ಆತ್ಮಾನುಸಂಧಾನದ ಅಭಿವ್ಯಕ್ತಿ”ವಿವರ್ತನ’ – ನೃತ್ಯಗಾಥೆಯ ಶೋಧನೆ


Team Udayavani, Oct 12, 2018, 6:00 AM IST

z-1.jpg

ಪ್ರಸಿದ್ಧ ನೃತ್ಯಾಂಗನೆ ಹಾಗೂ ನೃತ್ಯಚಿಂತಕಿ ವಿ| ರಮಾ ವೈದ್ಯನಾಥನ್‌ ಇತ್ತೀಚೆಗೆ ಮಂಗಳೂರಿನ ರಾಧಿಕಾ ಶೆಟ್ಟಿಯವರ “ನೃತ್ಯಾಂಗನ’ ಸಂಸ್ಥೆಯ ಆಶ್ರಯದಲ್ಲಿ “ವಿವರ್ತನ್‌’ ಎಂಬ ನೃತ್ಯಲೋಕದಲ್ಲಿ ಮಥಿಸಲ್ಪಡಬೇಕಾದ, ಹೊಸ ಪರಿಕಲ್ಪನೆಯ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ನೃತ್ಯಾಸಕ್ತರ ಬುದ್ಧಿಗೆ ಚಿಂತನೆಯ ಸಂಚಲನೆಯನ್ನುಂಟು ಮಾಡಿದರು. 

“ವಿವರ್ತನ್‌’ ಎಂಬ ಈ ಪರಿಕಲ್ಪನೆ, ಹಲವಾರು ಸೈದ್ಧಾಂತಿಕ ಸಂಗತಿಗಳು ಅಡಕವಾಗಿರುವ ಒಂದು ವಸ್ತು. “ವಿವರ್ತನೆ’ ಪರಿವರ್ತನೆ,”ಟ್ರಾನ್ಸ್‌ಫಾರೆಶನ್‌,’ ಬದಲಾವಣೆ ಎಂಬ ಅರ್ಥವನ್ನು ಸ್ಪುರಿಸುತ್ತದೆ. ರಮಾರವರ ಹಲವು ಕಾಲದ ಚಿಂತನೆಯಾದ ನೃತ್ಯದಿಂದ ಕಲಾವಿದೆ, ಸುತ್ತಲಿನ ಪರಿಸರ, ವೀಕ್ಷಿಸುವ ನೃತ್ಯಾಸಕ್ತರಲ್ಲಿ ನಿಧನವಾಗಿ ಆಗುವ ಬದಲಾವಣೆ ಹೇಗೆ ಪ್ರತಿಯೊಬ್ಬ ಕಲಾವಿದೆ ಅನ್ವೇಷಕರಾಗಬಲ್ಲರು, ಅಂತ್ಯದಲ್ಲಿ ಜೀವಾತ್ಮ ಪರಮಾತ್ಮರ ಒಂದುಗೂಡುವಿಕೆ ಸಾಧ್ಯ ಎಂಬುದನ್ನು ಅದರಲ್ಲಿ ಸೃಷ್ಟಿಸಿ ಅದನ್ನು ಕಲಾವಿದೆ ಪ್ರೇಕ್ಷಕರಲ್ಲಿಯೂ ಸಂಚಲನೆ ಮಾಡಬಹುದು ಎಂಬುದು ಇದರ ಒಟ್ಟು ಅರ್ಥ, ಅಂದ. ಭವ್ಯ ಪರಂಪರೆಯ ಉಜ್ವಲಹಾದಿಯನ್ನು ಸಾಹಿತ್ಯ, ಸಂಗೀತ, ನೃತ್ಯ, ಚಿತ್ರ ಮುಂತಾದ ಕಲಾಪ್ರಕಾರಗಳಲ್ಲಿ ಮನಗಂಡು ಭಗವಂತನಲ್ಲಿ ಐಕ್ಯಗೊಂಡು ನಮಗೆ ಮೇಲ್ಪಂಕ್ತಿ ದೊರಕಿಸಿಕೊಟ್ಟದರಲ್ಲಿ ಪರ್ಷಿಯನ್‌ರ ತಿರುಮಿ, ಕಾಶ್ಮೀರಿ ಕವಯತ್ರಿ ಲಾಲ್‌ಡೇಟ್‌, ಭಕ್ತೆ ಮೀರಾ ಬಾಯಿ, ಗುಜರಾತಿ ಸಂತ ಕವಿ ನರಸಿಂಹ ಮೆಹ್ತಾ, ತಮಿಳುನಾಡಿನ ತಿರುಮಲರ್‌, ತ್ಯಾಗರಾಜರು, ದೀಕ್ಷಿತರು ಮುಂತಾದವರು. 

