ಹೂಡಿಕೆಗೆ ಹೊಸ ಪಾಡ್‌


Team Udayavani, Jan 14, 2019, 12:30 AM IST

shutterstock583624615.jpg

ಟಿ.ವಿ ಮತ್ತು ಇಂಟರ್‌ನೆಟ್‌ಗಳು ದಾಂಗುಡಿ ಇಡುವ ಮುನ್ನ ವರ್ತಮಾನಗಳನ್ನರಿಯಲು, ಮನರಂಜನೆಯನ್ನು ಪಡೆಯಲು ಇದ್ದ ಏಕೈಕ ಸಾಧನವೆಂದರೆ ಅದು ರೇಡಿಯೋ.  ಅದರ ಮೂಲಕವಾಗಿ ಬರುತ್ತಿದ್ದ ವಿವಿಧ ಪೊ›ಗ್ರಾಮ್‌ ಗಳನ್ನು ಕೇಳುತ್ತಲೇ ಬೆಳೆದ ಪೀಳಿಗೆ ಇಂದು ಬಹುತೇಕ ಇಳಿವಯಸ್ಸಿನಲ್ಲಿದೆ.  ರೇಡಿಯೋದ ಆಧುನಿಕ ಅವತರಣಿಕೆಯೇ ಈ ಪಾಡ್‌ಕಾಸ್ಟ್‌ ಎನ್ನಬಹುದು. 

ಶಿಲಾಯುಗದಿಂದ ಇತ್ತೀಚಿನ ಅಂತರ್ಜಾಲ ಯುಗದ ತನಕದ ಇತಿಹಾಸವನ್ನು ಓದಿ, ನೋಡಿ, ಕೇಳಿ ತಿಳಿದುಕೊಂಡೇ ನಾವೆಲ್ಲ ಪ್ರಬುದ್ಧರಾಗುತ್ತಿದ್ದೇವೆ. ಹಿಂದೆಲ್ಲ ಪೀಳಿಗೆಯಿಂದ ಪೀಳಿಗೆಗೆ ಇತಿಹಾಸದ ವರ್ತಮಾನಗಳನ್ನು ದಾಟಿಸಲು ಶಿಲಾಶಾಸನ, ಗೋಡೆಬರಹ, ಶಿಲ್ಪಶಾಸ್ತ್ರ, ತಾಳೆಗರಿ ಗ್ರಂಥಗಳ ಬಳಕೆ ಇತ್ತಲ್ಲವೆ? 

ಹೊಸ ಹೊಸ ಆವಿಷ್ಕಾರಗಳಿಗೆ ಒಡ್ಡಿಕೊಳ್ಳುತ್ತಲೇ ಆಧುನಿಕತೆಯನ್ನು ತನ್ನದಾಗಿಸಿಕೊಂಡಿದ್ದರಿಂದ ಜಗತ್ತೇ ನಮ್ಮ ಅಂಗೈಯಲ್ಲಿದೆ. ಈಗ ಇದರ ವಿಸ್ತರಣ ರೂಪವಾಗಿ ಪಾಡ್‌ಕಾಸ್ಟ್‌ ಎಂಬ ಇನ್ನೊಂದು ಬಗೆಯ ವ್ಯವಹಾರ ನಮ್ಮ ಮುಂದೆ ಧುತ್ತೆಂದು ಬಂದು ನಿಂತು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ.  ತಂತ್ರಜ್ಞಾನ ಪ್ರತಿದಿನವೂ ಹೊಸತನಕ್ಕಾಗಿ ತುಡಿಯುತ್ತಿರುತ್ತದೆ.  ಹೀಗಾಗಿ ಪಾಡ್‌ಕಾಸ್ಟ್‌ ಮೂಲಕ ವ್ಯವಹಾರ ಶುರುವಾಗಿದೆ. ವಿಶ್ವದಾದ್ಯಂತ ಪಾಡ್‌ ಕಾಸ್ಟ್‌ ವಹಿವಾಟು ಸಣ್ಣರೂಪದಿಂದ ಆರಂಭಗೊಂಡಿದ್ದರೂ, ಇಂದು ಅದು ಹೆಚ್ಚು ಜನಪ್ರಿಯವಾಗಿದೆ ಎಂಬುದು ಗಮನಾರ್ಹ.  2017-18ರ ಅಂಕಿಅಂಶಗಳ ಪ್ರಕಾರ, ಪಾಡ್‌ಕಾಸ್ಟ್‌ ಮೂಲಕ ಜಾಗತಿಕವಾಗಿ 314 ಮಿಲಿಯ ಡಾಲರ್‌  ವಹಿವಾಟು ನಡೆದಿದೆ.  ಚೀನಾವೊಂದರಲ್ಲೇ ಸುಮಾರು 7.3 ಮಿಲಿಯನ್‌ ಡಾಲರ್‌ ವಹಿವಾಟಾಗಿದೆ. ವಿಶ್ವದಾದ್ಯಂತ ಒಟ್ಟಾರೆ ಆರು ಲಕ್ಷ ಪಾಡ್‌ ಕಾಸ್ಟರ್‌ಗಳು ಇದ್ದಾರೆ.  ಪಾಡ್‌ ಕಾಸ್ಟ್‌ ಕೇಳುಗರ ಸಂಖ್ಯೆ ಅರವತ್ತು ಲಕ್ಷಗಳಷ್ಟಿದೆ.

