CONNECT WITH US  

ಟ್ರಾಫಿಕ್‌ ಪೊಲೀಸರಾದ ಬೋಳಾರ- ವಾಮಂಜೂರು!

ಮಂಜುನಾಥ್‌ ನಾಯಕ್‌ ಹಾಗೂ ಅಕ್ಷಯ್‌ ಪ್ರಭು ಅಜೆಕಾರ್‌ ನಿರ್ಮಾಣದ ರಮಾನಂದ ನಾಯಕ್‌ ಜೋಡುರಸ್ತೆ ನಿರ್ದೇಶನದ 'ಗೋಲ್‌ ಮಾಲ್‌' ಈಗಾಗಲೇ ಅದ್ಧೂರಿ ಸಿನೆಮಾ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದೆ. ಕೋಸ್ಟಲ್‌ವುಡ್‌ನ‌ ಕಾಮಿಡಿ ಸ್ಟಾರ್‌ ಗಳನ್ನು ಹೊಂದಿರುವ ಈ ಸಿನೆಮಾದಲ್ಲಿ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಅಭಿನಯಿಸಿದ್ದಾರೆ.

ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಉಮೇಶ್‌ ಮಿಜಾರ್‌, ವಸಂತ್‌ ಮುನಿಯಾಲ್‌, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್‌ ಶೆಟ್ಟಿಮಾಣಿಬೆಟ್ಟು, ಸುನೀಲ್‌ ನೆಲ್ಲಿಗುಡ್ಡೆ ಮುಂತಾದವರು ಬಣ್ಣ ಹಚ್ಚಿದ್ದಾರೆ. ಪೃಥ್ವಿ ಅಂಬರ್‌ ಲೀಡ್‌ ರೋಲ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಸಿನೆಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿತ್ತು. ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಅವರು ಈ ಸಿನೆಮಾದಲ್ಲಿ ಟ್ರಾಫಿಕ್‌ ಪೊಲೀಸ್‌ ಲುಕ್‌ನಲ್ಲಿದ್ದಾರೆ. 

ಇಂದು ಹೆಚ್ಚು ಓದಿದ್ದು

Trending videos

Back to Top