ಸಂಬಳದಲ್ಲಿ ಸ್ವಲ್ಪ ಕಡಿತ! ಏಪ್ರಿಲ್‌ನಿಂದ ಜಾರಿಗೆ?!

2019ರಲ್ಲಿಯೇ ಸಂಸತ್ತು ಈ ವೇಜ್‌ ಕೋಡ್‌ಗೆ ಅನುಮತಿ ನೀಡಿದೆ.

Team Udayavani, Jan 11, 2021, 6:35 PM IST

ಸಂಬಳದಲ್ಲಿ ಸ್ವಲ್ಪ ಕಡಿತ! ಏಪ್ರಿಲ್‌ನಿಂದ ಜಾರಿಗೆ?!

ಈ ವರ್ಷದ ಏಪ್ರಿಲ್‌ ತಿಂಗಳಿನಿಂದ ನೌಕರರಿಗೆ ತಿಂಗಳ ಕೊನೆಗೆ ಸಿಗುವ ಸಂಬಳದಲ್ಲಿ ಸ್ವಲ್ಪ ಕಡಿತವಾಗಲಿದೆ ಎಂಬ ಮಾತುಗಳಿವೆ. ಅಂದ ಹಾಗೆ, ಇದು ಅರ್ಥಿಕ ಮುಗ್ಗಟ್ಟಿನ ಹೆಸರಿನಲ್ಲಿ ನೌಕರರಿಗೆ ಸಂಬಳ ಕಡಿಮೆ ಮಾಡುವ ಉದ್ದೇಶದಿಂದ ಆಗುತ್ತಿರುವುದಲ್ಲ. ಇದು ಏಪ್ರಿಲ್‌ 2021ರಿಂದ ಜಾರಿಗೆ ಬರಲಿರುವ ವೇಜ್‌ ಕೋಡ್‌ 2019ನ ಪರಿಣಾಮ. ಎರಡು ವರ್ಷದ ಹಿಂದೆಯೇ, ಅಂದರೆ 2019ರಲ್ಲಿಯೇ ಸಂಸತ್ತು ಈ ವೇಜ್‌ ಕೋಡ್‌ಗೆ ಅನುಮತಿ ನೀಡಿದೆ. ಈ ನಿಯಮ ಜಾರಿಗೆ ಬಂದ ನಂತರ ಕಂಪನಿಗಳು ಮತ್ತು ಉದ್ಯೋಗದಾತರು ತಾವು ನೀಡುವ ಸಂಬಳದ ಪ್ಯಾಕೇಜ್‌ ಅನ್ನು ಪುನರ್‌ ವಿನ್ಯಾಸ ಮಾಡಬೇಕಾಗುತ್ತದೆ. ವೇಜ್‌ ಕೋಡ್‌ 2019ರ ಮೂಲ ಉದ್ದೇಶ, ದುಡಿಯವ ವರ್ಗದ ನಿವೃತ್ತಿಯ ನಂತರದ ಬದುಕಿ ನಲ್ಲಿ ಅರ್ಥಿಕ ಸಂಕಷ್ಟ ಕಡಿಮೆ ಯಾಗಲಿ ಎನ್ನುವುದು. ಅಂತೆಯೇ ಅವರ ಕೈಗೆ ಸಿಗುವ ಸಂಬಳದಲ್ಲಿ ಸ್ವಲ್ಪ ಕಡಿತ ಮಾಡಿ ನಿವೃತ್ತಿಯಲ್ಲಿ ದೊರಕುವ ನಿವೃತ್ತಿ ಸೌಲಭ್ಯವನ್ನು ಹೆಚ್ಚಿಸುವುದು.

ಈ ಕೋಡ್‌ನ‌ ವಿಶೇಷ ಏನು?
ಸಂಬಳದಲ್ಲಿ ಮೂಲವೇತನ, ಭತ್ಯೆಗಳು ಎಂದು ಎರಡು ವಿಭಾಗಗಳು ಇರುತ್ತವೆ. ಈ ಕೋಡ್‌ ಪ್ರಕಾರ, ಭತ್ಯೆಗಳು ಒಟ್ಟು ಸಂಬಳದ ಶೇ.50 ಮೀರ ಬಾರದು. ಮೂಲ ವೇತನವು ಒಟ್ಟು ಸಂಬಳದ 50%ಕ್ಕಿಂತ ಕಡಿಮೆ ಇರಬಾರದು. ಈ ನಿಯಮಾವಳಿ ಜಾರಿಗೆ ಬಂದರೆ, ಮೂಲವೇತನವು ಹೆಚ್ಚಾಗುತ್ತದೆ. ಅದೇ ಅನುಪಾತದಲ್ಲಿ ಗ್ರಾಚುಯಿಟಿಯೂ ಹೆಚ್ಚಾಗುತ್ತದೆ.

