ದೌರ್ಜನ್ಯದಿಂದ ರಕ್ಷಿಸಲು “ಮದುವೆ’ ವಿನಾಯಿತಿಯಲ್ಲ
Team Udayavani, Sep 2, 2017, 7:50 AM IST
ಹೊಸದಿಲ್ಲಿ: ಲೈಂಗಿಕ ದೌರ್ಜನ್ಯದಿಂದ ಹೆಣ್ಣು ಮಕ್ಕಳನ್ನು ರಕ್ಷಿಸಲು ಮದುವೆ ಎಂಬುದು ಕಾನೂನು ನೀಡಿರುವಂಥ ವಿನಾಯಿತಿಯಲ್ಲ.
15 ರಿಂದ 18 ರೊಳಗಿನ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಹೊಂದುವುದಕ್ಕೆ ಪತಿಗೆ ಕಾನೂನಾತ್ಮಕ ಅನುಮತಿ ಇರುವುದನ್ನು ಪ್ರಶ್ನಿಸಿ ಎನ್ಜಿಒ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದೇ ವೇಳೆ, ಹೆಣ್ಣುಮಕ್ಕಳ ಹೆತ್ತವರ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, “ನಮ್ಮ ದೇಶದಲ್ಲಿ ಹೆಚ್ಚಿನ ಬಾಲ್ಯ ವಿವಾಹಗಳನ್ನು ಹೆಣ್ಣು ಹೆತ್ತವರೇ ನಡೆಸುತ್ತಿರುವುದು ದುರದೃಷ್ಟಕರ’ ಎಂದಿದೆ. ಯಾವುದೇ ಪುರುಷ 15 ವರ್ಷ ಮೇಲ್ಪಟ್ಟ ಪತ್ನಿ ಜೊತೆ ಲೈಂಗಿಕ ಸಂಪರ್ಕ ಹೊಂದಲು ಕಾನೂನಲ್ಲಿ ಅವಕಾಶವಿದೆ. ಈ ವಯಸ್ಸಿನ ಮಿತಿ 18ಕ್ಕೇರಿಸಬೇಕು ಎಂದು ಎನ್ಜಿಒ ಕೋರಿದೆ. ಇದಕ್ಕೆ ನ್ಯಾಯಪೀಠ, “ಇಂಥ ಮದುವೆ ಈಗಲೂ ನಡೆಯುತ್ತಿವೆ. ನಾವು ರದ್ದುಪಡಿಸಿದರೆೆ, ಅಂಥ ಮದುವೆಯಿಂದ ಹುಟ್ಟುವ ಮಕ್ಕಳನ್ನೇನು ಮಾಡುವುದು’ ಎಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ
PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ
Mallikarjun Kharge: ಅಧಿಕಾರಕ್ಕೆ ಬಂದರೆ ರಾಮಮಂದಿರ ಧ್ವಂಸ ಹೇಳಿಕೆ ಸುಳ್ಳು: ಖರ್ಗೆ ಆಕ್ರೋಶ
ನನ್ನ ಖಾಸಗಿ ಫೋಟೋ ಬಿಡುಗಡೆ ಮಾಡಲು ಆಪ್ನಲ್ಲಿ ಸಂಚು ನಡೆಯುತ್ತಿದೆ: ಸ್ವಾತಿ ಮಲಿವಾಲ್
Hemant Soren: ಕೋರ್ಟ್ಗೆ ತಪ್ಪು ಮಾಹಿತಿ ಕೊಟ್ಟದ್ದಕ್ಕೆ ಸೊರೇನ್ಗೆ ಸುಪ್ರೀಂ ತರಾಟೆ