“ಬಿಲ್‌’ವಿದ್ಯೆ ಬಲ್ಲದ ಡಾಕ್ಟರ್

ಮಹಾನಗರದ ಮಾನವೀಯ ವೈದ್ಯರು

Team Udayavani, Jun 29, 2019, 4:51 PM IST

ಡಾ. ಸುನೀಲ್‌ ಕುಮಾರ್‌ ಹೆಬ್ಬಿ

ಜುಲೈ 1, ರಾಷ್ಟ್ರೀಯ ವೈದ್ಯರ ದಿನ. “ಓಹ್‌, ಡಾಕ್ಟ್ರು ಸಮಾಚಾರನಾ? ಅವರಿಗೇನು ಕಮ್ಮಿ. ಭರ್ಜರಿ ಶುಲ್ಕ ಕೀಳ್ತಾರೆ’ ಅಂತ ಹೇಳ್ಬೇಡಿ. ಯಾಕೆ ಗೊತ್ತಾ? ಇಲ್ಲಿ ಕೆಲವು ವೈದ್ಯರು “ಬಿಲ್‌’ ವಿದ್ಯೆಯನ್ನು ಬಲ್ಲವರೇ ಅಲ್ಲ.ಬಡ ರೋಗಿಗಳಿಗೆ ಉಚಿ ತ ಚಿಕಿತ್ಸೆ ನೀಡು ವ ಉದಾರಿಗಳು. ಇನ್ನೊಬ್ಬ ವೈದ್ಯ ರಂತೂ ಶುಲ್ಕಪಡೆದರೂ, ಅದು ನೀವು ಸೇವಿ ಸುವ ದೋಸೆಯ ಬಿಲ್‌ಗಿಂತಲೂ ಕಡಿಮೆ! ಈ ಮಹಾ ನ ಗ ರ ದಲ್ಲಿ ಪ್ರಚಾರಕ್ಕೆ ಬಾರದೆ,ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವ ಅಂಥ ಮೂವರು ಡಾಕುóಗಳ ಕತೆ,ವೈದ್ಯರ ದಿನದ ವಿಶೇಷ…

ವೈದ್ಯ: ಡಾ. ಸುನೀಲ್‌ ಕುಮಾರ್‌ ಹೆಬ್ಬಿ
ಫೀ: 0.00 ರೂ.

ರೋಗಿಗಳು ವೈದ್ಯರನ್ನು ಹುಡುಕಿಕೊಂಡು ಬರುವುದು ಗೊತ್ತು. ಆದರೆ, ವೈದ್ಯರೇ ರೋಗಿಗಳನ್ನು ಹುಡುಕುವುದನ್ನು ಕೇಳಿದ್ದೀರ? ಇಲ್ಲ ತಾನೇ? ಅಂಥ ಜನಸ್ನೇಹಿ ವೈದ್ಯರೊಬ್ಬರು ಬೆಂಗಳೂರಿನಲ್ಲಿದ್ದಾರೆ, ಅವರೇ ಡಾ. ಸುನೀಲ್‌ ಕುಮಾರ್‌ ಹೆಬ್ಬಿ. ಅವರು ಬಡವರು ಹಾಗೂ ನಿರಾಶ್ರಿತರು ಇರುವ ಪ್ರದೇಶಗಳನ್ನು ಹುಡುಕಿಕೊಂಡು ಹೋಗಿ ಉಚಿತ ಚಿಕಿತ್ಸೆ ನೀಡುವ ದೈವಿಕ ಕೆಲಸದಲ್ಲಿ ತೊಡಗಿದ್ದಾರೆ.

