ಗ್ರಾಹಕರ ಮೇಲೆ ಟೆಲಿಕಾಂ ಕಂಪೆನಿಗಳ ಗದಾ ಪ್ರಹಾರ ; ಡಿ.3ರ ಬಳಿಕ ಹೊಸ ದರಗಳು ಅನ್ವಯ

ಕರೆ, ಇಂಟರ್ನೆಟ್‌ ದರಗಳು ಶೇ.42ರಷ್ಟು ಏರಿಕೆ

Team Udayavani, Dec 1, 2019, 7:39 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುಂಬಯಿ: ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಟೆಲಿಕಾಂ ಕಂಪೆನಿಗಳು ಇದೀಗ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿವೆ.

ಡಿ.3ರಿಂದ ಅನ್ವಯವಾಗುವಂತೆ ಹೆಚ್ಚಿನ ಎಲ್ಲ ಟೆಲಿಕಾಂ ಕಂಪೆನಿಗಳು ದರವನ್ನು ಶೇ.42ರಷ್ಟು ಏರಿಕೆ ಮಾಡಿವೆ. ಜಿಯೋ ತನ್ನ ದರವನ್ನು ಶೇ.40ರಷ್ಟು ಏರಿಕೆ ಮಾಡಿದೆ. ಹೊಸದರಗಳು ಡಿ.6ರಿಂದ ಅನ್ವಯವಾಗಲಿರುವುದಾಗಿ ಅದು ಹೇಳಿದೆ.

ಇದರೊಂದಿಗೆ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುವುದಾಗಿ ಹೇಳಿದೆ. ಆಲ್‌ ಇನ್‌ ಒನ್‌ ಎಂಬ ಪ್ಲ್ಯಾನ್‌ ಹೊಸದಾಗಿ ಪರಿಚಯಿಸಲಾಗುತ್ತಿದ್ದು, ಅನ್‌ಲಿಮಿಟೆಡ್‌ ಕರೆ ಮತ್ತು ಇಂಟರ್ನೆಟ್‌ ಡಾಟಾ ಸೌಕರ್ಯ ಇರಲಿದೆ ಎಂದು ಹೇಳಿಕೊಂಡಿದೆ.

ಜತೆಗೆ ಹೊಸ ಪ್ಲ್ಯಾನ್‌ಗಳ ಮೂಲಕ ಕಸ್ಟಮರ್‌ ಫ‌ಸ್ಟ್‌ ಎಂಬ ಧ್ಯೇಯವನ್ನು ಹೊಂದಿದ್ದು. ಗ್ರಾಹಕರಿಗೆ ಶೇ.300ರಷ್ಟು ಲಾಭವನ್ನು ಕೊಡುವುದಾಗಿ ಅದು ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