CONNECT WITH US  

ಉದ್ರಿ, ಸಾಮಾನು ಚೀಟಿ ಬರೆಯಲು ನೋಟಿನ ಹಿಂಭಾಗ ಖಾಲಿ ಬಿಟ್ಟಿದ್ದೇವೆ

 ನವದೆಹಲಿ: ಮಧ್ಯ ಪ್ರದೇಶದ ಎಟಿಎಂಗಳಲ್ಲಿ ಒಂದೇ ಕಡೆಗೆ ಮುದ್ರಣಗೊಂಡ 500 ನೋಟುಗಳು ಪತ್ತೆಯಾಗಿದ್ದು, ಜನರ ಅಚ್ಚರಿಗೆ ಕಾರಣವಾಗಿದೆ. ಆದರೆ, ಇದು ಪ್ರಮಾದದಿಂದ ಆಗಿದ್ದಲ್ಲ. ವೆಚ್ಚ ಕಡಿತಕ್ಕಾಗಿ ಉದ್ದೇಶ ಪೂರ್ವಕವಾಗಿಯೇ ಈ ನೋಟುಗಳ ಒಂದು ಕಡೆಗಷ್ಟೇ ಮುದ್ರಣ ಮಾಡಲಾಗಿದೆ. ಖಾಲಿ ಇರುವ ಇನ್ನೊಂದು ಭಾಗದಲ್ಲಿ ಅಂಗಡಿಗಳ ಉದ್ರಿ, ಕಿರಾಣಿ ಅಂಗಡಿ ಸಾಮಾನು ಪಟ್ಟಿಯನ್ನು ಬರೆದುಕೊಳ್ಳಬಹುದಾಗಿದೆ ಎಂದು ಆರ್‌ಬಿಐ ಹೇಳಿದೆ.

ಆದರೆ, ಈ ಕುರಿತು ಹೊಸ ಅಧಿಸೂಚನೆಯನ್ನು ಆರ್‌ಬಿಐ ಹೊರಡಿಸುವುದಿಲ್ಲ. ಮುಂದಿನ ದಿನಗಳಲ್ಲಿ ಎಟಿನಿಂದ 10 ನೋಟುಗಳನ್ನು ತೆಗೆದರೆ ಒಂದು ನೋಟಿನ ಹಿಂಭಾಗದಲ್ಲಿ ಮುದ್ರಣ ವಾಗದೇ ಖಾಲಿ ಇರುವ ನೋಟು ಸಿಗಲಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನೋಟಿನ ಹಿಂಭಾಗದಲ್ಲಿ ಬರೆದಿದ್ದನ್ನು ಸುಲಭವಾಗಿ ಒರೆಸಬಹುದಾದ ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡಲಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Trending videos

Back to Top