ಕಿರಾಣಿ ಅಂಗಡಿಗಳಿಗೆ ‘ಗುರಾಣಿ’

Team Udayavani, Nov 21, 2019, 7:16 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನವದೆಹಲಿ: ದೇಶಾದ್ಯಂತ ಕಿರಾಣಿ ಅಂಗಡಿ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ‘ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ಕಾನೂನು’ ರೂಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಮಾರುಕಟ್ಟೆ ದೈತ್ಯ ಕಂಪನಿಗಳಾದ ಅಮೆಜಾನ್‌ ಹಾಗೂ ಪ್ಲಿಫ್ಕಾರ್ಟ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರಳೀಕೃತ ನಿಯಮಗಳನ್ನು ರೂಪಿಸುವ ಮೂಲಕ ವೇದಿಕೆ ಕಲ್ಪಿಸಿಕೊಡಲು ಮುಂದಾಗಿದೆ.

ಈ ಯೋಜನೆಯಡಿ ಒಂದು ಬಾರಿ ನೋಂದಣಿ ಶುಲ್ಕ, ಬಂಡವಾಳಕ್ಕಾಗಿ ತ್ವರಿತ ಸಾಲ, ಎಲೆಕ್ಟ್ರಾನಿಕ್‌ ಪೇಮೆಂಟ್‌ ವ್ಯವಸ್ಥೆ, ಸರಳ ಪರವಾನಗಿ ನವೀಕರಣ ಮತ್ತಿತರ ವ್ಯವಸ್ಥೆ ಕಲ್ಪಿಸಿಕೊಡಲು ತಯಾರಿ ನಡೆಸಲಾಗುತ್ತಿದೆ. ಇದನ್ನು ರಾಜ್ಯಗಳು ಅಳವಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿರಾಣಿ ಹಾಗೂ ಚಿಲ್ಲರೆ ಅಂಗಡಿಗಳು ರಾಜ್ಯವ್ಯಾಪ್ತಿಗೆ ಬರಲಿದ್ದು, ವಿವಿಧ ರಾಜ್ಯಗಳಲ್ಲಿ ಪತ್ಯೇಕ ನಿಯಮಗಳಿವೆ. ಚಿಲ್ಲರೆ ಅಂಗಡಿಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.

ದೇಶಾದ್ಯಂತ 6 ಕೋಟಿಗೂ ಅಧಿಕ ಚಿಲ್ಲರೆ ಅಂಗಡಿಗಳಿದ್ದು, 25 ಕೋಟಿಗೂ ಅಧಿಕ ಮಂದಿಗೆ ಸೇವೆ ಒದಗಿಸುತ್ತಿವೆ. ದೇಶದ ಜಿಡಿಪಿಗೆ ಶೇ.15ರಷ್ಟು ಕೊಡುಗೆ ನೀಡುತ್ತಿವೆ. ಈ ಅಂಗಡಿಗಳ ಪೈಕಿ ಶೇ.65ರಷ್ಟು ಮಂದಿ ಡಿಜಿಟಲ್‌ ವ್ಯವಸ್ಥೆ ಅಳವಡಿಸಿಕೊಂಡಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