CONNECT WITH US  

"ಮಿಸ್ಸಿಂಗ್‌ ಬಾಯ್‌'ನಲ್ಲಿ ಮದರ್‌ ಸೆಂಟಿಮೆಂಟ್‌: ಸೂಪರ್ ಟೀಸರ್ ವೀಕ್ಷಿಸಿ

ಗುರುನಂದನ್‌ "ಮಿಸ್ಸಿಂಗ್‌ ಬಾಯ್‌' ಎಂಬ ಸಿನಿಮಾ ಒಪ್ಪಿಕೊಂಡ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ರಘುರಾಮ್‌ ಈ ಚಿತ್ರದ ನಿರ್ದೇಶಕರು. ಹುಬ್ಬಳ್ಳಿಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಮಗನೊಬ್ಬ ತನ್ನ ತಾಯಿಯನ್ನು ಹುಡುಕಿಕೊಂಡು ವಿದೇಶದಿಂದ ಬರುವ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಅರ್ಚನಾ ಜಯಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ, ಜಗದೀಶ್‌ ವಾಲಿ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಕೊಲ್ಲಾ ಪ್ರವೀಣ್‌ ಈ ಚಿತ್ರದ ನಿರ್ಮಾಪಕರು. ಚಿತ್ರದ ಮದರ್‌ ಸೆಂಟಿಮೆಂಟ್‌ ಟೀಸರ್ ವೀಕ್ಷಿಸಿ.

Back to Top