ಟೀ ಮಾರಿ ಏಕ್ತಾಳಿಗೆ ಕ್ರಿಕೆಟ್‌ ಕಲಿಸಿದ ಅಪ್ಪ ಕುಂದನ್‌


Team Udayavani, Jul 5, 2017, 10:10 AM IST

SPORTS-8.jpg

ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇತ್ತೀಚೆಗೆ ಭಾರತ ತನ್ನ ಬದ್ಧ ಎದುರಾಳಿ ಪಾಕಿಸ್ತಾನವನ್ನು
ಸೋಲಿಸಿತ್ತು. ಆ ಪಂದ್ಯದಲ್ಲಿ 5 ವಿಕೆಟ್‌ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಏಕ್ತಾ ಬಿಷ್ಟ್ ಎಂಬ
ಸ್ಪಿನ್ನರ್‌. ಈ ಸಾಧನೆಯ ಮೂಲಕ ದೇಶಾದ್ಯಂತ ಮನೆ ಮಾತಾಗಿರುವ ಬಿಷ್ಟ್ ತಂದೆ ಒಬ್ಬ ಟೀ ವ್ಯಾಪಾರಿ, ಅಷ್ಟು
ಮಾತ್ರವಲ್ಲ ಭಾರತೀಯ ಸೇನೆಯಲ್ಲಿ ಮಾಜಿ ಹವಲ್ದಾರ್‌. ಅವರು ಟೀ ಮಾರಿ ಮಗಳನ್ನು ವಿಶ್ವದರ್ಜೆಯ ಕ್ರಿಕೆಟ್‌
ಆಟಗಾರ್ತಿಯನ್ನಾಗಿಸಿದ್ದಾರೆನ್ನುವ ಸತ್ಯ ಗೊತ್ತಿರುವುದು ಕೆಲವರಿಗೆ ಮಾತ್ರ!

ಭಾರತೀಯ ಸೇನೆಯಲ್ಲಿ ಹವಲ್ದಾರ್‌ ಹುದ್ದೆಯಲ್ಲಿದ್ದ ಏಕ್ತಾ ಬಿಷ್ಟ್ ತಂದೆ ಕುಂದನ್‌ ಸಿಂಗ್‌ ಬಿಷ್ಟ್ 1988ರಲ್ಲಿ
ನಿವೃತ್ತರಾಗಿದ್ದಾರೆ. ಆದರೆ ಇವರ ನಿವೃತ್ತಿ ನಂತರ ಬರುತ್ತಿದ್ದ ಮಾಸಾಶನ ಕೇವಲ 1500 ರೂ. ಇದರಿಂದ ಜೀವನ
ನಡೆಸುವುದು ಕಷ್ಟ ಎನ್ನುವುದನ್ನು ಅರಿತ ಕುಂದನ್‌ ಸಿಂಗ್‌ ಉತ್ತರಾಖಂಡದಲ್ಲಿ ಟೀ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮಾಸಾಶನದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಟೀ ವ್ಯಾಪಾರವನ್ನು ತ್ಯಜಿಸಿದ್ದಾರೆ.

ಹುಡುಗರ ಜತೆ ಕ್ರಿಕೆಟ್‌ ಅಭ್ಯಾಸ: ಏಕ್ತಾ ಬಿಷ್ಟ್ ಮೊದಲು ಕ್ರಿಕೆಟ್‌ ಆಡಲು ಆರಂಭಿಸಿದ್ದು ಹುಡುಗರ ಜತೆ. ಆಗ ಏಕ್ತಾಗೆ 6 ವರ್ಷ, ನಂತರದ ದಿನಗಳಲ್ಲಿ ಶಾಲಾ ತಂಡದಲ್ಲಿ ಆಡಲು ಆರಂಭಿಸಿದರು. ಆಗ ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರು. ಹುಡುಗರ ತಂಡದಲ್ಲಿರುವ ಏಕೈಕ ಹುಡುಗಿ ಏಕ್ತಾ ಆಗಿದ್ದರು. ಜೊತೆಗೆ ಮನೆಯಲ್ಲಿ ಬಡತನ. ಆದರೂ ಪೋಷಕರು ಮಗಳ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ, ಹಾಗೆಯೇ ಮಗಳು ಕೂಡ ಜವಾಬ್ದಾರಿಯಿಂದ ಹಣ ಖರ್ಚು ಮಾಡುತ್ತಿದ್ದರು!
2006ರಲ್ಲಿಯೇ ಉತ್ತರಾಖಂಡ ತಂಡವನ್ನು ಪ್ರತಿನಿಧಿಸಿದ ಏಕ್ತಾ ನಂತರ 2007ರಿಂದ 2010ರವರೆಗೆ ಉತ್ತರ ಪ್ರದೇಶ ತಂಡದಲ್ಲಿ ಆಡಿದ್ದಾರೆ. ಅಲ್ಲಿ ನೀಡಿದ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ 2011ರಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆತಿದೆ. ಏಕ್ತಾ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದ ಮೇಲೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಏಕ್ತಾ ತಂದೆ ಕುಂದನ್‌ ಸಿಂಗ್‌ ತಿಳಿಸಿದ್ದಾರೆ.

ಮಗಳಿಗೆ ಕ್ರೀಡೆಯ ಬಗ್ಗೆ ವಿಪರೀತ ಆಸಕ್ತಿ ಇತ್ತು. ಚಿಕ್ಕವಳಿರುವಾಗಲೇ ಕುಟುಂಬದ ಹುಡುಗರ ಜತೆ ಕ್ರಿಕೆಟ್‌ ಆಡುತ್ತಿದ್ದಳು. ಇಂದು ಮಗಳ ಸಾಧನೆ ನೋಡಿ ಬಹಳ ಸಂತಸವಾಗಿದೆ.
ಕುಂದನ್‌ ಸಿಂಗ್‌ ಬಿಷ್ಟ್, ಏಕ್ತಾ ಬಿಷ್ಟ್ ತಂದೆ

ಟಾಪ್ ನ್ಯೂಸ್

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ

Exam 2

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ

TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ

1-wwewqewq

NADA ಬೆನ್ನಲ್ಲೇ UWW ನಿಂದಲೂ ವರ್ಷಾಂತ್ಯದ ವರೆಗೆ ಬಜರಂಗ್ ಅಮಾನತು

kl rahul

KL Rahul; ಮಾಲಕರ ತರಾಟೆಯ ಬಳಿಕ ಲಕ್ನೋ ತಂಡದ ನಾಯಕತ್ವ ತೊರೆದ ರಾಹುಲ್?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.