ಲೋಕಸಮರದಲ್ಲಿ ಸ್ಪರ್ಧಿಸಿದ್ದ ಆಗರ್ಭ ಅಭ್ಯರ್ಥಿಗೆ ಠೇವಣಿ ನಷ್ಟ! ಪಡೆದ ಮತ ಎಷ್ಟು ಗೊತ್ತಾ

Team Udayavani, May 25, 2019, 11:21 AM IST

Ramesh kumar sharma

ನವದೆಹಲಿ: ದೇಶದ ಹೈವೋಲ್ಟೇಜ್ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಒಂದೊಂದೇ ಕುತೂಹಲಕಾರಿ ಫಲಿತಾಂಶಗಳ ವರದಿ ಬರತೊಡಗಿದೆ. ಚುನಾವಣೆಯಲ್ಲಿ ಗೆಲ್ಲಲು ಹಣಬಲ ಸಹಾಯ ನೆರವಿಗೆ ಬರುವುದಿಲ್ಲ ಎಂಬುದಕ್ಕೆ ಪಾಟ್ನಾದ ಪಾಟಲೀಪುತ್ರದಿಂದ ಸ್ಪರ್ಧಿಸಿದ್ದ ಆಗರ್ಭ ಶ್ರೀಮತ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೇಶದ ಹತ್ತು ಮಂದಿ ಶ್ರೀಮಂತರ ಪೈಕಿ ಕೇವಲ ಐದು ಅಭ್ಯರ್ಥಿಗಳು ಮಾತ್ರ ಲೋಕಸಭೆ ಪ್ರವೇಶಿಸಿದ್ದಾರೆ. ಐದು ಅಭ್ಯರ್ಥಿಗಳು ಸೋಲಿನ ರುಚಿ ಕಂಡಿದ್ದಾರೆ.

ದೇಶದ ಶ್ರೀಮಂತ ಅಭ್ಯರ್ಥಿಯಾಗಿದ್ದ ರಮೇಶ್ ಕುಮಾರ್ ಶರ್ಮಾ ಬಿಹಾರದ ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣಾ ಆಯೋಗದ ಅಂಕಿಅಂಶದ ಪ್ರಕಾರ, ಶರ್ಮಾ ಠೇವಣಿ ಕಳೆದುಕೊಂಡಿದ್ದು, ಕೇವಲ 1,556 ಮತಗಳನ್ನಷ್ಟೇ ಪಡೆದಿದ್ದಾರೆ ಎಂದು ತಿಳಿಸಿದೆ. ರಮೇಶ್ ಕುಮಾರ್ ಶರ್ಮಾ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿತ್ ನಲ್ಲಿ 1,107 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂದು ಘೋಷಿಸಿಕೊಂಡಿದ್ದರು!

ಈ ಬಾರಿ ಲೋಕಸಭಾ ಚುನಾವಣೆಗೆ ಹತ್ತು ಮಂದಿ ಶ್ರೀಮಂತ ಕುಳಗಳು ಸ್ಪರ್ಧಿಸಿದ್ದು, ಅದರಲ್ಲಿ ಮೂವರು ಆಂಧ್ರಪ್ರದೇಶದಿಂದ, ಇಬ್ಬರು ಮಧ್ಯಪ್ರದೇಶ, ಇಬ್ಬರು ಬಿಹಾರ, ತಮಿಳುನಾಡಿನಿಂದ ಒಬ್ಬರು, ಕರ್ನಾಟಕ ಹಾಗೂ ತೆಲಂಗಾಣದಿಂದ ತಲಾ ಒಬ್ಬರು ಸ್ಪರ್ಧಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