ಅಫ್ಘಾನ್ ನಲ್ಲಿ ಕದನ ವಿರಾಮ :ಅಮೆರಿಕ – ತಾಲಿಬಾನಿಗಳ ನಡುವೆ ಐತಿಹಾಸಿಕ ಒಪ್ಪಂದ
Team Udayavani, Feb 29, 2020, 9:29 PM IST
ದೋಹಾ (ಕತಾರ್): ಅಫ್ಘಾನಿಸ್ಥಾನದಲ್ಲಿ 19 ವರ್ಷಗಳಿಂದ ನಡೆಯುತ್ತಿದ್ದ ರಣರುದ್ರ ರಕ್ತಪಾತಕ್ಕೆ ತೆರೆ ಬಿದ್ದಿದೆ. ಅಫ್ಘಾನ್ ನೆಲದಲ್ಲಿ ರಕ್ತಪಾತಕ್ಕೆ ಕಾರಣವಾಗಿದ್ದ ತಾಲಿಬಾನ್ ಉಗ್ರರು ಮತ್ತು ಅವರನ್ನು ಹಿಮ್ಮೆಟ್ಟಿಸಲು ಅಲ್ಲಿ 2001ರಿಂದ ಕದನ ನಿರತವಾಗಿದ್ದ ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ. ಮುಂದಿನ 14 ತಿಂಗಳುಗಳಲ್ಲಿ ಅಮೆರಿಕ ಸೇನೆ ಹಂತ-ಹಂತವಾಗಿ ವಾಪಸ್ ಹೋಗಲಿದೆ.
ಕತಾರ್ ರಾಜಧಾನಿ ದೋಹಾದಲ್ಲಿರುವ ಶೆರಟಾನ್ ಹೊಟೇಲ್ನಲ್ಲಿ ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ ಪ್ರತಿನಿಧಿ ಝಲ್ಮಯ್ ಖಲೀಜಾದ್ ಹಾಗೂ ತಾಲಿಬಾನ್ನ ನಾಯಕರ ಪ್ರತಿನಿಧಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಸಹಿ ಹಾಕಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶಿಂಗ್ಲಾ ಸೇರಿ ಪಾಕಿಸ್ಥಾನ, ಇಂಡೋನೇಷ್ಯಾ, ಉಜ್ಬೇಕಿಸ್ಥಾನ, ತಜಕಿಸ್ಥಾನ ಸಹಿತ ಸುಮಾರು 30 ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ವಿಶ್ವ ಸಂಸ್ಥೆಯ ಸದಸ್ಯರು ಈ ಐತಿಹಾಸಿಕ ಒಪ್ಪಂದಕ್ಕೆ ಸಾಕ್ಷಿಯಾಗಿದ್ದಾರೆ.
ಒಪ್ಪಂದದಂತೆ, ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ 14,000 ತುಕಡಿಗಳು ಹಾಗೂ ನ್ಯಾಟೋದ 17,000 ಸೇನಾ ತುಕಡಿಗಳು ಮುಂದಿನ 14 ತಿಂಗಳುಗಳಲ್ಲಿ ಹಂತಹಂತವಾಗಿ ಸ್ವದೇಶಕ್ಕೆ ಮರಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