ಭಾರತೀಯ ಶಿಕ್ಷಕಿಗೆ ಕೊರೋನಾ ವೈರಸ್‌ ; ಚೀನದಾದ್ಯಂತ ಆತಂಕ ಮೂಡಿಸಿರುವ ಹೊಸ ವೈರಸ್‌ ಸೋಂಕು

Team Udayavani, Jan 20, 2020, 7:29 AM IST

ಬೀಜಿಂಗ್‌: ಚೀನದ ಹಲವು ಭಾಗಗಳಲ್ಲಿ ಕಾಣಿಸಿಕೊಂಡ ಹೊಸ ಮಾದರಿ ವೈರಸ್‌ಗೆ ಭಾರತ ಮೂಲದ ಶಿಕ್ಷಕಿಯೊಬ್ಬರು ತುತ್ತಾಗಿದ್ದಾರೆ. ಚೀನದಲ್ಲಿ ಈ ಸೋಂಕು ತಗುಲಿದ ಮೊದಲ ವಿದೇಶೀ ಪ್ರಜೆ ಅವರಾಗಿದ್ದಾರೆ. ಚೀನದ ಶೆನ್‌ಜೆನ್‌ನಲ್ಲಿರುವ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಿ ಮಹೇಶ್ವರಿ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೊಂದು ಸಾರ್ಸ್‌ ಮಾದರಿ ವೈರಸ್‌ ಎಂದು ಈಗ ವೈದ್ಯ ಸಮುದಾಯ ಹೇಳಿದೆ. 2002- 2003ರಲ್ಲಿ ಹಾಂಕಾಂಗ್‌ ಮತ್ತು ಚೀನದಲ್ಲಿ ಈ ಸೋಂಕು ಕಾಣಿಸಿ ಕೊಂಡು 650ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು.

17 ಮಂದಿಗೆ ಸೋಂಕು: ಪ್ರೀತಿ ಮಹೇಶ್ವರಿ ಅವರು ಹೊಸದಿಲ್ಲಿ ಮೂಲದ ಉದ್ಯಮಿ ಅಶುಮಾನ್‌ ಖೋವಾಲ್‌ ಎಂಬವರ ಪತ್ನಿ. ಪತ್ನಿಯನ್ನು ನೋಡಲು ಖೋವಾಲ್‌ಗೆ ಕೆಲ ಹೊತ್ತು ಅವಕಾಶ ನೀಡಲಾಗಿತ್ತು. ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಹೊಸದಾಗಿ 17 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಒಟ್ಟಾರೆ 62ಕ್ಕೇರಿದಂತಾಗಿದೆ.

ಈ ಪೈಕಿ 19 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಭಾರತದ 500 ಮಂದಿ ವುಹಾನ್‌ನ ಮೆಡಿಕಲ್‌ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಹೊಸ ಸೋಂಕಿನ ವೈರಸ್‌ಗೆ ‘2019 ನೋವೆಲ್‌ ಕೊರೋನಾ ವೈರಸ್‌ (2019-ಎನ್‌ಸಿಒವಿ) ಎಂದು ಹೆಸರಿಸಲಾಗಿದೆ. ಹಿಂದಿನ ಸಂದರ್ಭಗಳಲ್ಲಿ ಇದು ಮಾನವರಲ್ಲಿ ಕಂಡು ಬಂದ ನಿದರ್ಶನಗಳಿಲ್ಲ.

ಸಾಮಾನ್ಯ ಲಕ್ಷಣಗಳು
ಜ್ವರ, ಕೆಮ್ಮು, ಉಸಿರಾಡಲು ತೊಂದರೆ, ನ್ಯುಮೋನಿಯಾ, ಕಿಡ್ನಿ ವೈಫ‌ಲ್ಯ

ಶುರುವಾಗಿದ್ದೆಲ್ಲಿಂದ?
– 2019ರ ಡಿ.8ರಂದು ಚೀನದ ವುಹಾನ್‌ ನಗರದಲ್ಲಿ ವ್ಯಕ್ತಿ ನ್ಯುಮೋನಿಯಾ ಇದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದಿದ್ದ. ಕೆಲವೇ ದಿನಗಳಲ್ಲಿ ಇದೇ ಮಾದರಿಯ ಸಮಸ್ಯೆಗಳನ್ನು ಹೇಳಿಕೊಂಡವರು ಚಿಕಿತ್ಸೆಗಾಗಿ ಬಂದರು.

– ಜ.7ರಂದು ಈ ವೈರಸ್‌ ಅನ್ನು 2019-ಎನ್‌ಸಿಒವಿ ವೈರಸ್‌ ಎಂದು ಹೆಸರಿಸಲಾಯಿತು. ಇದರ ಮೂಲ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ ಇಬ್ಬರು ಅಸುನೀಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