ಪೇಥಾ

Team Udayavani, Feb 15, 2020, 5:55 AM IST

ಪೇಥಾ ಆಗ್ರಾದ ಪ್ರಸಿದ್ಧ ಸ್ವೀಟ್‌ ಆಗಿದ್ದು, ಇಲ್ಲಿಯ ಈ ಸ್ವೀಟ್‌ ಸವಿಯಲು ಜನರು ದೂರದ ಊರುಗಳಿಂದ ಬರುತ್ತಾರೆ. ಇದನ್ನು ಕೇವಲ ಅಂಗಡಿಗಳಲ್ಲಿ ಮಾತ್ರವಲ್ಲ ಮನೆಯಲ್ಲಿಯೂ ಮಾಡಿ ಸವಿಯಬಹುದಾಗಿದೆ.

ಬೇಕಾಗುವ ಸಾಮಗ್ರಿ
ಬೂದುಕುಂಬಳಕಾಯಿ- 1 ಕೆ.ಜಿ.
ಸಕ್ಕರೆ – 3 ಕಪ್‌
ನೀರು – 3 ಕಪ್‌
ಹಾಲು- 1 ಟೀ ಸ್ಪೂನ್‌
ಏಲಕ್ಕಿ-ಸ್ವಲ್ಪ

ಮಾಡುವ ವಿಧಾನ
ಕುಂಬಳಕಾಯಿಯ ಸಿಪ್ಪೆ ತೆಗೆದು ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಅನಂತರ ಒಂದು ಪಾತ್ರೆಯಲ್ಲಿ 3 ಕಪ್‌ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸುಣ್ಣದ ತುಂಡನ್ನು ಹಾಕಿ ಕಲಡಿಸಿಕೊಂಡು ಅದಕ್ಕೆ ಕುಂಬಳಕಾಯಿ ತುಂಡುಗಳನ್ನು ಹಾಕಿ. ಒಂದೆರಡು ಗಂಟೆಗಳ ಬಳಿಕ ಇನ್ನೊಂದು ಪಾತ್ರೆಯಲ್ಲಿ ನೀರು ಹಾಕಿ ಅದನ್ನು ಕುದಿಸಿಕೊಳ್ಳಿ. ಕುದಿಯುವ ನೀರಿಗೆ ತೊಳೆದ ಕುಂಬಳಕಾಯಿ ತುಂಡುಗಳನ್ನು ಹಾಕಿ. ಅದು ಚೆನ್ನಾಗಿ ಬೇಯುವವರೆಗೂ ಕುದಿಸಿಕೊಳ್ಳಿ. ಪಾಕದ ಮಾದರಿಯಾಗುವವರೆಗೂ ಬೇಯಿಸಿಕೊಳ್ಳಿ. ಅನಂತರ ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಏಲಕ್ಕಿ, ಕೇಸರಿ ಹಾಕಿ ಅದಕ್ಕೆ ನೀರು ಹಾಕಿ ಸಕ್ಕರೆಯನ್ನು ಸರಿಯಾಗಿ ಕಲಸಿಕೊಂಡು ಅದನ್ನು ಕುದಿಸಿಕೊಳ್ಳಿ. ಅನಂತರ ಅದಕ್ಕೆ ಬೇಯಿಸಿದ ಬೂದು ಕುಂಬಳಕಾಯಿಯನ್ನು ಸೇರಿಸಿ. ಸ್ವಲ್ಪ ಗಟ್ಟಿಯಾದ ಈ ಪಾಕವನ್ನು ಒಂದು ತಟ್ಟೆಗೆ ಹಾಕಿ. ಅನಂತರ ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡರೆ ಸವಿ ಸವಿಯಾದ ಪೇಥಾ ಸವಿಯಲು ಸಿದ್ಧ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಜೆ ಸಮಯದಲ್ಲಿ ಮಕ್ಕಳಿಗೆ ಅಥವಾ ಮನೆಯಲ್ಲಿರುವವರಿಗೆ ಏನು ಮಾಡುವುದು ಎಂಬುದೇ ತಲೆನೋವಾಗಿ ಪರಿಣಮಿಸುತ್ತದೆ. ವೀಕೆಂಡ್‌ ಬಂದರೆ ಮನೆಯಲ್ಲಿ ಹೊಸ ಹೊಸ ಅಡುಗೆ ರುಚಿ...

  • ಬೇಕಾಗುವ ಸಾಮಗ್ರಿ ಬಾಸ್ಮತಿ ಅಕ್ಕಿ- 1 ಕಪ್‌ ನುಣ್ಣಗೆ ಕತ್ತರಿಸಿದ ಮೆಂತೆ ಎಲೆ -2 ಕಪ್‌ ಕತ್ತರಿಸಿದ ಮಿಶ್ರಣ ತರಕಾರಿಗಳು: 1 ಕಪ್‌. ನೀರುಳ್ಳಿ- 1ರಿಂದ 2 ಶುಂಠಿ- 3 ಬೆಳ್ಳುಳ್ಳಿ-...

  • ಬೇಕಾಗುವ ಸಾಮಗ್ರಿ ಹಸಿ ಮೆಣಸಿನ ಕಾಯಿ-2 ಬ್ರಾಹ್ಮಿ ಎಲೆ-1 ಕಪ್‌ ಉದ್ದಿನ ಬೇಳೆ-ಒಂದೂವರೆ ಚಮಚ ಹುಣಿಸೇ ಬೀಜ-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ತೆಂಗಿನಕಾಯಿ-ಅರ್ಧ...

  • ಸಿಹಿ ತಿನಿಸು ಹಬ್ಬ, ಆಚರಣೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಸಾಮಾನ್ಯವಾಗಿ ಪಾಯಸ, ಹೋಳಿಗೆ ಹಬ್ಬದ ವಿಶೇಷ ಅಡುಗೆ ಪಟ್ಟಿಯಲ್ಲಿ ಸೇರಿದ್ದು ಏನಾದರೂ ಹೊಸತು ಹಬ್ಬದೂಟಕ್ಕೆ...

  • ಪ್ರತಿದಿನ‌ ಅಸ್ವಾದಿಸಲ್ಪಡುವ ಆಹಾರಗಳಲ್ಲಿ ಚಪಾತಿ ಒಂದು. ಇದನ್ನು "ಇಂಡಿಯನ್‌ ಬ್ರೆಡ್‌' ಎಂದು ಕರೆಯುತ್ತಾರೆ. ಸಂಪೂರ್ಣ ಗೋಧಿ ಹಿಟ್ಟಿನಿಂದ ಮಾಡುವ ಚಪಾತಿ ಇತರ...

ಹೊಸ ಸೇರ್ಪಡೆ