ಮ್ಯಾಕ್‌ಬೆತ್‌ ನಾಟಕಾಧಾರಿತ ಕಥೆ ‘ಪಡ್ಡಾಯಿ’

Team Udayavani, Sep 11, 2019, 5:15 AM IST

ಪಡ್ಡಾಯಿ ತುಳುವಿನಲ್ಲಿ ಬಂದಂತಹ ಒಂದು ವಿಭಿನ್ನ ಪ್ರಯತ್ನದ ಕಲಾತ್ಮಕ ಚಿತ್ರ. ಖ್ಯಾತ ನಾಟಕಗಾರ ಶೇಕ್ಸ್‌ಪಿಯರ್‌ ಅವರ ಮ್ಯಾಕ್‌ಬೆತ್‌ ನಾಟಕಾಧಾರಿತ ಈ ಸಿನೆಮಾ ದೇಶ, ವಿದೇಶಗಳಲ್ಲಿ ಪ್ರಶಸ್ತಿಯ ಗರಿ ಮುಡಿಗೇರಿಸಿದ್ದು ಈ ಚಿತ್ರದ ನಿರ್ದೇಶಕ ಅಭಯಸಿಂಹ ಮತ್ತವರ ಚಿತ್ರ ತಂಡದ ಸಾಧನೆಯೆ ಸರಿ. ‘ಪಡ್ಡಾಯಿ’ಪುಸ್ತಕದಲ್ಲಿ ಪಡ್ಡಾಯಿ ಸಿನೆಮಾದ ಹಾದಿಯನ್ನು ವಿಸ್ತೃತವಾಗಿ ಅಭಯಸಿಂಹ ಅವರು ವಿವರಿಸಿದ್ದಾರೆ. ಈ ಪುಸ್ತಕದ ಮುನ್ನುಡಿಯನ್ನು ಗಿರೀಶ್‌ ಕಾಸರವಳ್ಳಿ ಬರೆದಿದ್ದು ‘ಅಭಯಸಿಂಹ ಅವರ ಚಿತ್ರದ ಬಗೆಗಿನ ಒಳನೋಟಗಳನ್ನು ಮತ್ತು ಇದೊಂದು ನಾಟಕಾಧಾರಿತ ಸಿನೆಮಾವೆಂದು ನಿರ್ದೇಶಕರು ಮೊದಲೇ ಹೇಳಿಕೊಂಡ ಹೊರತಾಗಿಯೂ ಈ ಸಿನೆಮಾದಲ್ಲಿ ಅನೇಕ ಹೊಸ ಅಂಶಗಳು ಇವೆ’ ಎಂದಿದ್ದಾರೆ.

ಘಟನೆ: 1

ಇಲ್ಲಿ ನಿರ್ದೇಶಕರು ಸಿನೆಮಾ ಹುಟ್ಟಿದ ರೀತಿಯನ್ನು ವಿವರಿಸುತ್ತಾ, ಮ್ಯಾಕ್‌ಬೆತ್‌ ಕಥೆಯನ್ನು ವಿಶ್ವದ ಅನೇಕ ಹೆಸರಾಂತ ನಿರ್ದೇಶಕರು ಹೊಸ ಹೊಸ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಆ ಕಾರಣಕ್ಕಾಗಿ ಮ್ಯಾಕ್‌ಬೆತ್‌ ಕಥೆಯನ್ನು ಮಂಗಳೂರಿನ ಸೊಗಡಿಗೆ ತಕ್ಕಂತೆ ದೃಶ್ಯ ಬರೆಯುವಲ್ಲಿ ಇಲ್ಲಿನ ಮೊಗವೀರ ಕುಟುಂಬ, ಧೈವಾರಾಧನೆ, ಸಮುದ್ರ ಮುಂತಾದ ಅನೇಕ ವಿಷಯಗಳು ಹೇಗೆ ಸಹಾಯವಾಯಿತು ಅನ್ನುವುದನ್ನು ಇಲ್ಲಿ ವಿವರಿಸುತ್ತಾರೆ. ಸಿನೆಮಾ ನೋಡುವಾಗ ನಾವು ಗಮನಿಸಿರದ ಅನೇಕ ವಿಷಯಗಳನ್ನು ಇಲ್ಲಿ ಹೇಳುವಾಗ ದೃಶ್ಯದ ಶ್ರೀಮಂತಿಕೆಯ ಬಗ್ಗೆ ಮೆಚ್ಚುಗೆಯೆನಿಸುತ್ತದೆ.