730 ಶಿಬಿರ, 40 ಸಾವಿರ ರೋಗಿಗಳು
ತಮ್ಮದೇ ಕಾರಿನಲ್ಲಿ ವೈದ್ಯಕೀಯ ಉಪಕರಣ ಹಾಗೂ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಔಷಧಗಳನ್ನು ಇಟ್ಟುಕೊಂಡು ಮೊಬೈಲ್‌ ಕ್ಲಿನಿಕ್‌ (ಸಂಚಾರಿ ಚಿಕಿತ್ಸೆ ವಾಹನ) ನಡೆಸುತ್ತಿರುವ ಸುನೀಲ್‌, ಇದುವರೆಗೂ ಕೊಳೆಗೇರಿ, ವೃದ್ಧಾಶ್ರಮ, ಸರ್ಕಾರಿ ಶಾಲೆಗಳ ಮಕ್ಕಳಿಗೆ 730 ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ. ಇವರ ಶಿಬಿರಗಳ ಪ್ರಯೋಜನ ಪಡೆದಿರುವ ಸಂಖ್ಯೆ 40 ಸಾವಿರ ದಾಟಿದೆ! ನೆನಪಿಡಿ, ಅಷ್ಟೂ ಜನಕ್ಕೆ ಸುನೀಲ್‌ ಅವರು ಉಚಿತವಾಗಿ ತಪಾಸಣೆ ನಡೆಸಿ, ಔಷಧ ವಿತರಿಸಿದ್ದಾರೆ. ಅಷ್ಟೇ ಅಲ್ಲದೆ, ಸರ್ಜಾಪುರದಲ್ಲಿ “ಆಯುಷ್ಮಾನುಭವ’ ಕ್ಲಿನಿಕ್‌ ತೆರೆದು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಕೈ ತುಂಬಾ ಸಂಬಳವಿತ್ತು…
ಮೂಲತಃ ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದವರಾದ ಡಾ. ಸುನೀಲ್‌, 2007ರಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿದರು. ಎಂಬಿಬಿಎಸ್‌ ಆದ ಬಳಿಕ ಪ್ರತಿಷ್ಠಿತ ಕಾರ್ಪೋರೆಟ್‌ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇರಿದರು. ಸೇವಾ ಮನೋಭಾವ, ಅಂತಃಕರಣವೇ ವೈದ್ಯರ ಮೂಲ ಗುಣ ಎಂದು ನಂಬಿದ್ದ ಸುನೀಲ್‌ಗೆ ಕಾರ್ಪೋರೇಟ್‌ ಆಸ್ಪತ್ರೆಗಳ ವ್ಯಾಪಾರಿ ಮನೋಭಾವ ಹಿಡಿಸಲಿಲ್ಲ. ಕೈ ತುಂಬಾ ಸಂಬಳವಿದ್ದರೂ, ಮಾಡುವ ಕೆಲಸ ತೃಪ್ತಿ ಕೊಡಲಿಲ್ಲ. ತಾನು ವೈದ್ಯನೇ ಹೊರತು, ಹಣ ಮಾಡುವ ವ್ಯಾಪಾರಿಯಲ್ಲ ಅಂತ ನಿರ್ಧರಿಸಿದ ಅವರು ತಮ್ಮ ಹೈ ಪ್ರೊಫೈಲ್‌ ಡಾಕ್ಟರ್‌ ಕೆಲಸಕ್ಕೆ ತಿಲಾಂಜಲಿ ಇಟ್ಟರು.

ಕೊಡಗಿಗೂ ಕೈ ಚಾಚಿದರು…
ನಂತರ ಬಡವರ ಕಾಯಕಕ್ಕೆ ಇಳಿದ ಸುನೀಲ್‌, ಅನೇಕ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಔಷಧಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಕಳೆದವರ್ಷ ಕೊಡಗಿನಲ್ಲಿ ಪ್ರವಾಹ ಬಂದಾಗ, ಅಲ್ಲಿಯೂ ತಮ್ಮ ಮೊಬೈಲ್‌ ಕ್ಲಿನಿಕ್‌ನೊಂದಿಗೆ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಉಚಿತ ಸೇವೆ ನೀಡಿ, ಮಾನವೀಯತೆ ಮೆರೆದಿದ್ದರು.

