![Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…](https://www.udayavani.com/wp-content/uploads/2024/06/8-12-415x249.jpg)
Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ
Team Udayavani, May 23, 2024, 4:52 PM IST
![Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ](https://www.udayavani.com/wp-content/uploads/2024/05/dudhsagar-620x414.jpg)
ಪಣಜಿ: ದೂದ್ ಸಾಗರ ಜಲಪಾತದಲ್ಲಿ ಸ್ನಾನಕ್ಕೆಂದು ಇಳಿದಿದ್ದ 3 ವರ್ಷದ ಬಾಲಕಿ ಮುಳುಗುತ್ತಿದ್ದ ಸಂದರ್ಭದಲ್ಲಿ ದೃಷ್ಟಿಯ ಜೀವರಕ್ಷಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಬಾಲಕಿ ಹೈದರಾಬಾದ್ ಮೂಲದವರು ಎನ್ನಲಾಗಿದೆ.
ಹೈದರಾಬಾದ್ನಿಂದ ಪ್ರವಾಸಿಗರ ತಂಡವೊಂದು ಸೋಮವಾರ ದೂದ್ ಸಾಗರ ಜಲಪಾತ ವೀಕ್ಷಣೆಗೆ ಆಗಮಿಸಿತ್ತು. ಜಲಪಾತದಲ್ಲಿ ಸ್ನಾನಕ್ಕೆಂದು ತಂದೆ 3 ವರ್ಷದ ಬಾಲಕಿಯೊಂದಿಗೆ ನೀರಿಗೆ ಇಳಿದಿದ್ದರು. ಆದರೆ 3 ವರ್ಷದ ಬಾಲಕಿ ಕಲ್ಲಿನ ಮೇಲೆ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ನಂತರ ಸಮೀಪದಲ್ಲೇ ಇದ್ದ ಜೀವರಕ್ಷಕರು ಆಕೆಯನ್ನು ನೀರಿನಿಂದ ಹೊರತೆಗೆದಿದ್ದಾರೆ. ಬಾಲಕಿ ಸುರಕ್ಷಿತವಾಗಿದ್ದಾಳೆ.
ಗೋವಾದ ದೂದ್ ಸಾಗರ ಜಲಪಾತ ಜಗತ್ಪ್ರಸಿದ್ಧ ಜಲಪಾತವಾಗಿದೆ. ಈ ಜಲಪಾತ ವೀಕ್ಷಣೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಎಚ್ಚರಿಕೆಯಿಂದ ಆಗಮಿಸಬೇಕು ಎಂದು ಜೀವರಕ್ಷಕ ದಳ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
![Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…](https://www.udayavani.com/wp-content/uploads/2024/06/8-12-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.