CONNECT WITH US  

ವಕೀಲನ ಲುಕ್‍ನಲ್ಲಿ ವಿನಯ್: ಬ್ಯೂಟಿಫುಲ್‍ ಟ್ರೈಲರ್ ವೀಕ್ಷಿಸಿ

ವಿನಯ್ ರಾಜಕುಮಾರ್ ಅಭಿನಯದ "ಅನಂತು v/s ನುಸ್ರತ್' ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಸದ್ದು ಮಾಡಿತ್ತು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ಹೌದು! 1ನಿಮಿಷ 37 ಸೆಕೆಂಡ್‌ಗಳ ಟ್ರೈಲರ್‌ ಹಾಸ್ಯದ ಜೊತೆಗೆ ಜಡ್ಜ್‌ ಮತ್ತು ಲಾಯರ್‌ ನಡುವಿನ ಕ್ಯೂಟ್‌ ಲವ್‌ ಸ್ಟೋರಿಯ ಝಲಕ್ ತೋರಿಸಿದೆ. ಅಲ್ಲದೇ ಅಪ್ಪ ಮಗನ ನಡುವೆ ಕೋಪ - ಜಗಳ, ಇದರ ಮಧ್ಯೆ ನಟ ಗುರುಪ್ರಸಾದ್, ರವಿಶಂಕರ್‌ ಕಾಮಿಡಿ. ಎಲ್ಲವೂ ಚಿತ್ರ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಅನ್ನೋ ಸುಳಿವನ್ನು ನೀಡಿದೆ. ಇನ್ನು ಸ್ಯಾಂಡಲ್​ವುಡ್​ನಲ್ಲಿ ಒಂದು ಸೂಪರ್​ ಹಿಟ್​ನ ನಿರೀಕ್ಷೆಯಲ್ಲಿರುವ ವಿನಯ್ ಈ ಬಾರಿ ಕರಿ ಕೋಟು ಧರಿಸಿ ವಕೀಲನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಕೀಲ ಅನಂತ ಕೃಷ್ಣ ಎಂಬ ಪಾತ್ರದಲ್ಲಿ ಅಭಿನಯಿಸಿರುವ ವಿನಯ್​ಗೆ ಲತಾ ಹೆಗ್ಡೆ ನಾಯಕಿಯಾಗಿದ್ದಾರೆ. ವಿನಯ್ ಇಲ್ಲಿ ಸಾಮಾನ್ಯ ವಕೀಲನಾದರೆ ಲತಾ ಹೆಗ್ಡೆ ಜಡ್ಜ್ ಪಾತ್ರಧಾರಿ ನುಸ್ರತ್ ಫಾತಿಮಾ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಮಿಶ್ರಿತ ನವಿರಾದ ಪ್ರೇಮಕಥೆಯಾಗಿದ್ದು, ಜಡ್ಜ್​ಗೆ ಮನಸೋತಿರುವ ವಕೀಲನ ಕಥೆ ಈ ಚಿತ್ರದಲ್ಲಿರಲಿದೆ. ಈ ಸಿನಿಮಾವನ್ನು ಸುಧೀರ್ ಶಾನುಭೋಗ್ ನಿರ್ದೇಶಿಸಿದ್ದು, ಈಗಾಗಲೇ "ಕೋರ್ಟ್​ಗೆ ಬಂದವಳು ಹಾರ್ಟ್​ಗೆ ಬರ್ಬಾದು ಅಂತ ಏನಾದರೂ ಕಾನೂನಿದೆಯಾ...' ಎಂಬ ಡೈಲಾಗ್​ ಸಖತ್ತಾಗೆ ವರ್ಕೌಟ್ ಆದಂತಿದೆ. ಮಾಣಿಕ್ಯ ಪ್ರೊಡಕ್ಷನ್ ನಿರ್ಮಿಸಿರುವ ಈ ಚಿತ್ರದಲ್ಲಿ ರವಿಶಂಕರ್, ಗುರು ಪ್ರಸಾದ್, ಅಶೋಕ್ ಸೇರಿದಂತೆ ಬಹುತಾರಗಣವಿದ್ದು, ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ತಾರಾಗಣದಲ್ಲಿ ರವಿಶಂಕರ್, ಬಿ ಸುರೇಶ್, ಗುರು ಪ್ರಸಾದ್, ಸುಚೀಂದ್ರ ಪ್ರಸಾದ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಬ್ಯೂಟಿಫುಲ್‍ ಟ್ರೈಲರ್ ವೀಕ್ಷಿಸಿ.

Back to Top