ಒಂದು ಸುಂದರ ಕವನ ಕಥಾ ರೂಪದಲ್ಲಿ ಹೆಣೆಯಲ್ಪಟ್ಟ ಈ ಸಮೂಹ ನೃತ್ಯವು ಓರ್ವ ಭರತನಾಟ್ಯ ಕಲಾವಿದ ಗುರುಮುಖೇನ ಅಭ್ಯಸಿಸುವಾಗ ಕಲಿಯುವ ಪಾದಗಳ  -ಹಸ್ತಗಳ ಚಲನೆ ಮುದ್ರೆಗಳು, ಕಣ್ಣು, ಕತ್ತು ಹುಬ್ಬು ಮುಂತಾದ ಅಂಗ ಉಪಾಂಗಗಳ ಚಲನೆಯನ್ನು ಬಿಂಬಿಸುವ ಆಂಗಿಕಾಭಿನಯವನ್ನು ಅಭ್ಯಸಿಸುತ್ತಾ, ಗಟ್ಟಿಗೊಳಿಸುತ್ತ ಇದರಿಂದ ಅವರಿಗಾಗುವ ಖುಷಿ ಅನುಭವವನ್ನು ಪ್ರೇಕ್ಷಕರಿಗೂ ಇದನ್ನು ಹೇಗೆ ವರ್ಗಾಯಿಸಬಹುದೆಂಬುದನ್ನು ಕುಮಾರಿ ಸನ್ನಿಧಿ ವೈದ್ಯನಾಥನ್‌ ಅವರು ನೃತ್ಯಾಂಗನೆಯರ ಮಧ್ಯೆ ವೇದಿಕೆಯಲ್ಲಿ ಕುಳಿತು ನುಡಿಸಿದ ಮೃದಂಗದ ತತ್ವಾರಗಳಿಗೆ (ತದ್ದಿ ರೊನಂ, ನಂತೊಂ ದಿತ್ತ…) ಖಚಿತವಾದ ಹೆಜ್ಜೆಗಳ ಗತಿಯನ್ನು ನರ್ತಿಸಿ ಅಡವು ವಿನ್ಯಾಸ ಮತ್ತು ಹಸ್ತಮುದ್ರೆಗಳನ್ನು ವಿನಿಯೋಗಿಸಿದ ಶುದ್ಧ ನೃತ್ತವನ್ನು ನರ್ತಿಸಿದರು.

2ನೇ ನೃತ್ಯವಾಗಿ ಶೀರ್ಷಕೆ ಗಾನವೆಂಬಂತೆ ಕಾಣುವ ನೃತ್ಯಂ ವಿವರ್ತಯತಿ… ನಾಡೀ ಸ್ಪಂದಯತಿ ಎಂಬ ಸಾಹಿತ್ಯವಿರುವ ಪಂತುವರಾಳಿ ರಾಗದ ಝಂಪೆ ತಾಳ ಒಂದು ಕಾವ್ಯಕ್ಕೆ ನೃತ್ಯದ ವಿವಿಧ ಆಯಾಮಗಳು ಅರ್ಥಗಳು ಸು#ರಿಸುವ ಸಂಯೋಜನೆಯುಳ್ಳ ಅಪ್ಯಾಯ ಮಾನವಾದ ನೃತ್ಯವನ್ನು ವಿವಿಧ ಪಾದಚಲನೆಗಳು, ಭಂಗಿಗಳೊಂದಿಗೆ ಸನ್ನಿಧಿಯವರ ಮೃದಂಗ ವಾದನದ ಪೋಷಣೆ ಹಾಗೂ ಮಧುರವಾದ ಹಿನ್ನೆಲೆ ಗಾಯನದೊಂದಿಗೆ ರಮಾರವರೇ ಸ್ವತಃ ಸಹ ಕಲಾವಿದರಾದ ರೋಹಿಣಿ ಧನಂಜಯ, ಲಕ್ಷ್ಮೀ ಚಕ್ಯಾರ್‌, ಮೀರಾ ಉನ್ನಿತನ್‌ ಹಾಗೂ ಕಾವ್ಯ ಗಣೇಶ್‌ರೊಂದಿಗೆ ನರ್ತಿಸಿದರು. 