ಸ್ಫೂರ್ತಿ ಏನು?
ಹೊಸೂರು ರಸ್ತೆಯಲ್ಲಿ ಯುವಕನಿಗೆ ಅಪಘಾತವಾಗಿ ಆತ ರಸ್ತೆಯಲ್ಲಿ ಬಿದ್ದಿದ್ದ. ಸುತ್ತ ನೆರೆದಿದ್ದವರೆಲ್ಲ ಫೋಟೊ, ವಿಡಿಯೊ ತೆಗೆದುಕೊಳ್ಳುತ್ತಿದ್ದರು. ಆ ವೇಳೆ ಕಾರಿನಲ್ಲಿ ತೆರಳುತ್ತಿದ್ದ ಸುನೀಲ್‌, ತಕ್ಷಣ ಕಾರು ನಿಲ್ಲಿಸಿ ಯುವಕನಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಆಸ್ಪತ್ರೆಗೆ ದಾಖಲಿಸಿದರು. ಒಂದೆರಡು ದಿನಗಳ ಬಳಿಕ ಯುವಕನ ಹೆತ್ತವರು ಸುನೀಲ್‌ರನ್ನು ಭೇಟಿ ಮಾಡಿ, ಮಗನನ್ನು ಬದುಕಿಸಿದ್ದಕ್ಕೆ ಭಾವುಕರಾಗಿ ಧನ್ಯವಾದ ತಿಳಿಸಿದರಂತೆ. ರೋಗಿಯ ಕಡೆಯವರ ಆದ್ರì ಭಾವ, ಸುನೀಲ್‌ರನ್ನು ಬಹುವಾಗಿ ತಟ್ಟಿ, ಈ ಉಚಿತ ಸೇವೆಯ ನಿರ್ಧಾರ ಕೈಗೊಂಡ ರಂತೆ!
ಫೋ- ಸುನೀಲ್‌ ಸಿರೀಸ್‌
– ನಿರಂಜ ನ್‌

ನಗು ಹಂಚುವ ವೈದ್ಯ
ವೈದ್ಯ: ಡಾ. ಎಂ.ವಿ.ಶಶಿಧ ರ್‌
ಫೀ: 0.00 ರೂ.

ಬಡಜನರ ಹಲ್ಲು ಮತ್ತು ಬಾಯಿಯ ಆರೋಗ್ಯಕ್ಕಾಗಿ ಶ್ರಮಿಸುತ್ತಾ, ಅವರ ಮೊಗದಲ್ಲಿ ನಗು ಮೂಡಿಸಲು ಪ್ರಯತ್ನಿಸುತ್ತಿರುವವರು ಡಾ. ಎಂ.ವಿ. ಶಶಿಧರ್‌. ಕಳೆದ ನಾಲ್ಕೈದು ವರ್ಷಗಳಿಂದ, ಉದಯಭಾನು ಕಲಾಸಂಘದ ಸಹಕಾರದಲ್ಲಿ ಶಶಿಧರ್‌ ಅವರು, ಬಡ ಜನರಿಗಾಗಿ ಉಚಿತ ದಂತ ಪರೀಕ್ಷೆ ಶಿಬಿರ ನಡೆಸುತ್ತಿದ್ದಾರೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ ಸಂಸ್ಥೆಯ ಕಚೇರಿಯಲ್ಲಿ ನಡೆಯುವ ಶಿಬಿರದಿಂದ ನೂರಾರು ಬಡ ರೋಗಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ರೋಗಿಗಳಿಗೆ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರ ಜೊತೆಗೆ, ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡುತ್ತಾ ರೆ.
ಬೆಂಗಳೂರು ಡೆಂಟಲ್‌ ಕಾಲೇಜಿನಲ್ಲಿ ಪದವಿ ಮತ್ತು ಇಂಗ್ಲೆಂಡ್‌ನ‌ಲ್ಲಿ ಉನ್ನತ ಶಿಕ್ಷಣ ಪಡೆದಿರುವ ಶಶಿಧರ್‌, ಮೂರು ದಶಕಗಳಿಗೂ ಹೆಚ್ಚುಕಾಲದಿಂದ ವೈದ್ಯ ವೃತ್ತಿಯಲ್ಲಿ ದ್ದಾ ರೆ. ವಿದೇಶದಲ್ಲಿ ನೀಡಿದ ವೈದ್ಯಕೀಯ ಸೇವೆಗಾಗಿ, ರೋಟರಿ ಇಂಟರ್‌ನ್ಯಾಷನಲ್‌ ಕೊಡುವ ಅತ್ಯುನ್ನತ ಪ್ರಶಸ್ತಿಯಾದ ಸರ್ವಿಸ್‌ ಎಬೌ ಸೆಲ್ಫ್ ಪ್ರಶಸ್ತಿಯೂ ಇವರಿಗೆ ಲಭಿಸಿದೆ.
ಸ್ಫೂರ್ತಿ ಏನು?
ಬಡ ರೋಗಿಗಳ ಸ್ಥಿತಿ ಕಂಡು ಅಯ್ಯೋ ಎಂದು ಮರುಗುವ ಇವರ ಹೃದ ಯ.

