ಸಮಗ್ರ ಕಳೆ” ನಿರ್ವಹಣೆ ವಿಧಾನ

Team Udayavani, Aug 4, 2019, 5:07 AM IST

ಜಮೀನಿನಲ್ಲಿ ಬಿತ್ತನೆ ಮಾಡದೆ ಬೆಳೆಯುವ ಗಿಡಗಳನ್ನು ಕಳೆ ಎಂದು ಕರೆಯುತ್ತಾರೆ. ಇವುಗಳು ಬೆಳೆಯ ಬೆಳವಣಿಗೆ ಮತ್ತು ಇಳುವರಿಯಲ್ಲಿ ಭಾರೀ ನಷ್ಟ ಉಂಟುಮಾಡುತ್ತದೆ. ಈಗ ರೈತರಿಗೆ ತಮ್ಮ ಬೆಳೆಯ ಕಳೆ ಕೀಳುವ ಸಮಯ. ಜಮೀನಿನಲ್ಲಿ ಯಾವ ರೀತಿಯಾಗಿ ಕಳೆಗಳನ್ನು ನಿಯಂತ್ರಿಸಬಹುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಸಮಗ್ರ ಪೀಡೆ ನಿರ್ವಹಣೆಯಲ್ಲಿ ಕಳೆ ನಿರ್ವಹಣೆ ಒಂದು ಪ್ರಮುಖ ಅಂಶ. ಎಲ್ಲ ಪೀಡೆಗಳಿಂದ ಬೆಳೆಗಳ ಉತ್ಪಾದನೆಯಲ್ಲಿ ಆಗುತ್ತಿರುವ ನಷ್ಟದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಕಳೆಯೇ ಕಾರಣ. ಕಳೆಗಳು ಬೆಳೆಗಳ ಬೆಳವಣಿಗೆಗೆ ಬೇಕಾಗುವ ಬೆಳಕು, ತೇವಾಂಶ, ಪೋಷಕಾಂಶ ಮತ್ತು ಜಾಗಕ್ಕೆ ಪೈಪೋಟಿ ನೀಡುವ ಮೂಲಕ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗಲು ಕಾರಣವಾಗುತ್ತದೆ.

ಬೆಳೆ ಮತ್ತು ತಳಿಗಳ ಆಯ್ಕೆ, ಬೆಳೆ ಆವರ್ತನ, ಬಿತ್ತನೆ ಸಮಯ, ಗಿಡಗಳ ಅಂತರ ಮತ್ತು ಸಾಂದ್ರತೆ ಮೊದಲಾದವುಗಳು ಬೇಸಾಯ ಪದ್ಧತಿಯಲ್ಲಿ ಕಳೆ ನಿರ್ವಹಣಾ ವಿಧಾನವಾಗಿವೆೆ.

ಕೈಯಿಂದ ಅಥವಾ ಯಂತ್ರದ ಶಕ್ತಿ ಬಳಸಿ ಕಳೆ ಕೀಳುವುದು ಸಹ ರಾಸಾಯನಿಕ ಪದ್ಧತಿಗೆ ಬದಲಿ ಕ್ರಮವಾಗಿದೆ. ಇದರಲ್ಲಿ ಪರಿಸರ ಮಾಲಿನ್ಯ ಇರುವುದಿಲ್ಲ. ಈ ಪದ್ಧತಿಯಲ್ಲಿ ಕೆಳಕಂಡ ಕ್ರಮ ಅನುಸರಿಸಿ ಕಳೆ ಹತೋಟಿ ಮಾಡಬಹುದು.

1. ಆಳವಾಗಿ ಮಣ್ಣಿನಲ್ಲಿ ಸೇರಿರುವ ಬಹುವಾರ್ಷಿಕ ಕಳೆಗಳನ್ನು ಹಾರೆ, ಗುದ್ದಲಿ ಯಿಂದ ಅಗೆಯುವುದು ಮತ್ತು ಆಳವಾಗಿ ಉಳುಮೆ ಮಾಡಬೇಕು.

2. ಬೇಸಗೆ ಕಾಲದಲ್ಲಿ ಅದನ್ನು ಬಿಸಿಲಿಗೆ ಬಿಟ್ಟು ಅವುಗಳ ಗಡ್ಡೆಗಳನ್ನು ಒಣಗಿಸುವುದು.

3. ಕೈಯಿಂದ ಕಳೆಗಳನ್ನು ಕಿತ್ತು ಹಾಕುವುದು.

4. ಉಳುಮೆ ಮಾಡುವುದು.

5. ಹುಲ್ಲು, ಮಣ್ಣು, ಎಲೆ, ಕಪ್ಪು ಪಾಲಿಥೀನ್‌ ಶೀಟ್‌ಗಳಿಂದ ಕಳೆ ಅಥವಾ ಭೂಮಿಯ ಮೇಲ್ಮೈಯನ್ನು ಮುಚ್ಚುವುದು, ಹೊದಿಸುವುದು.

