Udayavni Special

ಹೂಕೋಸು, ಕ್ಯಾಬೇಜ್‌ ಕೃಷಿ

ಬಾಳಿಲದ ಗೃಹಿಣಿಯ ಪ್ರಯೋಗ ಯಶಸ್ಸು

Team Udayavani, Feb 23, 2020, 4:29 AM IST

ram-22

ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು ಯಶಸ್ವಿಯಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪೋಷಣೆ ಮಾತ್ರ ನೀಡಿ ಬೆಳೆದ ವಿಷರಹಿತ ಕ್ಯಾಬೇಜ್‌ ಮತ್ತು ಹೂಕೋಸ್‌ ಗಿಡಗಳಲ್ಲಿ ಬೆಳೆಲದ ಬೆಳೆ ಖಾದ್ಯ ಸವಿಯಲು ಸಿದ್ಧವಾಗಿದೆ.

ವಾಟ್ಸ್‌ ಆ್ಯಪ್‌ ಪ್ರೇರಣೆ
ಸುಳ್ಯ ತಾಲೂಕಿನ ಬಾಳಿಲದ ಪ್ರಗತಿಪರ ಕೃಷಿಕ ನೆಟ್ಟಾರು ಗೋಪಾಲಕೃಷ್ಣ ಭಟ್ಟರ ಪತ್ನಿ ವಿಜಯಕುಮಾರಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಒಂದರಲ್ಲಿ ಬಂದ ಸಂದೇಶವೊಂದರಿಂದ ಪ್ರೇರಿತರಾಗಿ ಕ್ಯಾಬೇಜ್‌ ಮತ್ತು ಹೋಕೋಸು ಬೆಳೆಯನ್ನು ತನ್ನ ಮನೆಯಲ್ಲೂ ಬೆಳೆಯುವ ಉತ್ಸಾಹ ತೋರಿ ಯಶಸ್ಸು ಕಂಡವರು. ಬೆಟ್ಟಂಪಾಡಿ ಹರಿಕೃಷ್ಣ ಕಾಮತ್‌ ಅವರ ಮನೆಯಿಂದ ಈ ಎರಡೂ ಬೆಳೆಗಳ ತರಕಾರಿ ಬೀಜಗಳನ್ನು ತಂದು ಕೃಷಿ ಆರಂಭಿಸಿದ್ದರು.

ಸಾವಯವ ಪೋಷಣೆ
ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳಾದ ಇವುಗಳನ್ನು ಋತುಮಾನಕ್ಕೆ ತಕ್ಕಂತೆ ನವೆಂಬರ್‌ ತಿಂಗಳ ಮೊದಲ ವಾರ ಬಿತ್ತನೆ ಮಾಡಿದರು. ಮೊದಲ ಪ್ರಯೋಗವಾದ ಕಾರಣ ತಲಾ 15 ಬೀಜಗಳನ್ನು ಮಾತ್ರ ಬಿತ್ತನೆ ಮಾಡಿದರು. ಇವುಗಳ ಪೈಕಿ 5 ಕ್ಯಾಬೇಜು ಹಾಗೂ 10 ಹೂಕೋಸು ಗಿಡಗಳು ಸೊಂಪಾಗಿ ಬೆಳೆದವು. ಕೆಂಪು ಮಣ್ಣು, ಮರಳು, ಸುಡುಮಣ್ಣಿನ ಮಿಶ್ರಣದಲ್ಲಿ ಬೆಳೆಸಿದ ಈ ಗಿಡಗಳಿಗೆ ಪ್ರತಿನಿತ್ಯ ನೀರಿನ ಜೊತೆ ಹುಳಿ ಬರಿಸಿದ ಬೇವಿನ ಹಿಂಡಿ, ಸೆಗಣಿ ನೀರಿನಿಂದ ಶುದ್ಧ ಸಂಪೂರ್ಣ ಸಾವಯವ ಪೋಷಣೆ ನೀಡಿದ್ದಾರೆ.

ಸಿದ್ಧವಾಗಿದೆ ಬೆಳೆ
ಸಾವಯವ ಪೋಷಣೆಯಿಂದ ಬೆಳೆದ ಗಿಡದಲ್ಲಿ ಮೂರೇ ತಿಂಗಳಲ್ಲಿ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆದು ಕೊಯ್ಯಲು ಸಿದ್ಧವಾಗಿದೆ. ಈ ತಿಂಗಳಲ್ಲಿ ಬಾಳಿಲದ ವಿಜಯ ಕುಮಾರಿಯವರ ಮನೆಗೆ ಭೇಟಿ ನೀಡುವ ಆಸಕ್ತ ಕೃಷಿಕರಿಗೆ ಸಾವಯವವಾಗಿ ಬೆಳೆಸಿದ ಹೂಕೋಸಿನಿಂದ ಮಾಡಿದ ಖಾದ್ಯಗಳನ್ನು ಸವಿಯುವ ಭಾಗ್ಯ ಸಿಗಲಿದೆ.