ದೋಸೆ ಬಿಲ್‌ಗಿಂತಲೂ ಕಮ್ಮಿ ಇವರ ಫೀಸು!
ವೈದ್ಯ: ಡಾ.ಸುಬ್ರಹ್ಮಣ್ಯ ಭಟ್‌
ಫೀ: 50.00 ರೂ.


ವೈದ್ಯರ ಬಳಿಗೆ ಹೋಗಲು ಜನ ಹೆದರುವುದೇ ಚಿಕಿತ್ಸೆ ದುಬಾರಿ ಎನ್ನುವ ಕಾರಣಕ್ಕೆ. ಒಂದು ಮಾತ್ರೆ ಬರೆದುಕೊಡಲೇ ಕೆಲವು ವೈದ್ಯರು 200-300 ರೂ. ಪಡೆಯುತ್ತಾರೆ. ಔಷಧ, ಇಂಜೆಕ್ಷನ್‌ಗಳ ವೆಚ್ಚ ಬೇರೆಯೇ ಇರುತ್ತದೆ. ಆದರೆ, ಇಂದಿರಾನಗರದ ಕೃಷ್ಣ ಕ್ಲಿನಿಕ್‌ನ ವೈದ್ಯರನ್ನು ಕಾಣಲು 50 ರೂ. ಸಾಕು. 42 ವರ್ಷಗಳಿಂದ ಕ್ಲಿನಿಕ್‌ ನಡೆಸುತ್ತಿರುವ ಡಾ. ಸುಬ್ರಹ್ಮಣ್ಯ ಭಟ್‌ ಅವರು ತಪಾಸಣಾ ಶುಲ್ಕವಾಗಿ ತೆಗೆದುಕೊಳ್ಳುವುದು ಕೇವಲ 50 ರೂ. ಅಷ್ಟೇ. ಇಂಜೆಕ್ಷನ್‌ಗೆ ಪ್ರತ್ಯೇಕ ಶುಲ್ಕ ಮಾಡುತ್ತಾರಾದರೂ, ಬೇರೆ ಕ್ಲಿನಿಕ್‌ಗಳಿಗೆ ಹೋಲಿಸಿದರೆ ಆ ಶುಲ್ಕ ಏನೇನೂ ಅಲ್ಲ.
ಅಷ್ಟೇ ಅಲ್ಲದೆ, ಉಚಿತ ಸಕ್ಕರೆ ಕಾಯಿಲೆ ತಪಾಸಣೆ ಶಿಬಿರ, ಥೈರೋಕೇರ್‌ ಸಹಯೋಗದಲ್ಲಿ ಥೈರಾಯ್ಡ ತಪಾಸಣೆ, ಕಣ್ಣಿನ ಪೊರೆ ತಪಾಸಣೆ ಶಿಬಿರಗಳನ್ನೂ ಭಟ್‌ ಅವರು ಆಯೋಜಿಸುತ್ತಾರೆ. ಥೈರಾಯ್ಡ ಚಿಕಿತ್ಸೆಗೆ ಸ್ವಲ್ಪ ವೆಚ್ಚವಾಗುತ್ತದೆ. ಮೊದಲೆಲ್ಲ ಅದನ್ನೂ ಉಚಿತವಾಗಿಯೇ ನೀಡಲಾಗುತ್ತಿತ್ತು. ಆದರೆ, ಜನರು ಅದನ್ನು ಸದುಪಯೋಗ ಪಡಿಸಿಕೊಳ್ಳದ ಕಾರಣ ಈಗ ಥೈರಾಯ್ಡ ತಪಾಸಣೆಗೆ ಕನಿಷ್ಠ ಶುಲ್ಕವನ್ನು ನಿಗದಿಸಿದ್ದಾರೆ. ಡಾಕ್ಟರ್‌ಗಳ ಫೀಸು ಗಗನಕ್ಕೇರುತ್ತಿರುವಾಗ ನೀವ್ಯಾಕೆ ಹೀಗೆ ಅಂತ ಕೇಳಿದರೆ, ನನ್ನ ನೇಚರ್ರೆà ಹೀಗೆ ಅಂತ ನಗುತ್ತಾರೆ ಈ 71 ವರ್ಷದ ಉತ್ಸಾಹಿ, ಹೃದಯವಂತ ವೈದ್ಯರು.

