ಸಾಧನೆಯ ಶಿಲ್ಪಿಗಳಾಗಬೇಕಿದೆ

Team Udayavani, Feb 24, 2020, 3:14 AM IST

ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ. ತನ್ನ ನೆನಪುಗಳೆಂಬ ಕಸ,ಧೂಳುಗಳನ್ನು ಕೊಡವಿ ಶುಚಿಮಾಡಿದರೇನೇ ಮುಂದಿನ ಶುದ್ಧವಾದ ಹಾದಿಗೆ ಹೂವು ಸುರಿದಂತೆ ಆಗುವುದು.ಅದು ಹೊರತು ಇದ್ದ ಕಸದ ರಾಶಿಗೆ ಹೂವಿನ ಅಲಂಕಾರ ಮಾಡಿದರೆ ಎಷ್ಟು ಸೊಗಸಾದೀತು?

ಮನುಷ್ಯನು ಅತಿಯಾದ ನಿರೀಕ್ಷೆಗಳನ್ನಿಟ್ಟು ಬದುಕಿದಾಗಲೇ ನೋವು ಕೂಡಾ ಜಾಸ್ತಿಯಾಗುವುದು. ತಮ್ಮ ಪಾಡಿಗೆ ತಾವು ಏನೊಂದೂ ನಿರೀಕ್ಷಿಸದೇ ಶ್ರದ್ಧೆಯಿಂದ ಕಾರ್ಯವನ್ನು ಮಾಡುತ್ತಿದ್ದರೆ,ಅದರ ಫ‌ಲಾಫ‌ಲಗಳನ್ನು ಪರಮಾತ್ಮನಿಗೇ ಒಪ್ಪಿಸಿದರೆ ನೋವು, ಬೇಸರಗಳೆಂಬ ಕಸ ಕೊಳೆಗಳು ದೂರಾಗಿ ಸ್ವತ್ಛವಾಗಿ ಗುಡಿಸಿದ ರೀತಿಯಲ್ಲಿ ಶುದ್ಧವಾಗುತ್ತವೆ. ಒಂದೆಡೆ ರಾಶಿ ಹಾಕಿದ ಕಸವು ದಿನ ಸರಿಯುತ್ತ ಹೋದಂತೆ ಹೇಗೆ ನಾತ ಬೀರುವುದೋ, ಮನದಲ್ಲಿ ತುಂಬಿದ ಬೇಡದ ವಿಚಾರಗಳೂ ಕೂಡಾ ನಿರುಪಾಯವಾಗಿ ನಮ್ಮನ್ನು ಆಕ್ರಮಿಸಿ, ಸುಗಂಧ ಹರಡುವ ಬದಲು, ನೆಮ್ಮದಿಯನ್ನು ಕಳೆದುಕೊಂಡು ವಿಲಿ ವಿಲಿ ಒದ್ದಾಡುವ ಪರಿಸ್ಥಿತಿ ತರಬಹುದು. ಹಾಗಾಗದಿರಲು ಬದುಕಿನಲ್ಲಿ ಫ‌ಲಾಫ‌ಲಗಳ ಅಪೇಕ್ಷೆಯನ್ನು ನಿರಾಕಾರನಾದ, ನಿರಂತರವಾದ, ಅಗೋಚರವಾದ, ಅಮಿತವಾದ ಆ ದೇವರಿಗೆ ತಲುಪಿಸಿಬಿಡಿ.

