ಮುರಿದುದನ್ನು ಜೋಡಿಸಲು ಕಲಿಯಿರಿ

Team Udayavani, Dec 16, 2019, 5:17 AM IST

ಸಾಂದರ್ಭಿಕ ಚಿತ್ರ.

ಐದು ವರ್ಷದ ಮಗುವೊಂದು ಶಾಲೆಯಿಂದ ಬಂದು ಜೋರಾಗಿ ಅಳುತ್ತಿತ್ತು. ಕಾರಣ ಅಂದು ಬೆಳಗ್ಗೆ ಅದರ ಅಮ್ಮ ತೆಗೆಸಿಕೊಟ್ಟಿದ್ದ ಪೆನ್ಸಿಲ್‌ ಗೆಳೆಯರ ಗುಂಪಿನಲ್ಲಿ ಸೇರಿ ಎರಡು ಚೂರಾಗಿತ್ತು. ಅದಕ್ಕಿಂತ ಹೆಚ್ಚಾಗಿ ಇನ್ನು ಆ ಪೆನ್ಸಿಲ್‌ ಉಪಯೋಗಿಸಲು ಸಾಧ್ಯವಿಲ್ಲ ಎಂದು ಗೆಳೆಯರು ನಕ್ಕಾಗ ಬೇಸರದ ಜತೆಗೆ ಅಳುವೂ ಒತ್ತರಿಸಿ ಬಂದಿತ್ತು. ಅಮ್ಮ ಮಗುವಿನ ಅಳುವನ್ನು ನೋಡಿ ಸಮಾಧಾನ ಪಡಿಸಿ ಮುರಿದ ಪೆನ್ಸಿಲನ್ನು ತೆಗೆದುಕೊಂಡು ಅದನ್ನು ಚಂದ ಮೊನೆ ಮಾಡಿ ಎರಡು ಪೆನ್ಸಿಲ್‌ ಆಗಿ ಬದಲಾಯಿಸಿಕೊಟ್ಟರು. ಮಗುವಿನ ಅಳು ಒಂದೇ ಕ್ಷಣದಲ್ಲಿ ಮಾಯ.

ಮಗುವಿಗೆ ಮುರಿದುದು ಇನ್ನೆಂದೂ ಸರಿಯಾಗುವುದಿಲ್ಲವೆಂದು ಮಾತ್ರ ತಿಳಿದಿತ್ತು. ಆದರೆ ಅಮ್ಮನಿಗೆ ಮುರಿದ ಆ ವಸ್ತುವಿನ ಮರುಬಳಕೆ ತಿಳಿದಿತ್ತು. ಇಷ್ಟೇ ವ್ಯತ್ಯಾಸ. ಅದರಲ್ಲಿ ಮಾಯವಾದುದು ಮಗುವಿನ ದುಃಖ. ಇದು ಜೀವನ. ಪ್ರತಿಯೊಂದು ವಸ್ತು, ವ್ಯಕ್ತಿಗಳನ್ನು ಒಂದಲ್ಲ ಒಂದು ಘಟ್ಟದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಕಳೆದುಕೊಂಡದ್ದು ಹೋಯಿತೆಂದು ದುಃಖ ಪಡದೆ ಮುಂದುವರಿಯುವುದೇ ಜೀವನ. ಜೀವನವೇ ಹಾಗೇ ಕೆಲವೊಂದು ನಾವಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದರೆ ಮತ್ತೂಂದು ಕ್ಷಣಕ್ಕೆ ಎಲ್ಲವೂ ಉಲ್ಟಾ ಪಲ್ಟಾ ಆಗಿ ಜೀವನ ಅಯೋಮಯವಾಗಿ ಬಿಡುತ್ತದೆ. ಆದರೆ ಸಮಯ ಅಲ್ಲೇ ನಿಲ್ಲುವುದಿಲ್ಲ, ನಾವಲ್ಲಿ ನಿಂತುಬಿಟ್ಟರೆ ಮತ್ತೆಂದೂ ಸಮಯದ ಜತೆ ಹೆಜ್ಜೆ ಹಾಕಲಾಗುವುದಿಲ್ಲ. ಅದರ ಬದಲಾಗಿ ಕಳೆದುಕೊಂಡದುದರ ಬಗ್ಗೆ ಚಿಂತಿಸದೆ ಮುಂದು ವರಿಯುತ್ತಲೇ ಇರಬೇಕು. ಅದು ನಿಜ ಅರ್ಥದ ಬದುಕು.

ಅಳುತ್ತಿದ್ದ ಮಗುವಿಗೆ ಅಮ್ಮ ಬೇರೊಂದು ಪೆನ್ಸಿಲ್‌ ತೆಗೆಸಿಕೊಡಬಹುದಿತ್ತು. ಮಗುವಿಗೆ ಖುಷಿಯೂ ಆಗುತ್ತಿತ್ತು. ಆದರೆ ಅಮ್ಮ ಆ ಪೆನ್ಸಿಲಿಗೆ ಮತ್ತೆ ಬೇರೊಂದು ರೂಪ ನೀಡಿದಳು. ಹಾಗೇ ನಾವಂದುಕೊಂಡಂತಯೇ ಎಲ್ಲ ಬಾರೀ ಜೀವನ ನಡೆಯುವುದಿಲ್ಲ. ಕೆಲವೊಂದು ಬಾರಿ ನಾವೇ ಅದಕ್ಕೊಂದು ಹೊಸ ರೂಪನೀಡಿ ಮುಂದುವರಿಯಬೇಕಾಗುತ್ತದೆ.

- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