ಸಿಟಿ ಆಫ್ “ಕೇಕ್‌’: ಕ್ರಿಸ್ಮಸ್‌ ಕೇಕ್‌ ಪ್ರಿಯರಿಗೆ…

Team Udayavani, Dec 23, 2017, 4:09 PM IST

 ಬೆಂಗಳೂರು ಲೇಕ್‌ ಸಿಟಿ. ಹಾಗೆಯೇ ಕೇಕ್‌ ಸಿಟಿಯೂ ಹೌದು. ಥರಹೇವಾರಿ ಕೇಕ್‌ಗಳಿಗೆ ರಾಜಧಾನಿ ಹೆಸರುವಾಸಿ. ಅದರಲ್ಲೂ ಕ್ರಿಸ್ಮಸ್‌ ಬಂತೆಂದರೆ, ಇಲ್ಲಿ ಕೇಕ್‌ ಖಾದ್ಯಗಳ ನಾನಾ ಆಕರ್ಷಣೆ ಕಾಣಬಹುದು. ಕ್ರಿಸ್ಮಸ್‌ ಕೇಕ್‌ಪ್ರಿಯರಿಗೆ ಅತ್ಯುತ್ತಮ ಕೇಕ್‌ ಪಾಯಿಂಟ್‌ಗಳ ಪುಟ್ಟ ಪರಿಚಯ ಇಲ್ಲಿದೆ…

1. ಬಟರ್‌ ಸೈಡ್‌ ಅಪ್‌
ಮಗ/ ಮಗಳ ಫ್ರೆಂಡ್ಸ್‌ಗೆ ಶಾಲೆಯಲ್ಲಿ ಕ್ರಿಸ್ಮಸ್‌ ಪ್ರಯುಕ್ತ ಹಂಚಲು ಬೆಸ್ಟ್‌ ಕಪ್‌ ಕೇಕ್‌ಗಳು ಇಲ್ಲಿ ಲಭ್ಯ. ರೆಡ್‌ ವೆಲ್ವೆಟ್‌, ಚಾಕೊಲೇಟ್‌, ಮ್ಯಾಂಗೊ, ಬನಾನ ಸೇರಿದಂತೆ ನಾನಾ ಫ್ಲೇವರ್‌ನ ಕೇಕ್‌ಗಳು ಇಲ್ಲಿ ಸಿಗುತ್ತವೆ.
ವಿಳಾಸ: 1ನೇ ಮಹಡಿ, ಎಚ್‌ಎಂಆರ್‌ ಕಾಂಪ್ಲೆಕ್ಸ್‌, ಬೆಳ್ಳಂದೂರು ಕ್ರಾಸ್‌ ರಸ್ತೆ, ಬೆಳ್ಳಂದೂರು 
ಮೊ. 9008744558, 9686600092

2. ಸ್ವೀಟ್‌ ಫ್ಯಾಂಟಸಿ
ಕ್ರಿಸ್‌ಮಸ್‌ಗೆ ಹೋಂ ಮೇಡ್‌ ಕೇಕ್‌ಗಳನ್ನು ತಿನ್ನಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆ. ನೀವು ಬಯಸಿದ ಕೇಕ್‌ ಯಾವುದೆಂದು ಮೊದಲೇ ಅವರಿಗೆ ತಿಳಿಸಿದರೆ, ಅವರು ನಿಮ್ಮ “ಸ್ವೀಟ್‌ ಫ್ಯಾಂಟಸಿ’ಯನ್ನು ಪೂರೈಸುತ್ತಾರೆ. 
ವಿಳಾಸ: 36 ನಾರಿಸ್‌ ರಸ್ತೆ, ರಿಚ¾ಂಡ್‌ ಟೌನ್‌
ಮೊ. 9945821211

3. ಕೇಕ್‌ ಜೀನಿ
“ಕೇಕ್‌ ಜೀನಿ’ಯಲ್ಲಿ ಜೇನಿನ ಸವಿಯ ಕೇಕ್‌ಗಳು ಲಭ್ಯ. ಆ್ಯಪಲ್‌, ಚಾಕೊಲೇಟ್‌, ಬ್ಲೂಬೆರ್ರಿ, ಚೀಸ್‌ ಹಾಗೂ ಇನ್ನಿತರ ಫ್ಲೇವರ್‌ಗಳ ಕೇಕ್‌ಗಳು ಇಲ್ಲಿ ಸಿಗುತ್ತವೆ.  
ವಿಳಾಸ: 726, ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆ, 1 ಸ್ಟೇಜ್‌, ಇಂದಿರಾನಗರ
ಮೊ. 9972566644