ಮೊದಲ ಪ್ರಯೋಗ ಯಶಸ್ಸು
ಕರಾವಳಿಯ ಹವಾಮಾನಕ್ಕೆ ಒಗ್ಗದ ಹೂಕೋಸು ಮತ್ತು ಕ್ಯಾಬೇಜ್‌ ನಮ್ಮ ಮನೆಯಂಗಳದಲ್ಲಿ ಸೊಂಪಾಗಿ ಬೆಳೆದು ಫ‌ಲ ನೀಡಿರುವುದು ಖುಷಿ ತಂದಿದೆ. ಮೊದಲ ಪ್ರಯೋಗವಾದ ಕಾರಣ ಸೀಮಿತ ಮಟ್ಟಕ್ಕೆ ಬೆಳೆ ಸಿಕ್ಕಿದೆ.
– ವಿಜಯಕುಮಾರಿ , ಗೃಹಿಣಿ

ಉಮೇಶ್‌ ಮಣಿಕ್ಕಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೆಳಗಾವಿ: 100 ವರ್ಷ ಹಳೆಯ ಮನೆ ಗೋಡೆ ಕುಸಿತ: ನಾಲ್ವರ ರಕ್ಷಣೆ

ಬೆಳಗಾವಿ: 100 ವರ್ಷ ಹಳೆಯ ಮನೆ ಗೋಡೆ ಕುಸಿತ: ನಾಲ್ವರ ರಕ್ಷಣೆ

ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ

ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ

ದಾವಣಗೆರೆ: ಕೋವಿಡ್ ಗೆ 5 ಸಾವು; ಬಲಿಯಾದವರ ಸಂಖ್ಯೆ 126ಕ್ಕೆ ಏರಿಕೆ

ದಾವಣಗೆರೆ: ಕೋವಿಡ್ ಗೆ 5 ಸಾವು; ಬಲಿಯಾದವರ ಸಂಖ್ಯೆ 126ಕ್ಕೆ ಏರಿಕೆ

beedar

ಬೀದರ್: ಒಂದೇ ದಿನ ಶತಕ ಬಾರಿಸಿದ ಕೋವಿಡ್: ಸೋಂಕಿಗೆ ಮೂವರು ಬಲಿ, 107ಕ್ಕೇರಿದ ಮೃತರ ಸಂಖ್ಯೆ

ಫುಟ್‌ಬಾಲ್‌, ಬ್ಯಾಡ್ಮಿಂಟನ್‌ ಒಲವಿದ್ದರೂ ಕ್ರಿಕೆಟರ್ ಆದ ಧೋನಿ

ಫುಟ್‌ಬಾಲ್‌ ಒಲವು ಹೊಂದಿದ್ದ ಮಾಹಿ ಕ್ರಿಕೆಟ್ ಬ್ಯಾಟ್ ಹಿಡಿದ ಹಿಂದಿದೆ ರೋಚಕ ಕಥೆ

suresh

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಸುರೇಶ್ ರೈನಾ ನಿವೃತ್ತಿ

ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ನೆರವು: ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಕರೆ

ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ನೆರವು: ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಕರೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naikಹೊಸ ಸೇರ್ಪಡೆ

ಬೆಳಗಾವಿ: 100 ವರ್ಷ ಹಳೆಯ ಮನೆ ಗೋಡೆ ಕುಸಿತ: ನಾಲ್ವರ ರಕ್ಷಣೆ

ಬೆಳಗಾವಿ: 100 ವರ್ಷ ಹಳೆಯ ಮನೆ ಗೋಡೆ ಕುಸಿತ: ನಾಲ್ವರ ರಕ್ಷಣೆ

ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ

ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ

ದಾವಣಗೆರೆ: ಕೋವಿಡ್ ಗೆ 5 ಸಾವು; ಬಲಿಯಾದವರ ಸಂಖ್ಯೆ 126ಕ್ಕೆ ಏರಿಕೆ

ದಾವಣಗೆರೆ: ಕೋವಿಡ್ ಗೆ 5 ಸಾವು; ಬಲಿಯಾದವರ ಸಂಖ್ಯೆ 126ಕ್ಕೆ ಏರಿಕೆ

beedar

ಬೀದರ್: ಒಂದೇ ದಿನ ಶತಕ ಬಾರಿಸಿದ ಕೋವಿಡ್: ಸೋಂಕಿಗೆ ಮೂವರು ಬಲಿ, 107ಕ್ಕೇರಿದ ಮೃತರ ಸಂಖ್ಯೆ

ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ: ವಿತರಕರು,ಚಿಲ್ಲರೆ ಮಾರಾಟಗಾರರ ಪರವಾನಗಿ ಅಮಾನತ್ತು

ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ: ವಿತರಕರು,ಚಿಲ್ಲರೆ ಮಾರಾಟಗಾರರ ಪರವಾನಗಿ ಅಮಾನತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.