CONNECT WITH US  

ಅಂಗವಿಕಲ ಮಕ್ಕಳಿಗೆ ಅಧ್ಯಯನ ಪ್ರವಾಸ

ಶ್ರೀನಿವಾಸಪುರ: ಸಮನ್ವಯ ಶಿಕ್ಷಣದಡಿ ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಮಕ್ಕಳಂತೆ ಜೀವನ ನಡೆಸಬೇಕು. ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಬೇಕೆಂಬ ದೃಪ್ಟಿಯಿಂದ ಪ್ರತಿ ವರ್ಷ ಪ್ರಕೃತಿ ಅಧ್ಯಯನ ಮತ್ತು ಸಾಹಸ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಶುನ್ನಿಸಾ ಹೇಳಿದರು.

ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದನಿಮಿತ್ತ ಬ್ಲಾಕ್‌ ಸಂಯೋಜನಾಧಿಕಾರಿಗಳ ಕಾರ್ಯಲಯ ಏರ್ಪಡಿಸಿದ್ದ 2017-18ನೇ ಸಾಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ಎರಡು ದಿನಗಳ ಪ್ರಕೃತಿ ಅಧ್ಯಯನ ಮತ್ತು ಸಾಹಸ ಶಿಬಿರ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯಡಿ ವಿಶೇಷ ಅಗತ್ಯವುಳ್ಳ ಮಕ್ಕಳ ಚಟುವಟಿಕೆ ಮತ್ತು ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 38 ವಿಶೇಷ ಅಗತ್ಯವುಳ್ಳ ಮಕ್ಕಳು ಹಾಗೂ 12 ಜನ ಸಾಮಾನ್ಯ ಮಕ್ಕಳೂಂದಿಗೆ ಪ್ರವಾಸವನ್ನು ಏರ್ಪಡಿಸಲಾಗಿದೆ ಎಂದರು.

ಕೊಲದೇವಿ, ಕುರಡಮಲೆ, ಮುಳಬಾಗಿಲು, ಕಮ್ಮಸಂದ್ರ, ಗುಟ್ಟಹಳ್ಳಿ, ಆವಣಿ, ವಿರೂಪಾಕ್ಷಿ, ಕೈವಾರ, ನಂದಿ, ರಂಗಸ್ಥಳ, ಗೋರವನಹಳ್ಳಿ, ಮುದ್ದೆನಹಳ್ಳಿ, ಲೇಪಾಷಿ, ಕೈಲಾಸಗಿರಿ, ಮುರಗಮಲ್ಲ ಸ್ಥಳಗಳಿಗೆ ಪ್ರವಾಸ ಕೈಗೊಂಡು, ಮಕ್ಕಳಿಗೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವ ಅವಕಾಶ ಹಾಗೂ ಆತ್ಮವಿಶ್ವಾಸ, ಧೈರ್ಯ, ಸಾಹಸದ ಶಕ್ತಿ ತುಂಬಲು ಯತ್ನಿಸಲಾಗುವುದು.

ಅವರಲ್ಲಿ ನಾವು ಯಾವುದೇ ಮಕ್ಕಳಿಗೂ ಕಡಿಮೆಯಿಲ್ಲ ಎನ್ನುವ ಮನೋಭಾವನೆಯನ್ನು ವೃದ್ಧಿಸಿ ಸಮಾಜಿಕ ಜೀವನದಲ್ಲಿ ಅಭಿವೃದ್ಧಿ ಹೊಂದುವಂತಹ 2 ದಿನಗಳ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಮಕ್ಕಳು ಉಳಿದುಕೊಳ್ಳುವ ಸ್ಥಳದಲ್ಲಿ ದರ್ಶಿಸಿದ ಸ್ಥಳಗಳ ಬಗ್ಗೆ ಚಟುವಟಿಕೆಗಳನ್ನು ನಡೆಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್‌, ರಮೇಶ್‌, ಕಲಾಶಂಕರ್‌, ಪ್ರಸನ್ನಕುಮಾರ್‌ ಹಾಜರಿದ್ದರು.

ಇಂದು ಹೆಚ್ಚು ಓದಿದ್ದು

Trending videos

Back to Top