4. ಮ್ಯಾಜಿಕ್‌ ಬೈಟ್ಸ್‌
ಹೆಸರೇ ಹೇಳುವಂತೆ ಇಲ್ಲಿನ ಕೇಕ್‌ಗಳಿಗೆ ಮ್ಯಾಜಿಕಲ್‌ ಸವಿ ಇದೆ. ವೈವಿಧ್ಯಮಯ ಆಕಾರ ಹಾಗೂ ಫ್ಲೇವರ್‌ನ ಕೇಕ್‌ಗಳು ವಿಶೇಷ ರುಚಿ ಹತ್ತಿಸಲಿವೆ. 
ವಿಳಾಸ: ಎಚ್‌ಎಸ್‌ಆರ್‌ ಲೇ ಔಟ್‌, ಸರ್ಜಾಪುರ ರಸ್ತೆ
ಮೊ. 9738989815

5. ಮೆಲ್ಟ್ ಇಟ್‌ ಡೌನ್‌
ಬಾಯಲಿಟ್ಟ ಕೂಡಲೇ ಕರಗಿ ಹೋಗುವಂಥ ಸ್ವಾದಿಷ್ಟ ಹೋಂ ಮೇಡ್‌ ಕೇಕ್‌ಗಳಿಗೆ ಇದು ಹೆಸರುವಾಸಿ. ಇಲ್ಲಿ ಶುಚಿ ಮತ್ತು ರುಚಿಯಲ್ಲಿ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ಕೇಕ್‌ಗಳನ್ನು ಸವಿಯಲು ಮೂರು ದಿನ ಮುಂಚಿತವಾಗಿ ಆರ್ಡರ್‌ ಮಾಡಬೇಕು. 
ವಿಳಾಸ: ಕನಕಪುರ ಮುಖ್ಯರಸ್ತೆ
ಮೊ. 9886808899

6. ದ ಕೇಕ್‌ ಲೇಡಿ
ವಿಶಿಷ್ಟ ಸ್ವಾದದ ಕೇಕ್‌ಗಳನ್ನು ತಯಾರಿಸುವುದರಲ್ಲಿ “ಕೇಕ್‌ ಲೇಡಿ’ಯದ್ದು ಎತ್ತಿದ ಕೈ. ಹುಟ್ಟುಹಬ್ಬ, ಹೊಸವರ್ಷ, ಮದುವೆ- ಹೀಗೆ ಸಮಾರಂಭ ಯಾವುದೇ ಆದರೂ ನಿಮ್ಮಿಷ್ಟದ ಕೇಕ್‌ಗಳನ್ನು ಇಲ್ಲಿ ತಯಾರಿಸಿ ಕೊಡಲಾಗುತ್ತದೆ. 
ವಿಳಾಸ: 64, 21ನೇ ಮುಖ್ಯರಸ್ತೆ, ಸೆಕೆಂಡ್‌ ಫೇಸ್‌, ಜೆ.ಪಿ. ನಗರ
ಫೋ: 080- 4204 2229

7. ಸ್ವೀಟ್‌ ಚೆರಿ
ಇಲ್ಲಿ ನಿಮಗೆ ಕೇಕ್‌ಗಳಷ್ಟೇ ಅಲ್ಲದೆ, ಪಿಜ್ಜಾ, ಪೇಸ್ಟ್ರೀಸ್‌ ಹಾಗೂ ಹೂ ಬೊಕೆ ಕೂಡ ಲಭ್ಯ. ಹೊಸವರ್ಷಕ್ಕೆ ಪಾರ್ಟಿ ಮಾಡುವ ಯೋಚನೆಯಿದ್ದರೆ, ನಿಮಗೆ ಬೇಕಾದ ಎಲ್ಲವೂ ಇಲ್ಲಿ ಸಿಗುತ್ತವೆ.
ವಿಳಾಸ: ಶಾಪ್‌ ನಂ. 6 7, ಸೇಂಟ್‌ ಪ್ಯಾಟ್ರಿಕ್‌ ಕಾಂಪ್ಲೆಕ್ಸ್‌, ಬ್ರಿಗೇಡ್‌ ರೋಡ್‌ 
ಮೊ. 97409 68899

8. ಸಿಂಪ್ಲಿ ಯಂಯಂ ಕಪ್‌ ಕೇಕ್ಸ್‌
ಇಲ್ಲಿನ ಕಪ್‌ ಕೇಕ್ಸ್‌ಗಳನ್ನು ತಿಂದವರಲ್ಲಿ ಬಾಯಲ್ಲಿ “ವಾವ್‌ ಇಟ್ಸ್‌ ಯಮ್ಮಿ’ ಎಂಬ ಉದ್ಘಾರ ಬಂದೇ ಬರುತ್ತೆ. ಯಾಕಂದ್ರೆ ಇಲ್ಲಿ ಎಲ್ಲವೂ ಸಿಂಪ್ಲಿ ಯಮ್ಮಿà! ತರಹೇವಾರಿ ಆಕಾರ ಮತ್ತು ಫ್ಲೇವರ್ನ ಕಪ್‌ಕೇಕ್‌ಗಳಿಗಾಗಿ ಇವರನ್ನು ಸಂಪರ್ಕಿಸಿ. 
ವಿಳಾಸ: ಬನ್ನೇರುಘಟ್ಟ ರಸ್ತೆ 
ಮೊ. 9740089227

