲ್ಲಿ ಈಜುವುದೇ ಕಷ್ಟಕರ. ಅಂತಹ ಅನುಭವ ನನ್ನ ಅಕ್ಕನಿಗಾಗಿದೆ.

ಅವಳ ಮೊದಲ ಪಯಣ ಅವಳಿಗೆ ಅರಿಯದಂತೆ ಅವಳನ್ನ ಈ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿತು. ಏನೂ ಅರಿಯದೆ ಮಗು ಹೇಗೆ ಶಾಲೆಗೆ ಹೋಗಿ ತನ್ನ ವಿದ್ಯೆಯನ್ನು ಕಲಿತುಕೊಳ್ಳುತ್ತದೆಯೋ, ಅದೇ ರೀತಿಯ ಪರಿಸ್ಥಿತಿ ಅವಳೊಳಗೂ ನಡೆಯಿತು. ಎನ್‌ಸಿಸಿ ಎಂದರೆ ಏನೆಂಬುದನ್ನು ಅರಿಯದ ಅವಳು, ಎನ್‌ಸಿಸಿಯಲ್ಲಿ ಭಾಗವಹಿಸಿ, ಅದರಲ್ಲಿ ಮುನ್ನಡೆಯುತ್ತಾಳೆ ಎಂಬುದು ಕನಸಿನ ಮಾತಾಗಿತ್ತು.

ಆ ಕನಸು ಈ ದಿನ ಅವಳಿಗೆ ಸುಖಮಯ ದಾರಿಯನ್ನು ತೋರಿಸಿದೆ. ವಾವ್‌! ಆ ರಸಮಯ ಕ್ಷಣಗಳನ್ನು ನೆನೆಸಿಕೊಂಡರೆ ಮೈಯಲ್ಲಿ ವಿದ್ಯುತ್‌ ಸಂಚರಿಸಿದಂಥ ಅನುಭವ! ಎನ್‌ಸಿಸಿ ಎನ್ನುವುದು ದೇಶಸೇವೆಯ ಭಾಗ. ಭೇದಭಾವ ಎಣಿಸದೆ ಎಲ್ಲರನ್ನು ತನ್ನತ್ತ ಸೆಳೆಯುವ ಮಾಯೆ ಅದಕ್ಕಿದೆ.

ಏಕತೆ ಮತ್ತು ಅನುಶಾಸನ ಎಂಬೆರಡು ಆಶಯಗಳನ್ನು  ಹೊಂದಿರುವ ಈ ಎನ್‌ಸಿಸಿಯಲ್ಲಿ 1949ರಂದು ದೇಶದ ಪ್ರಗತಿಗೋಸ್ಕರ, ಹೆಣ್ಣುಮಕ್ಕಳ ಹಿತಕ್ಕೋಸ್ಕರ ಎಲ್ಲ ಯುನಿವರ್ಸಿಟಿ/ಕಾಲೇಜು/ಶಾಲೆಗಳಲ್ಲಿ ಗರ್ಲ್ಸ್‌ ಡಿವಿಜನ್‌ ತೆರೆದುಕೊಳ್ಳಲು ಸೂಚಿಸಲಾಗಿದೆ. ಈ ಎನ್‌ಸಿಸಿಯು ಶಿಸ್ತು, ಸಮಯಪ್ರಜ್ಞೆ, ನಾಯಕತ್ವದ ಗುಣಗಳು ಪ್ರತಿ ವಿದ್ಯಾರ್ಥಿಯಲ್ಲಿ ನಿಜವಾದ ಅರಿವು ಮೂಡಿಸುತ್ತದೆ. ಇಲ್ಲದೆ ಇಂತಹ ಗುಣಗಳಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನವನ್ನು ರೂಪಿಸುವಲ್ಲಿ ಯಶಸ್ಸನ್ನು ಕಾಣುತ್ತಾನೆ.