ಪ್ರೊವಿಡೆಂಟ್‌ ಫ‌ಂಡ್‌ಗೆ ಉದ್ಯೋಗಿಗಳ ಕೊಡುಗೆಯೂ ಹೆಚ್ಚುತ್ತದೆ. ಹೀಗಾದಾಗ, ಕೈಗೆ ಬರುವ ಸಂಬಳದಲ್ಲಿ ಸ್ವಲ್ಪ ಕಡಿತವಾಗುತ್ತದೆ. ಇದು ಸಾಮಾನ್ಯವಾಗಿ ಮೂಲವೇತನದ 12% ಇರುತ್ತಿದ್ದು, ನಿವೃತ್ತಿ ಸೌಲಭ್ಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಈ ಮೊತ್ತ ನಿವೃತ್ತಿ ಸೌಲಭ್ಯದ ಹೆಸರಿನಲ್ಲಿ ಉದ್ಯೋಗಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಪ್ರಸ್ತುತ ಅನೇಕ ಕಂಪನಿಗಳು ಒಟ್ಟು ಸಂಬಳದಲ್ಲಿ ಭತ್ಯೆಯೇತರ ((non allowancepar) ಪ್ರಮಾ ಣವನ್ನು 50% ಕ್ಕಿಂತ ಕಡಿಮೆ ಇಡುತ್ತಿದ್ದು, ಭತ್ಯೆ ಭಾಗ ವನ್ನು ಹೆಚ್ಚಿಗೆ ಇಡುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನು ರಿವರ್ಸ್‌ ಮಾಡಬೇಕಾಗುತ್ತದೆ. ಅಂದರೆ, ಮೂಲ ವೇತನ
ಹೆಚ್ಚಾಗಿ ಇತರ ಭತ್ಯೆಗಳು ಕಡಿಮೆಯಾಗುತ್ತವೆ.

ಒಟ್ಟಾರೆ ಸಂಬಳದಲ್ಲಿ ಕಡಿತವಾಗುವುದಿಲ್ಲ. ಖಾಸಗಿ ರಂಗದ ಉದ್ಯಮಗಳಲ್ಲಿ, ಅದಾಯ ತೆರಿಗೆಯನ್ನು ಉಳಿಸಲು ಕೆಲವು ಭತ್ಯೆಯ ಪ್ರಮಾಣವನ್ನು ಹೆಚ್ಚು ಮಾಡಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಈ ಹೊಸ ನಿಯಮಾವಳಿಯ ಪರಿಣಾಮವನ್ನು ಖಾಸಗಿ ರಂಗದಲ್ಲಿ ಹೆಚ್ಚು ಕಾಣಬಹುದು. ಸರ್ಕಾರಿ ರಂಗದಲ್ಲಿ ಭತ್ಯೆಗಳು ಕಡಿಮೆ ಇರುತ್ತಿದ್ದು ಇದರ ಪರಿಣಾಮ ಹೆಚ್ಚು ಆಗಲಿಕ್ಕಿಲ್ಲ ಎನ್ನುವ ಲೆಕ್ಕಾಚಾರ ಕೇಳುತ್ತಿದೆ. ದುಡಿಯುವ ವರ್ಗಕ್ಕೆ ನೀಡುವ ಭತ್ಯೆಗಳಲ್ಲಿ ಗೃಹ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ತುಟ್ಟಿ ಭತ್ತೆ, ಮೆಡಿಕಲ್‌ ಭತ್ಯೆ, ಗುಡ್ಡಗಾಡು ಭತ್ಯೆ, ನಗರ ಭತ್ಯೆ ಮುಂತಾದ ಭತ್ಯೆಗಳು ಇರುತ್ತವೆ. ಈ ವೇಜ್‌ ಕೋಡ್‌ನ‌ ಪ್ರಕಾರ, ಅಡಳಿತ ವರ್ಗ ಸಿಬ್ಬಂದಿಗಳ ಪ್ರೊವಿಡೆಂಟ್‌ ಫ‌ಂಡ್‌ ಮತ್ತು ಗ್ರಾಚುಯಿಟಿಗೆ ಹೆಚ್ಚಿನ ಹಣ ಕೊಡಬೇಕಿರುವುದರಿಂದ ಅವರ ಸ್ಯಾಲರಿ ಬಿಲ್‌ ಹೆಚ್ಚಾಗಬಹುದು.

*ರಮಾನಂದ ಶರ್ಮಾ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.