9. ಡು ಇಟ್‌ ಸ್ವೀಟ್‌
ಇಲ್ಲಿ ಸಿಗುವ ವೆನಿಲಾ, ರೆಡ್‌ ವೆಲ್ವೆಟ್‌ ಹಾಗೂ ಚಾಕೋಲೇಟ್‌ ಕೇಕ್‌ಗಳನ್ನು ತಿಂದವರು ಅಷ್ಟು ಬೇಗ ಆ ಸ್ವಾದವನ್ನು ಮರೆಯುವುದಿಲ್ಲ. ಒಂದು ವಾರ ಮುಂಚಿತವಾಗಿ ಕೇಕ್‌ಗೆ ಆರ್ಡರ್‌ ಮಾಡಿದರೆ, ನಿಮಗೆ ಬೇಕಾದ ರೀತಿಯಲ್ಲಿ ಕೇಕ್‌ ತಯಾರಿಸಿ ಕೊಡುತ್ತಾರೆ.
ವಿಳಾಸ: ಫೋರಂ ವ್ಯಾಲ್ಯೂ ಮಾಲ್‌ ಹತ್ತಿರ, ವೈಟ್‌ಫೀಲ್ಡ್‌
ಮೊ. 9916264022

10. ಕೇಕ್‌ ಸ್ಟುಡಿಯೊ
ಇದು ಫೋಟೊ ಸ್ಟುಡಿಯೊ ಅಲ್ಲ, ಆದರೆ, ಇಲ್ಲಿ ಕ್ಯಾಮೆರಾ ಕೇಕ್‌ಗಳು ಲಭ್ಯ! ಬರೀ ಕ್ಯಾಮೆರಾ ಅಷ್ಟೇ ಅಲ್ಲ, ಕೇಕ್‌ ಸ್ಟುಡಿಯೋದಲ್ಲಿ ಕಾರು, ಲೇಝಿ ಬಾಯ್‌, ಗೊಂಬೆ- ಹೀಗೆ ವಿವಿಧ ಆಕಾರದ ಕೇಕ್‌ಗಳು ಲಭ್ಯ. ಮಕ್ಕಳಿಗೆ ಇಲ್ಲಿನ ಕೇಕ್‌ಗಳು ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ 2000ಕ್ಕೂ ಹೆಚ್ಚು ವೈವಿಧ್ಯಮಯ ಕೇಕ್‌ಗಳು ಸಿಗುತ್ತವೆ! 
ವಿಳಾಸ: ಶ್ರೀನಿವಾಸ ನಗರ, ಬನಶಂಕರಿ
ಮೊ. 099452 14103


ಈ ವಿಭಾಗದಿಂದ ಇನ್ನಷ್ಟು

  • ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್‌ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ...

  • ಗಾಂಧಿ ಭವನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ಸ್ಥಾಪನೆಯಾದ ಕಟ್ಟಡ. ಗಾಂಧಿ ತತ್ತ್ವವನ್ನು ಸಾರುವ ಸಲುವಾಗಿ "ಗಾಂಧಿ ಸ್ಮಾರಕ ನಿಧಿ' ಹೆಸರಿನಲ್ಲಿ...

  • ವೃದ್ಧ ತಂದೆ- ತಾಯಿಯನ್ನು ಹೊತ್ತು, ಯಾತ್ರೆ ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೀರಿ. ಅಂಥದ್ದೇ ಒಬ್ಬ ಅಪರೂಪದ ಮಗ ಮೈಸೂರಿನ ಕೃಷ್ಣಕುಮಾರ್‌. ಅಡುಗೆಮನೆಯೇ ಜಗತ್ತು...

  • ಮಿಥಿಲೆ ಪುರಾಣ ಗ್ರಂಥಗಳಿಂದ ಮಾತ್ರವೇ ನಮಗೆ ತಿಳಿದಿರುವ ನಗರ. ಸೀತೆ ಹುಟ್ಟಿದ್ದು, ಜನಕರಾಜನ ಅರಮನೆ ಇದ್ದಿದ್ದು ಇಲ್ಲಿಯೇ ಎಂದು ನಂಬಿದ್ದೇವೆ. ಮಿಥಿಲಾ ನಗರಿ ಈಗ...

  • ಟ್ರಾಫಿಕ್‌ ಪೊಲೀಸರು ದಿನವಿಡೀ ನಿಂತೇ ಇರಬೇಕು. ಜೊತೆಗೆ, ಟ್ರಾಫಿಕ್‌ನ ಅಬ್ಬರ, ನಿಯಮ ಮುರಿದು ತಲೆನೋವು ಕೊಡುವ ವಾಹನ ಚಾಲಕರು, ಬಿಸಿಲು, ಧೂಳು, ಹೊಗೆ, ಕಿವಿಗಡಚಿಕ್ಕುವ...

ಹೊಸ ಸೇರ್ಪಡೆ