ಸ್ಫೂರ್ತಿ ಏನು?
ಪ್ರಪಂಚವನ್ನು ಮಾನ ವೀಯ ಗುಣ ದಿಂದ ನೋಡುವ ಇವರ ಸ್ವಭಾ ವ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕರಾವಳಿಯ ಕಂಬಳದ ಕಹಳೆ ಜಗದಗಲ ಮೊಳಗಿದೆ. ಕಂಬಳ ಓಟಗಾರನಿಗೆ ಬಹುಪರಾಕ್‌ ಸಿಗುತ್ತಲೇ ಇದೆ. ರಾಜ್ಯಕ್ರೀಡಾಕೂಟದಲ್ಲೂ ಕಂಬಳ ಪ್ರವೇಶಿಸುವ ಮಾತುಗಳು ಕೇಳಿಬರುತ್ತಿವೆ....

  • ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಈಗಾಗಲೇ ಆಸೆ- ನಿರೀಕ್ಷೆಗಳ ತೋರಣ ಕಟ್ಟಿದೆ. ಫೆ.26ರಿಂದ ಮಾ.4ರ ವರೆಗೆ, 7 ದಿನಗಳ ಕಾಲ, ವಿಶ್ವದ ಅನೇಕ ದೇಶಗಳಲ್ಲಿ ಪ್ರಸಿದ್ಧಿ...

  • ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್‌ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಸಿಕೆಪಿಯಲ್ಲಿ ಇದಕ್ಕೆ...

  • ಕನ್ನಡ, ಹಿಂದಿ ಚಿತ್ರಭೂಮಿಕೆಗಳಲ್ಲಿ ನಟಿಸಿದ್ದ, ಹಿರಿಯ ಅಭಿನೇತ್ರಿ ಕಿಶೋರಿ ಬಲ್ಲಾಳ್‌ ಇತ್ತೀಚೆಗಷ್ಟೇ ಇಹವನ್ನು ಅಗಲಿದರು. ಆಪ್ತ ಬಳಗದಲ್ಲಿ ಅವರು ಬಿತ್ತಿದ...

  • ರಾವಣ, ಸೀತೆಯನ್ನು ಅಪಹರಿಸಿ, ಲಂಕೆಗೆ ಕರೆತಂದಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾಮ ಬಳಗದಲ್ಲಿ ಮುಂದಿನ ಪ್ರಶ್ನೆ ಎದ್ದು ಕುಳಿತಿತ್ತು: ಲಂಕೆಗೆ ಹೋಗುವುದು...

ಹೊಸ ಸೇರ್ಪಡೆ