ಅಬ್ ಕಿ ಬಾರ್, ಜಾದೂ ಸರ್ಕಾರ್
Team Udayavani, Nov 2, 2019, 4:04 AM IST
“ನಾನು ನಿದ್ದೆಯಲ್ಲಿದ್ದಾಗ, ಉಸಿರಾಡುವುದು ಮ್ಯಾಜಿಕ್ ಅನ್ನು. ನಾನು ಎದ್ದಾಗ ಮಾಡುವುದೂ ಮ್ಯಾಜಿಕನ್ನೇ’- ಈ ಮಾತಿನೊಂದಿಗೆ ನೆನಪಾಗುವ ಜಾದೂಚತುರ ಪಿ.ಸಿ. ಸರ್ಕಾರ್. ಅವರೀಗ ಇಲ್ಲವಾದರೂ, ಅವರ ಕುಟುಂಬಕ್ಕೆ ಒಲಿದ ಜಾದೂ ಕಲೆ, ಈಗಲೂ ಶಹಬ್ಬಾಶ್ಗಿರಿ ಪಡೆಯುತ್ತಲೇ ಮನರಂಜಿಸುತ್ತಿದೆ.
ಅಪ್ಪನ ಹೆಸರನ್ನೇ ಬ್ರ್ಯಾಂಡ್ ಮಾಡಿಕೊಂಡು, ಯಶಸ್ವಿ ಶೋಗಳನ್ನು ನಡೆಸಿದ ಹೆಗ್ಗಳಿಕೆ ಪುತ್ರ ಜ್ಯೂ. ಪಿ.ಸಿ. ಸರ್ಕಾರ್ ಅವರದ್ದು. ಇದೀಗ ಜ್ಯೂ. ಪಿ.ಸಿ. ಸರ್ಕಾರ್ ಅವರ ಶೋ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. “ಇಂದ್ರಜಾಲ’ದ ಝಲಕ್ಗೆ ಬೆರಗಾಗುವ ಸುವರ್ಣಾವಕಾಶ ಇಲ್ಲಿರಲಿದೆ. ಅದರಲ್ಲೂ ಮಕ್ಕಳಿಗೆ ಈ ಜಾದೂ ಶೋ ಇಷ್ಟವಾಗಲಿದೆ.
ಯಾವಾಗ?: ನ.2-3, ಸಂ. 4 ಮತ್ತು 7 | ಪ್ರವೇಶ: 500 ರೂ. ಮೇಲ್ಪಟ್ಟು
ಎಲ್ಲಿ?: ಟೌನ್ಹಾಲ್, ಜೆ.ಸಿ.ರಸ್ತೆ