6. ನೀರನ್ನು ಬಸಿಯುವುದು.

7. ಕಳೆಗಳನ್ನು ಕೊಯ್ದು ಹಾಕುವುದು.

ಉತ್ತಮ ಬೇಸಾಯ, ಯಾಂತ್ರಿಕ ಪದ್ಧತಿಗಳು ಸಾಮಾನ್ಯವಾಗಿ ರಾಸಾಯನಿಕ ಪದ್ಧತಿಗೆ ಪರ್ಯಾಯ ಅಥವಾ ಬದಲಿ ಮಾರ್ಗವಾಗಿದೆ. ಅಲ್ಲದೆ ಈ ಪದ್ಧತಿ ಅನುಸರಿಸಿ ಕಳೆ ಹತೋಟಿಯಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ.

ಜೈವಿಕ ವಿಧಾನದಲ್ಲಿ ಕೀಟ ಮತ್ತು ಸೂಕ್ಷ್ಮಾಣುಜೀವಿಗಳ ಬಳಕೆಯಾಗುತ್ತದೆ. ಕೀಟ ಮತ್ತು ಸೂಕ್ಷ್ಮಾಣುಜೀವಿಗಳು ಕಳೆಗಳನ್ನು ಭಕ್ಷಿಸುವುದರಿಂದ ಅವುಗಳ ಸಂಖ್ಯೆ ಮತ್ತು ಬೆಳವಣಿಗೆ ಕಡಿಮೆಯಾಗುತ್ತದೆ. ಭಾರತದಲ್ಲಿ ಜೈವಿಕ ನಿಯಂತ್ರಣ ಅಷ್ಟೇನೂ ಉಪಯೋಗದಲ್ಲಿ ಇಲ್ಲ.

ಕಳೆನಾಶಕಗಳನ್ನು ಬೆಳೆಗಳಲ್ಲಿ ಉಪಯೋಗಿಸುವಾಗ ಬೆಳೆಗಳಿಗೆ ಹಾನಿ ಮಾಡದೆ ಕಳೆಗಳನ್ನು ಮಾತ್ರ ಕೊಲ್ಲುವಂತಾಗಬೇಕು. ಕಳೆನಾಶಕಗಳು ಕೆಲಸ ಮಾಡ ಬೇಕಾದರೆ ಆಯ್ಕೆ, ನಿಯಮ ಮತ್ತು ಇನ್ನಿತರ ಮಾರ್ಪಾಡು ಮಾಡುವುದರಿಂದ ಸಾಧ್ಯ. ಒಂದು ಕಳೆನಾಶಕವನ್ನು ಎಲ್ಲಾ ಬೆಳೆಗಳಲ್ಲಿಯೂ ಉಪಯೋಗಿಸು ವುದಕ್ಕೆ ಆಗುವುದಿಲ್ಲ. ಉದಯ ಪೂರ್ವ ಬೆಳೆನಾಶಕಗಳನ್ನು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 3-5 ದಿನದೊಳಗೆ ನೆಲದ ಮೇಲೆ ಎಲ್ಲ ಭಾಗಕ್ಕೂ ಬೀಳುವ ಹಾಗೆ ಸಿಂಪಡಣೆ ಮಾಡಬೇಕು. ಉದಯೋತ್ತರ ಕಳೆನಾಶಕಗಳನ್ನು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 15-20 ದಿನಗಳಲ್ಲಿ ಕಳೆಗಳು 2-4 ಎಲೆ ಬಿಟ್ಟಿರುವ ಸಮಯದಲ್ಲಿ ಬೆಳೆಗಳು ಸೇರಿ ನೆಲದ ಮೇಲೆಯೂ ಎಲ್ಲ ಭಾಗಕ್ಕೂ ಬೀಳುವ ಹಾಗೆ ಸಿಂಪಡಣೆ ಮಾಡಬೇಕು.

ಸಮಗ್ರ ಕಳೆ ನಿರ್ವಹಣೆ ಪದ್ಧತಿ ಎಂದರೇನು?

ಒಂದು ಬೆಳೆ ಪದ್ಧತಿಯಲ್ಲಿ ಆರ್ಥಿಕ ಹಾನಿ ಮಟ್ಟಕ್ಕಿಂತ ಇಳುವರಿ ಕಡಿಮೆಯಾಗದಂತೆ ಕಳೆಗಳ ಪೈಪೋಟಿಯನ್ನು ಕಡಿಮೆ ಖರ್ಚಿನ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಳೆ ನಿರ್ವಹಣಾ ಪದ್ಧತಿಯನ್ನು ಸಂಯೋಜಿಸಿ ಕಳೆ ನಿಯಂತ್ರಿಸುವುದಕ್ಕೆ ಕಳೆ ನಿರ್ವಹಣಾ ಪದ್ಧತಿ ಎಂದು ಕರೆಯುತ್ತಾರೆ.

