CONNECT WITH US  
echo "sudina logo";

​​​​​​​ಮತ್ತೊಂದು "ಎಡಕಲ್ಲು ಗುಡ್ಡ': ಬೊಂಬಾಟ್ ಟ್ರೈಲರ್ ವೀಕ್ಷಿಸಿ

ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಎಡಕಲ್ಲು ಗುಡ್ಡದ ಮೇಲೆ' ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು ನಿಮಗೆ ಗೊತ್ತೇ ಇದೆ. ಈಗ ಅದೇ ಟೈಟಲ್‍ನಡಿ ಹೊಸಬರ ತಂಡವೊಂದು ಸಿನಿಮಾ ಮಾಡಿದೆ. ಆ ಚಿತ್ರ ಇಂದು ತೆರೆಕಾಣುತ್ತಿದೆ. ವಿವಿನ್ ಸೂರ್ಯ ಹೊಸ "ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಈ ಚಿತ್ರಕ್ಕೂ ಪುಟ್ಟಣ್ಣ ಕಣಗಾಲ್ ಅವರ "ಎಡಕಲ್ಲು'ಗೂ ಯಾವುದೇ ಸಂಬಂಧವಿಲ್ಲ. ಪ್ರಕಾಶ್ ಎನ್ನುವವರು ಈ ಸಿನಿಮಾದ ನಿರ್ಮಾಪಕರು. ಇದು ನಾಯಕಿ ಪ್ರಧಾನ ಚಿತ್ರ. ಚಿತ್ರದಲ್ಲಿ ಸ್ವಾತಿ ಶರ್ಮಾ ಎಂಬ ಹೊಸ ಹುಡುಗಿ ನಾಯಕಿ. ಇಡೀ ಕಥೆ ಈಕೆಯ ಸುತ್ತವೇ ಸುತ್ತುತ್ತದೆಯಂತೆ. ಚಿತ್ರದಲ್ಲಿ ನಕುಲ್ ನಾಯಕರಾಗಿ ನಟಿಸಿದ್ದಾರೆ. ದತ್ತಣ್ಣ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರಕ್ಕೆ ಕೆಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಬಂದಿರೋದು ಕೂಡಾ ಚಿತ್ರತಂಡ ಮೇಲಿನ ವಿಶ್ವಾಸ ಹೆಚ್ಚಿಸಿದೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.

Back to Top