- Monday 09 Dec 2019
ವಿಶಾಲ ಚಿಂತನೆ ನಮ್ಮದಾಗಲಿ
Team Udayavani, Nov 18, 2019, 5:00 AM IST
ನ್ಯಾಯಾಲಯದಲ್ಲಿ ಕೇಸ್‌ವೊಂದರ ಕುರಿತು ಗಂಭೀರ ವಾದ-ವಿವಾದ ನಡೆಯುತ್ತಿತ್ತು. ಮಾನ್ಯ ಗೌರವಾನ್ವಿತ ಮ್ಯಾಜಿಸ್ಟ್ರೇಟ್ ಆದ ಮುಲ್ಲಾ ನಸ್ರುದ್ದೀನ್ ಅವರು ಅಷ್ಟೇ ಗಂಭೀರವಾಗಿ ಚರ್ಚೆಯನ್ನು ಆಲಿಸುತ್ತಿದ್ದರು. ಇದು ಅವರ ಮೊದಲ ಮೊಕದ್ದಮೆಯ ತೀರ್ಪು ಇದಾಗಿತ್ತು. ಮೊದಲ ಫಿರ್ಯಾದಿದಾರರು ವಾದವನ್ನು ಮಾಡುವಾಗ ಆಸಕ್ತಿಯಿಂದ ಕೇಳುತ್ತಿದ್ದ ನ್ಯಾಯಮೂರ್ತಿ ಮುಲ್ಲಾ ನಸ್ರುದ್ದೀನ್ ಮೊದಲನೆಯ ವಾದ ಮುಗಿದ ಅನಂತರವೇ ಕೋರ್ಟ್‌ನ್ನು ಉದ್ದೇಶಿಸಿ, “ನಾನು ಈ ವಾದವನ್ನು ಗಂಭೀರವಾಗಿ ಆಲಿಸಿದ್ದೇನೆ. ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಅಂತಿಮ ತೀರ್ಪು ನೀಡಲಿದ್ದೇನೆ ಎಂದರು.
ತತ್‌ಕ್ಷಣವೇ ಇಡೀ ನ್ಯಾಯಾಲಯವೇ ಸ್ತಬ್ಧ. ಫಿರ್ಯಾದಿದಾರರು, ವಕೀಲರು, ಅಪರಾಧಿಗಳು ಮತ್ತು ನೆರೆದಿದ್ದ ಸಾರ್ವಜನಿಕರು ಮೂಗಿನ ಮೇಲೆ ಬೆರಳಿಟ್ಟ ಆಶ್ಚರ್ಯ ಚಕಿತರಾದರು.
ಈ ಸಂಗತಿಯನ್ನು ಕಂಡ ಅಲ್ಲೇ ಇದ್ದ ಕ್ಲರ್ಕ್, ಮಾನ್ಯ ಮ್ಯಾಜಿಸ್ಟ್ರೇಟ್ ಬಳಿ ಬಂದು ” ಸ್ವಾಮೀ ಇನ್ನೊಂದು ಪಕ್ಷದವರು ವಾದ ಮಾಡುವುದು ಇದೇ. ಅವರ ವಾದವನ್ನು ಆಲಿಸಿದೇ ನೀವು ಹೇಗೆ ತೀರ್ಪು ನೀಡುತ್ತೀರಿ. ಅದು ಹೇಗೆ ಸಾಧ್ಯ ಎಂದು ವಿನಮ್ರವಾಗಿ ಕೇಳಿದನು. ಆಗ ಮುಲ್ಲಾ ನಸ್ರುದ್ದೀನ್, ನೀವು ನನ್ನನ್ನು ಗೊಂದಲಕ್ಕೆ ದೂಡಬೇಡಿ, ನಾನು ಆಗಲೇ ತೀರ್ಪನ್ನು ಯೋಚಿಸಿ ಆಗಿದೆ. ನನ್ನ ಮನಸ್ಸು ಕೂಡ ಸತ್ಯವನ್ನು ಕಂಡುಕೊಂಡಿದೆ. ತೀರ್ಪನ್ನು ಘೋಷಿಸುವುದೊಂದೆ ಬಾಕಿ ಎಂದರು. ಆಗ ಮುಲ್ಲಾನಷ್ಟೇ ಗೊಂದಲಕ್ಕೀಡಾಗಲಿಲ್ಲ ಇಡೀ ಕೋರ್ಟ್ ಸಭಾಂಗಣವೇ ಗೊಂದಲಕ್ಕೀಡಾಯಿತು.