ಬದುಕು ನಾವೆಣಿಸಿದಂತೆ ಸಾಗುವುದಿಲ್ಲ. ನಮ್ಮೊಳಗಿನ ಆತ್ಮ ಅದು ಮಾಡು, ಇದು ಮಾಡು ಎಂದು ಪ್ರೇರೇಪಿಸುತ್ತದೆ. ಒಳ್ಳೆಯ ಕಾರ್ಯ ವಾದರೆ ಮುಂದಡಿಯಿಡುತ್ತೇವೆ. ಪ್ರತಿಫ‌ಲ ಸಿಕ್ಕಾಗ ಸಂತೋಷಿಸುತ್ತೇವೆ, ಅಥವಾ ವಿರುದ್ಧವೂ ಸಂಭವಿಸಬಹುದು. ಆಗ ಬೇಸರಿಸುತ್ತೇವೆ. ಹಾಗಾಗಿ ಬುದ್ಧಿವಂತನಾಗಿರುವ ಮನುಷ್ಯ ತಿಳಿದೂ ತಿಳಿದು ತಪ್ಪನ್ನೆಸಗುವುದು ಮಹಾದಡ್ಡತನ. ಈ ಬದುಕು ದೇವರ ವರ. ಅದನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಬೇಕು. ಈ ಪ್ರಪಂಚದ ಆಗುಹೋಗುಗಳನ್ನು ಅರಿತು ಯೋಗ ಚಿತ್ತವುಳ್ಳವರಾಗಿ ಬಾಳಬೇಕು.ಬಾಳುವುದು ಎಂದರೆ ದಿನ ಕಳೆಯುವುದಲ್ಲ , ದಿನ ಹೇಗೆ ಸಾಗಿತು ಎಂಬ ಚಿಂತನೆಯನ್ನು ಮನದಲ್ಲಿ ಮಾಡಿಕೊಳ್ಳಬೇಕು. ಒಳಿತು ಕೆಡುಕುಗಳ ಕಡೆಗೆ ನಿಗಾವಿಡಬೇಕು.ಒಳಿತಾದರೆ ಅಪ್ಪಬೇಕು, ಒಪ್ಪಬೇಕು. ಕೆಡುಕಾಗುವುದಾದರೆ ವರ್ಜಿಸಬೇಕು, ಹಿಂತೆಗೆಯಬೇಕು.

ಮಲ್ಲಿಕಾ ಜೆ. ರೈ., ಗುಂಡ್ಯಡ್ಕ ಪುತ್ತೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ...

  • ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್‌ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ...

  • ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ...

  • "ಅರೇ ಇದೇನಿದು?'ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ....

  • ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ....

ಹೊಸ ಸೇರ್ಪಡೆ

  • ಮಣಿಪಾಲ: ಎಲ್ಲರೂ ಇಟಲಿಯನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೊರಡಲು ಸಾಲಿನಲ್ಲಿ ನಿಂತಿರುವಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಈ ವಿದ್ಯಾರ್ಥಿನಿ, ನಾನು ಇಟಲಿಯಲ್ಲೇ...

  • ಹೊಸದಿಲ್ಲಿ/ವಾಷಿಂಗ್ಟನ್‌: ಕೋವಿಡ್‌ 19 ವಿಚಾರದಲ್ಲಿ ಅಸಡ್ಡೆ ಯಿಂದಲೇ ನಡೆದುಕೊಳ್ಳುತ್ತಿರುವ ಅಮೆರಿಕ ಈಗ ಅದಕ್ಕೆ ಬೆಲೆ ತೆರುತ್ತಿದ್ದು, ಸೋಂಕುಪೀಡಿತರ ಸಂಖ್ಯೆ...

  • ಮಂಗಳೂರು / ಮಣಿಪಾಲ: ಕೋವಿಡ್‌-19 ವಿಸ್ತರಣೆಯನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ಶನಿವಾರ ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಲಾಕ್‌ಡೌನ್‌ ನಡೆಸುವಂತೆ ಜಿಲ್ಲಾಡಳಿತ...

  • ಜಗತ್ತು ನಿಶ್ಚಲವಾಗಿಬಿಟ್ಟಿದೆ. ಕೋವಿಡ್ 19 ಎಂಬ ಮಹಾರೋಗವು ಸದಾ ಗಿಜುಗುಡುತ್ತಿದ್ದ ಮಹಾನಗರಗಳನ್ನೆಲ್ಲ ಬಿಕೋ ಎನ್ನುವಂತೆ ಮಾಡಿಬಿಟ್ಟಿದೆ. ಕಿಕ್ಕಿರಿದು ತುಂಬಿರುತ್ತಿದ್ದ...

  • ಉಡುಪಿ: ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್‌ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ವತಿಯಿಂದ ಸಾರ್ವಜನಿಕ...