ಕಳೆ ನಿರ್ವಹಣೆ ವಿಧಾನ
1. ಬೇಸಾಯ ಪದ್ಧತಿ

2. ಯಾಂತ್ರಿಕ ಪದ್ಧತಿ

3. ಕಳೆನಾಶಕಗಳ ಬಳಕೆ

4. ಜೈವಿಕ ಪದ್ಧತಿಗಳು

ಈ ಕೆಳಕಂಡ ಪರಿಸ್ಥಿತಿಯಲ್ಲಿ ಅಥವಾ ಅನ್ಯ ಮಾರ್ಗವಿಲ್ಲದೆ ರಾಸಾಯನಿಕ ಕೀಟನಾಶಕಗಳನ್ನು ಎಚ್ಚರಿಕೆಯಿಂದ ಬಳಸಬೇಕು.

1. ಕೈಯಲ್ಲಿ ಕಳೆ ಕೀಳದಿರುವುದಕ್ಕೆ ಆಗದಿದ್ದಾಗ.

2. ಕಳೆ ಮತ್ತು ಸಸಿಗಳು ಒಂದೇ ರೀತಿ ಕಾಣುವಾಗ (ಭತ್ತ, ಗೋಧಿ) .

3. ಕೃಷಿ ಕಾರ್ಮಿಕರಿಗೆ ಕೊಡುವ ಕೂಲಿ, ರಾಸಾಯನಿಕ ಕಳೆನಾಶಕ ಬಳಕೆಗಿಂತ ಹೆಚ್ಚಿದ್ದರೆ.

4. ಕೃಷಿ ಕಾರ್ಮಿಕರು ಸಿಗದೆ ಇದ್ದಾಗ.

ಪಾರ್ಥೇನಿಯಂ ಕಳೆ ನಿಯಂತ್ರಣ

ಪಾರ್ಥೇನಿಯಂ ಕಳೆ ಕೆಲವು ಪ್ರದೇಶಗಳಲ್ಲಿ ಬಹು ಬೇಗ ಹರಡುವುದರಿಂದ ಅವುಗಳನ್ನು ಕಂಡ ತತ್‌ಕ್ಷಣವೇ ನಾಶಮಾಡಲು ಈ ಕ್ರಮ ಅನುಸರಿಸಬೇಕು.

1. ಹೂ ಬಿಡುವುದಕ್ಕೆ ಮೊದಲು ಗಿಡ ಕೀಳಬೇಕು.

2. ಪಾರ್ಥೇನಿಯಂ ನಾಶಕ್ಕೆ ಕೆಲವು ಬೀಜಗಳನ್ನು ಬಿತ್ತನೆ ಮಾಡಬೇಕು.

3. ಕೆಲವು ಕೀಟಗಳನ್ನು ಪಾರ್ಥೇನಿಯಂ ಕಳೆ ತಿನ್ನಲು ಬಿಡುವುದು.

 ಜಯಾನಂದ ಅಮೀನ್‌ ಬನ್ನಂಜೆ


ಈ ವಿಭಾಗದಿಂದ ಇನ್ನಷ್ಟು

  • ಈ ವಾರವೂ ಹೊಸ ಅಡಿಕೆ 5 ರೂ. ಹೆಚ್ಚಳಗೊಂಡು 210-245 ರೂ. ತನಕ ಖರೀದಿಯಾಗಿದೆ. ಹಳೆಯ ಅಡಿಕೆ (ಸಿಂಗಲ್‌ ಚೋಲ್‌)260 -297 ರೂ. ತನಕ ಖರೀದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ...

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಈಗಾಗಲೇ ಚಳಿಗಾಲ ಆರಂಭಗೊಂಡಿದ್ದು, ಅದಕ್ಕೆ ತಕ್ಕಂತೆಯೇ ಬಟ್ಟೆಗಳ ಪ್ಯಾಶನ್‌ ಕೂಡ ಬದಲಾಗುತ್ತಿದೆ. ಕೊರೆವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಯಾವ ರೀತಿಯ ಬಟ್ಟೆ...

  • ವಾಹನಗಳ ವ್ಯಾಪಕ ಬಳಕೆ ಬಳಿಕ ಪಿಕಪ್‌ ಕಡಿಮೆಯಾಗಿದೆ, ಆಗಾಗ್ಗೆ ನಿಲ್ಲುತ್ತದೆ, ಮೈಲೇಜ್‌ ಕಡಿಮೆ, ಹೆಚ್ಚು ಹೊಗೆ ಕಾರುವ ಸಮಸ್ಯೆಗಳು ನಿಮ್ಮ ಅನುಭವಕ್ಕೆ ಬರಬಹುದು....

ಹೊಸ ಸೇರ್ಪಡೆ