ವಾಹನ ವಿಮೆ ಇರಲಿ ಮಾಹಿತಿ

Team Udayavani, Nov 4, 2019, 5:00 AM IST

ವಿಮೆಗೆ ಒಳಪಡದ ವಾಹನವನ್ನು ಓಡಿಸುವುದನ್ನು ಕೂಡ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ದಂಡದ ಮೊತ್ತದಲ್ಲಿ ದ್ವಿಚಕ್ರವಾಹನ ಒಂದರ ವಿಮೆ ಸಲೀಸಾಗಿ ಬಂದುಬಿಡುತ್ತದೆ. ವಾಹನ ವಿಮೆಗಳ ಕುರಿತು ಎಲ್ಲ ಸವಾರರೂ ತಿಳಿದುಕೊಂಡಿರಬೇಕು. ಈ ಕುರಿತು ಮಾಹಿತಿ ಇಲ್ಲಿದೆ.

ವಾಹನ ವಿಮೆಯಲ್ಲಿ ಮೂರನೇ ವ್ಯಕ್ತಿ ವಿಮೆ ಮತ್ತು ಸಮಗ್ರ ಮೋಟಾರು ವಿಮೆ ಎಂಬ ಎರಡು ವಿಧಗಳಿವೆ. ಇದರಲ್ಲಿ ಅಘಘಾತಕ್ಕೀಡಾದಾಗ ಗಾಯಗೊಳ್ಳುವ, ಪ್ರಾಣ ಕಳೆದುಕೊಳ್ಳುವ ವ್ಯಕ್ತಿ, ಹಾನೀಗಿಡಾಗುವ ಆಸ್ತಿಗೆ ವಿಮೆಗೆ ಒದಗಿಸುತ್ತದೆ. ಸಮಗ್ರ ಮೋಟಾರು ವಿಮೆಯೂ ಅಪಘಾತಗೊಂಡ ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸಲಾಗುತ್ತದೆ. ಬಂಪರ್‌ಟು ಬಂಪರ್‌ ವಿಮೆ ಮಾಡಿಸಿದರೆ ಕಾರಿನ ಎ.ಸಿ., ಮ್ಯೂಸಿಕ್‌ಸಿಸ್ಟಂ ಹಾಗೂ ಇತರ ಆ್ಯಕ್ಸೆಸರೀಸ್‌ಗಳು ಸಹ ವಿಮೆ ವ್ಯಾಪ್ತಿಗೆ ಒಳಪಡುತ್ತವೆ.

ನೋ ಕ್ಲೇಮು ಬೋನಸ್‌(ಎನ್‌ಸಿಬಿ)
ನಿಮ್ಮ ವಾಹನ ಒಮ್ಮೆಯೂ ಕೂಡ ಅಪಘಾತವಾಗದಿದ್ದರೆ ಅದು ನೋ ಕ್ಲೇಮುಬೋನಸ್‌ ವ್ಯಾಪ್ತಿಗೆ ಬರುತ್ತದೆ. ನೀವು ಅಪಘಾತ ಎಸಗದೆ, ಯಾವುದೇ ಕ್ಲೇಮುಗಳನ್ನು ಮಾಡದೆ ಪ್ರತಿ ವರ್ಷ ಪಾಲಿಸಿ ರಿನೀವಲ್‌ ಮಾಡಿಸುತ್ತಿದ್ದರೆ, ವರ್ಷದಿಂದ ವರ್ಷಕ್ಕೆ ನಿಮ್ಮ ಪಾಲಿಸಿಯ ಪ್ರೀಮಿಯಂ ಮೊತ್ತದಲ್ಲಿ ಶೇ. 20ರಿಂದ 50ರಷ್ಟು ಕಡಿಮೆಯಾಗುತ್ತದೆ. ಒಂದೊಮ್ಮೆ ನೀವು ಐದು ವರ್ಷ ಯಾವುದೇ ಅಪಘಾತ ಎಸಗದೇ, ಯಾವುದೇ ಕ್ಲೇಮು ಮಾಡದೇ ವಾಹನ ನಿರ್ವಹಿಸಿದ್ದೇ ಆದರೆ, ವಿಮಾ ಕಂಪೆನಿ ನಿಮಗೆ ಶೇ. 50ರಷ್ಟು ಡಿಸ್ಕೌಂಟ್‌ ನೀಡಬಹುದು.

ಸುಲಭ ವಿಮೆ
ಪ್ರಸ್ತುತವಾಗಿ ವಾಹನ ವಿಮೆ ಮಾಡಿಸುವುದು ಕಷ್ಟದ ಕೆಲಸವೇನಿಲ್ಲ. ಎಲ್ಲವೂ ಡಿಜಿಟಲ್‌ ಆಗಿರುವುದರಿಂದ ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ವಾಹನ ವಿಮೆ ಮಾಡಿಸಬಹುದು.