 “ಆನಂದ ತಾಂಡವ’ ನೃತ್ಯಕ್ಕೆ ತಮಿಳು ಸಂತ ಕವಿ ತಿರುಮಲರ್‌ ಅವರ ಸಾಹಿತ್ಯವನ್ನು ಬಳಸಿಕೊಂಡ ರಮಾರವರು ದೈವಿಕತೆಯ ನೃತ್ಯ ಸಿದ್ಧಾಂತವನ್ನು, ತಂತ್ರಶಾಸ್ತ್ರದಲ್ಲಿ ಚಿತ್ರಿಸಲ್ಪಟ್ಟ ಶಿವನ ಕಲ್ಪನೆಯ ಹಿನ್ನಲೆಯನ್ನು ವಿವರಿಸುತ್ತಾ ಈ ಕವಿಯ ಪ್ರಕಾರ ನಮ್ಮ ಪ್ರತೀ ಉಸಿರಾಟ (ಶ್ವಾಸೋಚ್ಛಾಸ)ದಲ್ಲಿ ನಾವು ನಟಿಸುತ್ತೇವೆ, ಉಸಿರಾಟವೆನ್ನುವುದು ಪ್ರಕೃತಿಯ ಪ್ರತಿಯೊಂದು ಜೀವಿಯೂ ಎದುರಿಸುವ ಮೊದಲ ಲಯಬದ್ಧ ಚಲನೆ ಇದುವೇ ಶರೀರದ ಇತರ ಅಂಗಗಳ ಚಲನೆಗಿಂತಲೂ ಮೊದಲೇ ಆರಂಭವಾಗುವ ಚಲನೆ. ಪ್ರತಿ ಉಸಿರಿನಲ್ಲೂ ತಾನು ನರ್ತಿಸುತ್ತೇನೆ ಮತ್ತು ಶಿವನೊಂದಿಗೆ ಒಂದಾಗುತ್ತೇನೆ ಎನ್ನುವ ಕವಿಯ ಸಿದ್ಧಾಂತ ಅಂದರೆ ಭಾರತದ ತತ್ವ ಶಾಸ್ತ್ರದ “ತಣ್ತೀ’ಮಸಿ ಎಂಬ ಅದ್ವೆ„ತ ದರ್ಶನದಲ್ಲಿ ಪ್ರತಿಪಾದಿಸಲ್ಪಟ್ಟ ಪ್ರಕೃತಿಯ ಪ್ರತಿಯೊಂದು ಆಗುವಿಕೆ. ಚಲನೆ ನೃತ್ಯವಾಗಿದೆ ಅಲ್ಲದೆ ಎಲ್ಲರೊಂದಿಗೆ ಸೇರಿಕೊಳ್ಳುವ ಪ್ರಕ್ರಿಯೆ ಇದು. ಶಾಸ್ತ್ರೀಯ ನೃತ್ಯ ಈ ಶಕ್ತಿಯೆಂಬುದನ್ನು “ತಿರುಮಂದಿರಂ’ ಈ ಸಾಹಿತ್ಯದ ಮೂಲಕ “ನಟರಾಜನ ವರ್ಣನೆಯನ್ನು, ಚಲನೆಗಳನ್ನೂ ವಿವಿಧ ಜತಿ, ಶೊಲ್ಕಟ್ಟುಗಳ ಸಹಿತ ವಿವಿಧ ನಡೆಗಳಲ್ಲಿ ತಾಳ ಮಾಲಿಕೆ ರಾಗಮಾಲಿಕೆಯಲ್ಲಿ ಸ್ವತಃ ರಮಾರವರೊಬ್ಬರೇ “ಶ್ವಾಸ’ದ ಪ್ರಾಮುಖ್ಯತೆಯ ಪರಾಕಾಷ್ಠೆಯನ್ನು ನೃತ್ಯದ ಮೂಲಕ ವಿಷದ ಪಡಿಸಿದರು. ಪರ್ಷಿಯನ್‌ ಕವಿ ರೂಮಿ ನೃತ್ಯಕ್ಕಾಗಿಯೇ ಸಂಯೋಜಿಸಿ ಸಾಹಿತ್ಯ ನೀಡಿದ ಸೂಫಿಗಾಯನದ ನೃತ್ಯಪೀ ಪರಮಾತ್ಮ ಎನ್ನುವ ಕವಿಯ ಆಶಯವನ್ನು ಬಿಂಬಿಸುವ “ರಕ್ಸ್‌ ‘ ಎಂಬ ಪದ್ಯಕ್ಕೆ ನೃತ್ಯ ಬಂಧವನ್ನು ಸಮರ್ಥವಾಗಿ ಅಭಿನಯಿಸಿದವರು ಕು| ಕಾವ್ಯ ಗಣೇಶ್‌. ಮುಂದೆ ಮೀರಾಬಾಯಿಯವರ ಪ್ರಸಿದ್ಧ ಕೃತಿ “ಪದ ಗುಂಗುರು’ ಪಾದದ ಹೆಜ್ಜೆಯ ಗೆಜ್ಜೆಯ ಧ್ವನಿಗಳ ಮೂಲಕ ಮೀರಾ “ಮೈ ತೋ ಅಪನೀ ನಾರಾಯಣ ಕೇ ಹೋಗಯೀ’ ಎಂಬ ಭಾವವನ್ನು ತಮ್ಮ ಸೂಕ್ಷ್ಮ ನೃತ್ಯ ಸಂಚಲನೆಯ ಸಮರ್ಪಣಾ ಭಾವವನ್ನು ಪ್ರಕಟಿಸಿದವರು ಲಕ್ಷ್ಮೀ ಚಕ್ಕಾಲ್‌ರವರು. ತ್ಯಾಗರಾಜ ಪಾಲ ಯಾಸುಮಮ್‌ ಎಂಬ ದೀಕ್ಷಿತರ ಗೌಳ ರಾಗದ ಕೃತಿ “ಅಟಪ ನಟನಂ’ ಎಂಬ ಶಿವನನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸುವ ದೇವಾಲಯ ನೃತ್ಯವು ಪಲ್ಲಕ್ಕಿಯನ್ನು ಹೊತ್ತವರ ನೃತ್ಯಭೂಮಿಷ್ಠ ಚಲನೆಗಳು ಶಿವನ ನೃತ್ಯದ ವೈಖರಿಯ ಲಾಸ್ಯ ಹಾಗೂ ತಾಂಡವವನ್ನು ಪ್ರತಿಫ‌ಲಿಸುವಲ್ಲಿ ನೃತ್ಯಗಾತಿಯರ ಪರಿಶ್ರಮ ಮೆಚ್ಚಬೇಕಾದ್ದೇ. ಕಾಶ್ಮೀರಿ ಕವಯಿತ್ರಿ ಲಾಲ್‌ ಡೇಡ್‌ ತನ್ನನ್ನು ನಗ್ನಳಾಗಿ ಪರಮಾತ್ಮನಿಗೆ ನೃತ್ಯದ ಮುಖೇನ ಸಮರ್ಪಿಸಿಕೊಳ್ಳುವ ಭಾವನ ನೃತ್ಯವು ರಮಾರವರಿಂದ ಅಭಿನಯಿಸಲ್ಪಟ್ಟಿತು.

