CONNECT WITH US  

ಶ್ರೀಮುರಳಿಯ ಹೊಸ "ಭರಾಟೆ': ಭರ್ಜರಿ ಟೀಸರ್ ವೀಕ್ಷಿಸಿ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ "ಭರಾಟೆ' ಚಿತ್ರದ ಫೋಟೋಶೂಟ್ ರಾಜಸ್ತಾನದ ಮರುಭೂಮಿಯಲ್ಲಿ ಮಾಡಿದ್ದು, ಇದೀಗ ಚಿತ್ರದ ಫಸ್ಟ್ ಲುಕ್ ಮೇಕಿಂಗ್ ಟೀಸರ್ ಬಿಡುಗಡೆಯಾಗಿದೆ, ಅಲ್ಲದೇ ರಾಜಸ್ತಾನದ ಮರುಭೂಮಿಯಲ್ಲಿ ಫೋಟೋ ಶೂಟ್ ಮಾಡಿದ ಮೊದಲ ಕನ್ನಡ ಚಿತ್ರವಾಗಿದೆ. ಫಸ್ಟ್ ಲುಕ್ ಟೀಸರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಚಿತ್ರದಲ್ಲಿ ಶ್ರೀಮುರಳಿಯವರಿಗೆ ಜೋಡಿಯಾಗಿ "ಕಿಸ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀಲೀಲಾ ಅವರು ನಟಿಸಿದ್ದು, ಚಿತ್ರದ ಫೋಟೋ ಶೂಟ್ ಭುವನ್ ಗೌಡ ಮಾಡಿದ್ದಾರೆ. ಚಿತ್ರದ ಟೀಸರ್ ಸಿನಿಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಚಿತ್ರವನ್ನು ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಬಹುಬೇಡಿಕೆಯಲ್ಲಿರುವ ನಿರ್ದೇಶಕ ಚೇತನ್ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಸುಪ್ರೀತ್ ನಿರ್ಮಾಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಚಿತ್ರದ ಭರ್ಜರಿ ಟೀಸರ್ ವೀಕ್ಷಿಸಿ.

Back to Top