ಕಂಪ್ಯೂಟರ್‌ ಅಥವಾ ಮೊಬೈಲ್‌ ಮೂಲಕ ಪಾಲಿಸಿ ಬಜಾರ್‌ ರೀತಿಯ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟರೆ, ಜಗತ್ತಿನಲ್ಲಿರುವ ಎಲ್ಲ ವಿಮಾ ಕಂಪೆನಿಗಳು, ಅವುಗಳು ನೀಡುತ್ತಿರುವ ಆಫರ್‌ಗಳು, ನಿಮ್ಮ ವಾಹನಕ್ಕೆ ವಿವಿಧ ಕಂಪೆನಿಗಳು ಕೋಟ್‌ ಮಾಡಿರುವ ಪ್ರೀಮಿಯಂ ಮೊತ್ತ, ಪ್ರಯೋಜನಗಳು ಸೇರಿ ಎಲ್ಲ ಅಂಶಗಳು ಕ್ಷಣಾರ್ಧದಲ್ಲಿ ಕಣ್ಣೆದುರಿಗೆ ಬರುತ್ತವೆ.

ಹಣ ಪಾವತಿ ಮಾಡಿದ ಒಂದು ನಿಮಿಷದ ಒಳಗೆ ಪಾಲಿಸಿ ದಾಖಲೆಗಳು ನಿಮ್ಮ ಇಮೇಲ್‌ ವಿಳಾಸಕ್ಕೆ ಬರುತ್ತದೆ. ಇದಾದ ವಾರದೊಳಗೆ ವಿಮೆಯ ಅಸಲಿ ಪತ್ರಗಳು ಕೊರಿಯರ್‌ ಮೂಲಕ ನಿಮ್ಮ ಮನೆಗೆ ಬರುತ್ತವೆ. ಹೀಗಾಗಿ, ಆನ್‌ಲೈನ್‌ಮೂಲಕ ವಿಮೆ ಖರೀದಿಸುವುದು ಅತ್ಯಂತ ಸುಲಭ ಮಾರ್ಗ. ಆನ್‌ ಲೈನ್‌ ಮೂಲಕ ವಿಮೆ ಖರೀದಿಸುವುದರ ದೊಡ್ಡ ಲಾಭವೆಂದರೆ, ಇಲ್ಲಿ ನಿಮಗೆ ಹೆಚ್ಚು ಆಯ್ಕೆಗಳಿರುತ್ತವೆ. ಹೀಗಾಗಿ, ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುವ ಪಾಲಿಸಿಯನ್ನು ನೀವು ಖರೀದಿಸಬಹುದು.

ವಿಮೆ ಕ್ಲೇಮು ಆಗುವುದು ಹೇಗೆ?
ವಿಮಾ ಕಂಪೆನಿ ಕೇಳುವ ಎಲ್ಲ ದಾಖಲೆಗಳನ್ನು ನೀವು ಒದಗಿಸಿದ ಮಾತ್ರಕ್ಕೆ ಕೆಲಸ ಮುಗಿಯಿತು ಎಂದು ನಿಟ್ಟುಸಿರು ಬಿಡುವಂತಿಲ್ಲ. ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ ಅನಂತರವೂ, ಕಂಪೆನಿಯು ಓರ್ವ ಸರ್ವೇಯರ್‌ನ್ನು ನೇಮಿಸುತ್ತದೆ. ಸತ್ಯಾಸತ್ಯತೆ ತಿಳಿಯಲು ಆತ ವಿಮೆಗೆ ಒಳಪಟ್ಟ ನಿಮ್ಮ ಕಾರು, ಬೈಕ್‌ ವಾಹನವನ್ನು ಖುದ್ದು ಪರಿಶೀಲಿಸುತ್ತಾನೆ. ಅನಂತರ ವಾಹನದ ರಿಪೇರಿಗೆ ತಗುಲಬಹುದಾದ ಮೊತ್ತವನ್ನು ಅಂದಾಜಿಸುತ್ತಾನೆ. ಈ ಸರ್ವೆಯರ್‌ ಬಂದು ವಾಹನ ಪರಿಶೀಲಿಸಿದ ಬಳಿಕವೇ ನೀವು ವಾಹನವನ್ನು ರಿಪೇರಿಗೆ ಕೊಡಬೇಕು. ಮೊದಲೇ ರಿಪೇರಿ ಮಾಡಿಸಿದ್ದರೆ ನಿಮ್ಮ ವಿಮಾ ಮೊತ್ತ ಬರುವುದಿಲ್ಲ. ಒಂದೊಮ್ಮೆ ನಿಮ್ಮ ವಾಹನ ಕಳವಾಗಿದ್ದಲ್ಲಿ ವಿಮಾ ಕಂಪೆನಿಯ ಪ್ರತಿನಿಧಿಯ ಜತೆ, ವಾಹನ ಕಳವಾದ ಸ್ಥಳದ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಬೇಕು. ವಾಹನದೊಂದಿಗೆ ಅಸಲಿ ಆರ್‌ಸಿ ಕೂಡ ಕಳುವಾಗಿದ್ದರೆ, ಸಂಬಂಧಿಸಿದ ಆರ್‌ಟಿಒದಲ್ಲೂ ದೂರು ದಾಖಲಿಸಿ ಮತ್ತೂಂದು ಆರ್‌ಸಿ ಪಡೆಯಬೇಕು. ಇಷ್ಟೆಲ್ಲ ಮಾಡಿದ ಅನಂತರ ಪೊಲೀಸರು ಮತ್ತು ಆರ್‌ಟಿಒ ವಾಹನ ಹುಡುಕಲು ಇಂತಿಷ್ಟು ಸಮಯ ನಿಗದಿಯಾಗಿರುತ್ತದೆ. ಆ ಸಮಯ ಮುಗಿಯುವವರೆಗೂ ವಿಮೆ ಹಣ ನಿಮ್ಮ ಕೈ ಸೇರುವುದಿಲ್ಲ. ಇದಕ್ಕೆ ತಿಂಗಳುಗಳೇ ತಗಲುತ್ತವೆ.