15ನೇ ಶತಮಾನದ ಗುಜರಾತಿನ ಸಂತ ಕವಿ ನರಸಿಂಹ ಮೆಹ್ತಾ ಕೇವಲ ಭಕ್ತಿ ಸಾಹಿತ್ಯ (ವೈಷ್ಣವಜನತೋವನು)° ಬರೆಯುತ್ತಿದ್ದು ಒಮ್ಮೆ ವೃಂದಾವನಕ್ಕೆ ಹೋಗಿದ್ದಾಗ ಕೃಷ್ಣನ ರಾಸಲೀಲೆಯನ್ನು ಕೃಷ್ಣ, ರಾಧೆ, ಗೋಪಿಕೆಯರ ಸಂಭ್ರಮವನ್ನು ತನ್ನ ಅಂರ್ತದೃಷ್ಟಿಯಿಂದ ಕಂಡು, ಈ ನೃತ್ಯದೃಶ್ಯದಿಂದ ಅವರಲ್ಲಿ ಉಂಟಾದ ಗಾಢ ಪರಿಣಾಮ ಅವರನ್ನು ಮುಂದೆ ಶೃಂಗಾರ ಕವಿಯಾಗಿ ಪರಿವರ್ತಿಸಲ್ಪಟ್ಟಿತು. ಇದನ್ನು ರಮಾರವರು ಕವಿಯಾಗಿ ತನ್ನ ಮನಸ್ಸಿನ ಬದಲಾವಣೆಯನ್ನು ನೃತ್ಯಾಭಿನಯದ ಮೂಲಕ ತೋರಿಸಿದರೆ ಸಮೂಹ ನೃತ್ಯಗಾತಿಯರು ವೈಭವದ ಜಾನಪದೀಯ ಸೊಗಡಿನ ರಾಸಲೀಲೆಯನ್ನು ನರ್ತಿಸಿ ಆನಂದವಿತ್ತರು. ಈ ಕಾರ್ಯಕ್ರಮದ ಕೊನೆಯ ಶಾಸ್ತ್ರದ ಧ್ಯೇಯವಾಕ್ಯವೆನ್ನಿಸುವ “ಯಥೋ ಹಸ್ತ, ತಥೋ ದೃಷ್ಟಿ’ ಎಂಬ ಶ್ಲೋಕವನ್ನು ಆಧರಿಸಿ ವಿವಿಧ ಹಸ್ತಮುದ್ರೆಗಳು ಅವುಗಳ ಉಪಯೋಗಗಳನ್ನು ಅರ್ಥೈಸುತ್ತಾ ತಿಲ್ಲಾನ ರೂಪದ ನೃತ್ಯದಿಂದ ಮಂಗಳಗೊಂಡಿತು. 

ಪ್ರತಿಭಾ ಎಂ.ಎಲ್‌. ಸಾಮಗ 

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.