ಸೌಮ್ಯದಿಂದ ವರ್ತಿಸಿ
ಈ ಮೇಲಿನ ಕಥೆಯೂ ಕೇವಲ ಸಾಂದರ್ಭಿಕ ಮಾತ್ರ. ಮನುಷ್ಯನು ಯಾವತ್ತಿಗೂ ಸತ್ಯದರ್ಶನವಾಗದೇ ನಮ್ಮ ಮನಸ್ಸಿಗೆ ತಿಳಿಯಿತು ಎಂದು ಹೇಳಿ ಯಾವುದೇ ಸಂಗತಿಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸೌಮ್ಯದಿಂದ ವರ್ತಿಸಿ ಸತ್ಯವನ್ನು ಮೊದಲು ಅರಿಯಬೇಕು. ಜಗತ್ತಿನ ಎಲ್ಲ ಸಂಗತಿಗಳನ್ನು ಅರಿಯಬೇಕು. ಎಲ್ಲ ದೃಷ್ಟಿಕೋನದಲ್ಲಿ ಯೋಚಿಸಬೇಕು. ವಿಶಾಲವಾದ ಯೋಚನೆ ನಮ್ಮನ್ನು ಬೌದ್ಧಿಕರನ್ನಾಗಿ ಮಾಡುತ್ತದೆ. ಅದಕ್ಕಾಗಿ ಇಲ್ಲಿ ಮುಲ್ಲಾರ ತಾಳಿದ ಸಂಗತಿ ನಮಗೆ ಪಾಠವಾಗಬೇಕು ಎಂಬುದು ಈ ಕಥೆಯ ಸಾರ. ಗುರು ಓಶೋ ಅವರು ಸಾಂದರ್ಭಿಕವಾಗಿ ತಮ್ಮ ಶಿಷ್ಯರಿಗೆ ಹೇಳಿದ ಕಥೆಯಿದು.
ಈ ವಿಭಾಗದಿಂದ ಇನ್ನಷ್ಟು
-
ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ...
-
ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗುತ್ತಿದೆ. ಎಲ್ಲವೂ ಬೆರಳ ತುದಿಯಲ್ಲೇ ದೊರೆಯುತ್ತದೆ ಎನ್ನುವುದೇನೋ...
-
ನೀವು ದಿನಕ್ಕೊಮ್ಮೆಯಾದರೂ ನಿಮ್ಮೊಳಗೆ ನೀವೇ ಮಾತನಾಡಿಕೊಳ್ಳಿ, ಆಗ ನೀವು ಒಬ್ಬ ಅತ್ಯದ್ಭುತ ವ್ಯಕ್ತಿಯನ್ನೇ ಭೇಟಿಯಾಗುತ್ತೀರಿ ಎಂದು ಸ್ವಾಮಿ ವಿವೇಕಾನಂದರು...
-
ನಿನ್ನೆಯ ದಿನ ಒಂದೊಳ್ಳೆಯ ನೆನಪಾಗಿರಬೇಕು..ನಾಳೆ ಎಂಬುದು ಇಂದಿಗೆ ಸ್ಫೂರ್ತಿಯಾಗಿರಬೇಕು. ಆದರೆ ಅದೇ ನಾಳೆಯ ಚಿಂತೆಯಲ್ಲಿ ಇಂದಿನ ಖುಷಿ ಕಳೆದುಕೊಳ್ಳುವಂತಿರಬಾರದು....
-
ಜಪಾನಿನಲ್ಲಿ ಒಮ್ಮೆ ಏಡಿಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್ಲ ದೇಶಗಳ ಏಡಿಗಳನ್ನು ಒಂದು ಡಬ್ಬದಲ್ಲಿ ಹಾಕಲಾಯಿತು. ಅದರಲ್ಲಿ ಯಾವ ಏಡಿ ಬಹುಬೇಗನೆ ಮೇಲೆ ಬರುತ್ತದೆ...
ಹೊಸ ಸೇರ್ಪಡೆ
-
ಚಿಕ್ಕಬಳ್ಳಾಪುರ: ಉಪಚುನಾವಣೆಯ ಅಂಚೆ ಮತಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಹೊಸಕೋಟೆ ಪಕ್ಷೇತರ ಅಭ್ಯರ್ಥಿ...
-
ಇಂದೋರ್: ಐದು ವರ್ಷಗಳಲ್ಲಿ ದೇಶದಲ್ಲಿರುವ 10 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗಳಲ್ಲಿ ಒಟ್ಟು 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ....
-
ಬೆಂಗಳೂರು:ರಾಜ್ಯದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತಎಣಿಕೆ ಸೋಮವಾರ ಬೆಳಗ್ಗೆ 8ಗಂಟೆಗೆ ಆರಂಭ. ಯಾರಿಗೆ...
-
ಹೊಸದಿಲ್ಲಿ: ನೆರೆರಾಷ್ಟ್ರಗಳ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಉದ್ದೇಶ ವಿರುವ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಧ್ಯಾಹ್ನ...
-
ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...