ತಾಯಿ ಹೇಗೆ ಮೊದಲ ಗುರುವೋ, ಹಾಗೆಯೇ ಎನ್‌ಸಿಸಿಯೂ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಗುರುವಿನ ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿ ತೊಡಗಿಸಿಕೊಳ್ಳುವುದೇ ಹೆಮ್ಮೆ ಸಂಗತಿ. ಅಲ್ಲದೆ ವಿವಿಧ ರೀತಿಯ ಕ್ಯಾಂಪ್‌ಗ್ಳಲ್ಲಿ ಭಾಗವಹಿಸಿ ಅದರಿಂದ ಪಡೆಯುವ ಜ್ಞಾನ  ದಾರಿದೀಪವಾಗುವುದಂದೂ ಖಂಡಿತ. ಮಾತ್ರವಲ್ಲದೆ, ಈ ತರದ ಶಿಬಿರಗಳನ್ನು ಮಾಡುವುದರಿಂದ ಮಕ್ಕಳ ಪ್ರತಿಭೆಗಳೂ ಬೆಳಕಿಗೆ ಬರುತ್ತವೆ.

ನನ್ನಕ್ಕನ‌ ಎನ್‌ಸಿಸಿಯ ಮೊದಲ ಅದೃಷ್ಟದ ಪಯಣ ಬ್ರಹ್ಮಾವರದಿಂದ ಶುಭಾರಂಭಗೊಂಡು, ಬಾಳೆಹೊನ್ನೂರು, ಶಿವಮೊಗ್ಗ, ಮಡಿಕೇರಿ ಕ್ಯಾಂಪ್‌ಗ್ಳಿಗೂ ಆಯ್ಕೆಗೊಂಡಳು. ಇದರ ನಡುವೆಯೂ ಶಾಲಾ ಪರೀಕ್ಷೆಗಳನ್ನು ಎದುರಿಸಿದಳು. ಅವಳ ಒಳಮನಸ್ಸು  ಹೇಳುತ್ತಿತ್ತು, ನಿನ್ನ ಯಶಸ್ಸು ನಿನ್ನ ಕೈಯಲ್ಲಿದೆ ಎಂದು. ಅದರಂತೆ ಅವಳು ಮುಂದುವರಿದಳು. ಮುಂದೆ ಅವಳ ಪಯಣ ಬೆಂಗಳೂರು ಕ್ಯಾಂಪ್‌ನತ್ತಲೂ ತಿರುಗಿತು.

ಬಳಿಕ ಒಂದು ತಿಂಗಳು ನವದೆಹಲಿಯಲ್ಲಿ ನಡೆಯುವ ಶಿಬಿರದಲ್ಲೂ ಪಾಲ್ಗೊಂಡಳು. ಈ ಶಿಬಿರವು ದೇಶದ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿರುವ ಪ್ರತಿಭಾವಂತ‌ರನ್ನು ಕರೆಸಿ ಅವರ ಸಾಮರ್ಥ್ಯವನ್ನು ಬೆಳಕಿಗೆ ತರುವಲ್ಲಿ ಶ್ರಮಿಸುತ್ತದೆ. ಡಿಸೆಂಬರ್‌ 28 ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾದವರ ಪಟ್ಟಿ ಹೊರಬಂದಾಗ ಅದರಲ್ಲಿ ನನ್ನಕ್ಕನ ಹೆಸರೂ ಇತ್ತು. ಅವಳು ಆಯ್ಕೆಯಾಗಿದ್ದಳು. ಆಯ್ಕೆಯ ಪಟ್ಟಿ ಹೊರಬೀಳುತ್ತಿದ್ದಂತೆ ಎತ್ತ ನೋಡಿದರೂ ಎಲ್ಲ ಅವಳಿಗೆ ಶುಭ ಹಾರೈಸುವವರೇ!

ಜನವರಿ 26, 2014 ಗಣರಾಜ್ಯೋತ್ಸವದಂದು ನಡೆದ ರಜಪತ್‌ ಪರೇಡ್‌ನ‌ಲ್ಲಿ ಭಾಗವಹಿಸುವ ಅವಕಾಶ ಹಾಗೂ ಜನವರಿ 28ರಂದು ನಡೆದ ಪ್ರಧಾನಮಂತ್ರಿ ರ್ಯಾಲಿಯಲ್ಲಿ ಟೇಬಲ್‌ ಡ್ರಿಲ್ ಮಾಡುವ ಅವಕಾಶವು ಅವಳದ್ದಾಗಿತ್ತು ಎಂದು ಹೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ.

ಅಶ್ವಿ‌ತಾ ಎಸ್‌. ಶೆಟ್ಟಿ
ಅಂತಿಮ ಪತ್ರಿಕೋದ್ಯಮ, ಭಂಡಾರ್‌ಕಾರ್ಸ್‌ ಕಾಲೇಜು, ಕುಂದಾಪುರ 

 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.