ಜವಾಹರ್‌ಲಾಲ್‌ ನೆಹರೂ ವಿವಿ : ಹಾಸ್ಟೆಲ್‌ ಶುಲ್ಕ ಇಳಿಕೆ

Team Udayavani, Nov 14, 2019, 12:56 AM IST

ಹೊಸದಿಲ್ಲಿ: ಹಾಸ್ಟೆಲ್‌ ಶುಲ್ಕದಲ್ಲಿ ಏರಿಕೆ ಮಾಡಿದ್ದಕ್ಕೆ ಜವಾಹರ್‌ಲಾಲ್‌ ನೆಹರೂ ವಿವಿಯ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಗೆ ಕೇಂದ್ರ ಸರಕಾರ ಮಣಿದಿದೆ. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬುಧವಾರ ಪ್ರಕಟಣೆ ಹೊರಡಿಸಿದೆ.

ಹೊಸ ನಿರ್ಧಾರದ ಪ್ರಕಾರ ಭದ್ರತಾ ಠೇವಣಿ 5,500 ರೂ., ಸೇವಾ ಶುಲ್ಕ 1,700 ರೂ. ಇರಲಿದೆ. ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸೂಕ್ತ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ವಿವಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