ಹೊಸ ಅವಕಾಶ ಮ್ಯೂಸಿಯಾಲಜಿ

Team Udayavani, Jul 3, 2019, 5:00 AM IST

ಇತಿಹಾಸ ಮತ್ತು ಪುರಾತತ್ವದ ಕುರಿತು ಆಸಕ್ತಿ ನಿಮಗಿದ್ದರೇ ಮ್ಯೂಸಿಯಂ ಅಧ್ಯಯನ ಅಥವಾ ಮ್ಯೂಸಿಯಾಲಜಿ (ವಸ್ತು ಸಂಗ್ರಹಾಲಯಗಳ ಅಧ್ಯಯನ)ವನ್ನು ಆರಿಸಿಕೊಳ್ಳಬಹುದು.

ಭಾರತದಲ್ಲಿ ಮ್ಯೂಸಿಯಾಲಜಿ ಅಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಭಾರತದಲ್ಲಿ ಕಲೆಗೆ ಸಂಬಂಧಪಟ್ಟ ವಿಷಯಗಳಂತೆ ಇದು ಒಳ್ಳೆಯ ವೃತ್ತಿ ಆಧಾರಿತ ಕಲಿಕೆಯಾಗಿ ಪರಿಗಣಿಸಲ್ಪಟ್ಟಿಲ್ಲ. ಆದರೆ ಇದೊಂದು ಸಾಕಷ್ಟು ವ್ಯಾಪ್ತಿಯನ್ನು ಹೊಂದಿರುವ ಬಹುಶಿಸ್ತಿನ ವಿಷಯವಾಗಿದೆ. ಈ ಮ್ಯೂಸಿಯಾಲಜಿ ಕಲಿಯುವ ವಿದ್ಯಾರ್ಥಿ ಗಳಿಗೆ ಸಾಕಷ್ಟು ಅವ ಕಾಶಗಳು ಕೂಡ ಇವೆ.

ಉದ್ಯೋಗ ಅವಕಾಶಗಳು
ಮ್ಯೂಸಿಯಾಲಜಿ ಕಲಿತ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಅಧೀನದಲ್ಲಿರುವ ವಸ್ತು ಸಂಗ್ರಹಾಲಯಗಳಲ್ಲಿ ಉದ್ಯೋಗ ದೊರಯುತ್ತದೆ. ಮ್ಯೂಸಿಯಂಗಳು ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್‌ ಅವಕಾಶವನ್ನು ಕಲ್ಪಿಸುತ್ತವೆ. ಇದರಲ್ಲಿ ಮ್ಯೂಸಿಯಂ ನಿರ್ದೇಶಕ, ಕ್ಯುರೇಟರ್‌, ಆರ್ಚಿವಿಸ್ಟ್‌, ಕನ್ಸರ್ವೇಶನ್‌ ಸ್ಪೆಷಲಿಸ್ಟ್‌, ಎಕ್ಸಿಬಿಟ್ ಡಿಸೈನರ್‌ ಹಾಗೂ ಎಜುಕೇಟರ್‌ ಎಂಬ ಪ್ರೊಫೈಲ್ಗಳಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿ ಮ್ಯೂಸಿಯಾಲಜಿಸ್ಟ್‌ಗೆ ಭಾರೀ ಬೇಡಿಕೆ ಇದೆ.

ಯಾರು ಸೇರಬಹುದು
ವಿಶ್ವವಿದ್ಯಾನಿಲಯಗಳಲ್ಲಿ ಅದರದೇ ಆದ ಅರ್ಹತಾ ಮಾನದಂಡಗಳಿರುತ್ತವೆ. ಇತಿಹಾಸ, ಪುರಾತತ್ವ, ಕಲೆ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಲಲಿತ ಕಲೆ ಹಾಗೂ ಸಂಸ್ಕೃತದ ಬಗ್ಗೆ ಗೊತ್ತಿರುವವರು ಆಯ್ಕೆ ಮಾಡಿಕೊಳ್ಳಬಹುದು. ಕಲೆ, ಇತಿಹಾಸ, ಪುರಾತತ್ವ, ಕಲೆಯ ಇತಿಹಾಸ ಹಾಗೂ ಸಂಸ್ಕೃತಿ ಸಂರಕ್ಷಣೆಯಬ ಕುರಿತಿ ಆಸಕ್ತಿ ಹೊಂದಿದ್ದರೇ ಈ ಕೋರ್ಸ್‌ ಅನ್ನು ಅಭ್ಯಸಿಸಬಹುದು.

ಎಲ್ಲೆಲ್ಲಿ ಇದೆ?
·ರಾಷ್ಟ್ರೀಯ ಮ್ಯೂಸಿಯಂ ಇನ್‌ಸ್ಟಿಟ್ಯೂಟ್ ಆಫ್ ಹಿಸ್ಟರಿ ಆಫ್ ಆರ್ಟ್‌, ಕನ್ಸರ್ವೇಶನ್‌ ಆ್ಯಂಡ್‌ ಮ್ಯೂಸಿಯಾಲಜಿ, ಹೊಸದಿಲ್ಲಿ

·ಎಂ.ಎ /ಎಂ.ಎಸ್ಸಿ (ಮ್ಯೂಸಿಯಾಲಜಿ), ಯುನಿವರ್ಸಟಿ ಆಫ್ ಕಲ್ಕತ್ತಾ, ಕೋಲ್ಕತ್ತಾ

·ಯುಸಿವರ್ಸಿಟಿ ಆಫ್ ಬರೋಡ, ವಡೋದರ

·ಬೆನರೂಸ್‌ ಹಿಂದೂ ಯುನಿವರ್ಸಿಟಿ. ವಾರಾಣಸಿ

·ವಿಕ್ರಮ್‌ ಯುಸಿವರ್ಸಿಟಿ, ಉಜ್ಜೈನಿ

ಆರ್‌.ಕೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