ಘಟನೆ: 2
ಸಿನೆಮಾಕ್ಕಾಗಿ ಇಲ್ಲಿನ ಕಲಾವಿದರನ್ನು ಹೊರತಾಗಿ ಹೊಸ ಕಲಾವಿದರ ಆಯ್ಕೆ ಏಕೆ ಮತ್ತು ಹೇಗೆ ಎನ್ನುವುದನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ ಮತ್ತು ಪಾತ್ರ ವರ್ಗವನ್ನು ಸಿದ್ಧಪಡಿಸಿದ ರೀತಿ ಅವರು ಪಟ್ಟ ಶ್ರಮ ಸಿನೆಮಾಸಕ್ತರನ್ನು ಬಿಟ್ಟು ಎಲ್ಲಾ ವರ್ಗದ ಓದುಗರಿಗೂ ಕುತೂಹಲಕಾರಿಯಾಗಿದೆ. ತಮ್ಮ ನಟನೆಯಲ್ಲಿ ಪ್ರಬುದ್ಧತೆ ಕಾಣಲು ಮಲ್ಪೆ ಕಡಲ ತೀರಕ್ಕೆ ತೆರಳಿ ಅಲ್ಲಿನ ಮೊಗವೀರ ಸಮುದಾಯದ ಮಾತು, ನಡತೆಗಳನ್ನು ಗಮನಿಸಿ ಅಳವಡಿಸಿಕೊಂಡದ್ದು ಸಿನೆಮಾ ನಿರ್ಮಾಣ ಒಂದು ಧ್ಯಾನ ಎಂದು ಅರಿವಿಗೆ ಬರುತ್ತದೆ.

ಘಟನೆ: 3

ಈ ಪುಸ್ತಕವು ಸಿನೆಮಾ ಮಾಡುವವರಿಗೆ ಅನೇಕ ವಿಷಯಗಳನ್ನು ಕಲಿಸಿಕೊಡುತ್ತದೆ. ಸಿನೆಮಾಕ್ಕಾಗಿ ಯಾವ ರೀತಿ ಅಧ್ಯಯನ ಮಾಡಬೇಕು, ಸಿನೆಮಾದಲ್ಲಿ ಅಪ್ಡೇಟ್ ತಂತ್ರಜ್ಞಾನದ ಅಳವಡಿಕೆ ಹೇಗೆ ಮತ್ತು ಈ ಇಡೀ ಸಿನೆಮಾದ ಸ್ಕ್ರಿಪ್ಟ್ ಅನ್ನು ಒದಗಿಸಿರುವುದು ಇಲ್ಲಿನ ತುಳು ಚಿತ್ರರಂಗ ಮತ್ತು ಹೊಸ ನಿರ್ದೇಶಕರಿಗೆ ಹೊಸ ಪಠ್ಯದಂತೆ ಭಾಸವಾಗುತ್ತದೆ.

ವಿಶ್ವಾಸ್‌ ಅಡ್ಯಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಶೈಕ್ಷಣಿಕವಾಗಿ ಮತ್ತು ಜೌದ್ಯೋಗಿಕವಾಗಿ ಫೊರೆನ್ಸಿಕ್‌ ಸೈನ್ಸ್‌ ಕೋರ್ಸ್‌ ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ...

  • ಇತ್ತೀಚೆಗೆ ಕೆಲವೊಂದು ವಿದ್ಯಾರ್ಥಿಗಳಲ್ಲಿ ಹಿಂಜರಿಕೆಯ ಮನೋಭಾವ ಅಧಿಕವಾಗಿ ಕಾಣಬಹುದು. ಇದೊಂದು ಮೂಲ ಸಮಸ್ಯೆಯಾಗಿ ಪರಿಣಮಿಸಿದೆ. ಓದು, ಬರೆಹ ಮತ್ತು ಎಲ್ಲ...

  • ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಂಪಾದಿಸುವ ಅನೇಕ ದಾರಿಗಳಿವೆ. ಸ್ವಲ್ಪ ಆದಾಯದ ಜತೆ ಹೊಸ ಅನುಭವಗಳನ್ನು ಪಡೆಯುವ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡಾಗ,...

  • ಯಂತ್ರವು ತನ್ನ ಸ್ವಂತ ಗುಣವನ್ನು ಉಪಯೋಗಿಸಿ, ಯೋಚನೆ ಜತೆಗೆ ತಾನೇ ಎಲ್ಲ ಕಾರ್ಯವನ್ನು ಮಾಡುವಂತಹುದ್ದು ಕೃತಕ ಬುದ್ದಿವಂತಿಕೆಯಾಗಿದೆ. ಸಾಮಾನ್ಯವಾಗಿ ವ್ಯಕ್ತಿಯನ್ನು...

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...