ಕ್ಲೇಮುಗೆ ಬೇಕಾದ ದಾಖಲೆ
· ವಿಮಾ ಪಾಲಿಸಿಯ ಅಸಲಿ ದಾಖಲೆ
· ವಾಹನದ ನೋಂದಣಿಗೆ ಸಂಬಂಧಿಸಿದ ದಾಖಲೆ(ಆರ್‌ಸಿ)
· ವಾಹನ ಮಾಲಕರ ಚಾಲನ ಪರವಾನಿಗಿ (ಡಿಎಲ್‌)
· ವಾಹನ ಅಪಘಾತಕ್ಕೀಡಾದ ಬಗ್ಗೆ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿ ಪಡೆದ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ಪ್ರತಿ
· ವಾಹನ ರಿಪೇರಿ ಮಾಡಿಸಿದ್ದಕ್ಕೆ ಪ್ರತಿಯಾಗಿ ನೀವು ಪಾವತಿಸಿದ ಹಣದ ಅಧಿಕೃತ, ಸವಿವರವಾದ ಬಿಲ್‌

-   ಬಸವರಾಜ ಕೆ. ಜಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ತೆಗೆದರೆ ರಸಿಕ, ಗಡ್ಡ ಬಿಟ್ಟರೆ ಸನ್ಯಾಸಿ. ಗಡ್ಡ ಬಿಟ್ಟು ಬಗಲಲ್ಲೊಂದು ಖಾದಿ ಚೀಲ ಇಳಿಬಿಟ್ಟಿದ್ದರೆ ಆತ ಒಂದೋ ವಿಚಾರವಾದಿ, ಇಲ್ಲವೇ ಸಾಹಿತಿ. ಆಕರ್ಷಕವಾಗಿ ಗಡ್ಡ...

  • ಅಧಿಕ ಮಳೆಯಾಗುವ ಕರಾವಳಿ ಭಾಗಗಳಲ್ಲಿ ಬೆಳೆಗಳಿಗೆ ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ. ಮಳೆಗಾಲ ಪೂರ್ವದಲ್ಲಿ ಸಾರಜನಕ ಕಡಿಮೆ ಇರುವ ಗೊಬ್ಬರ...

  • ಮನೆಯ ಮೆರುಗನ್ನು ಹೆಚ್ಚಿಸಬೇಕೆಂದು ಹೆಚ್ಚಿನ ಹಣವನ್ನು ವಿನಿಯೋಗಿಸುತ್ತೇವೆ. ಆದರೆ ನಮ್ಮ ಮನೆಯಲ್ಲಿರುವ ಹಳೆ ಕಾಲದ ವಸ್ತುಗಳಿಗೆ ಹೊಸ ಅವತಾರ ನೀಡಿ, ನಮ್ಮ ಮನೆಯ...

  • ಗಿಡ ಬೆಳೆಸುವುದು ನಿಮ್ಮ ನೆಚ್ಚಿನ ಹವ್ಯಾಸವಾಗಿದ್ದು, ಸ್ಥಳವಿಲ್ಲ ಚಿಂತೆ ಕಾಡುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಮನೆಯೊಳಗೆ ಬೆಳೆಯುವ ಕೆಲವೊಂದು ಗಿಡಗಳು,...

  • ಮನೆ ಅಂದವಾಗಿರಲು ಮನೆಯೊಳಗೆ ಪೀಠೊಪಕರಣಗಳು ಬೇಕಾಗುತ್ತವೆ. ಮನೆಗೆ ವಸ್ತುಗಳನ್ನು ಖರೀದಿಸುವಾಗ ಹಲವಾರು ರೀತಿಯಲ್ಲಿ ಗಮನಹರಿಸಬೇಕಾಗುತ್ತದೆ. ಅಂತೆಯೇ ಮನೆಯ...

ಹೊಸ ಸೇರ್ಪಡೆ