ಅಮೇರಿಕಾದಲ್ಲಿ ಪಾಡ್‌ಕಾಸ್ಟ್‌ ನ ಮೇಲೆ ದೊಡ್ಡ ಸಮೀಕ್ಷೆಯಾಗಿದೆ. ಅಲ್ಲಿನ ಜನರಲ್ಲಿ ಶೇ.64ರಷ್ಟು ಪಾಡ್‌ಕಾಸ್ಟ್‌ಗೆ ಅಡಿಕ್ಟ್ ಆಗಿದ್ದಾರೆ. ಶೇ. 49ರಷ್ಟು ಮಂದಿ ಮನೆಯಲ್ಲಿ ಇದನ್ನು ಕೇಳುತ್ತಾರಂತೆ. ಶೇ. 23ರಷ್ಟು ಮಂದಿ ಕಾರಲ್ಲಿ ಪಾಡ್‌ಕಾಸ್ಟ್‌ಗೆ ಪರವಶರಾಗುತ್ತಾರೆ.

ಲಾಭ ಇದೆಯಾ?
ನಮ್ಮಲ್ಲಿ ಈಗಾಲೇ ಭೂಮ್‌ ಶುರುವಾಗಿದೆ. ಚಿತ್ರನಿರ್ದೇಶಕ ಯೋಗರಾಜ ಭಟ್ಟರು, ತಮ್ಮ ಚಿತ್ರದ ಬಗ್ಗೆ ಏನೇ ಮಾತನಾಡಬೇಕಾದರೂ ಪಾಡ್‌ಕಾಸ್ಟ್‌ ಮೂಲಕವೇ ಸಂದೇಶ ರವಾನಿಸುವ ಪರಿಪಾಠ  ಇಟ್ಟುಕೊಂಡಿದ್ದಾರೆ. 

ಪಾಡ್‌ಕಾಸ್ಟ್‌ ಅನ್ನು ಸೆಲಬ್ರೆಟಿಗಳ ಟೂಲ್‌ ಆಗಿಬಳಸಬಹುದು. ಹೇಗೆಂದರೆ, ಅವರು ಮಾತನಾಡಿದರೆ ಎಲ್ಲ ವರ್ಗದ ಜನರೂ ಕೇಳುವುದರಿಂದ ಜಾಹೀರಾತುಗಳು ಬಂದರೂ ಆಶ್ಚರ್ಯವಿಲ್ಲ. ರೆಕಾರ್ಡಿಂಗ್‌ ಒಂದು ಕಂಪೆನಿ ಕೊಟ್ಟು, ಮಾತು ಮಾತಿನ ಮಧ್ಯೆ ಕಂಪೆನಿಗಳ ಹೆಸರನ್ನು ಅಥವಾ ಉತ್ಪನ್ನಗಳ ಹೆಸರನ್ನು ತರುವ ಮೂಲಕ ಆದಾಯವನ್ನು ಗಳಿಸುವ ಹೊಸ ಮಾರ್ಗ ಇದಾಗಿದೆ. ಹೀಗಾಗಿ,  ಪಾಡ್‌ಕಾಸ್ಟ್‌ನಿಂದ ಕೂಡ ಭವಿಷ್ಯದ ದಿನಗಳಲ್ಲಿ ಟಿಆರ್‌ಪಿ ತಂದು ಇನ್ನಷ್ಟು ಆದಾಯ ಮಾಡಬಹುದೇ ಅನ್ನೋ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.  ಪಾಡ್‌ಕಾಸ್ಟ್‌ ಎಲ್ಲ ಕಡೆ ಹರಿಯಲು ಶುರುವಾಗಿರುವುದರಿಂದ ಆಡಿಯೋ ಕಂಪೆನಿಗಳಿಗೆ ಸ್ವಲ್ಪ ತಲೆ ನೋವಾಗಿದೆ ಅನ್ನೋ ಸುದ್ದಿ ಕೂಡ ಓಡಾಡುತ್ತಿದೆ.  ವಾಸ್ತವವಾಗಿ ಪಾಡ್‌ ಕಾಸ್ಟ್‌ ಎಂಬುದು  ಎಂ.ಪಿ.3 ಮಾದರಿಯ ಆಡಿಯೋ ಫೈಲ್‌. ಈ ಕುರಿತಾಗಿ ಬಿಬಿಸಿಯಲ್ಲಿ 2004ರಿಂದಲೇ ಬಿಸಿಬಿಸಿ ಚರ್ಚೆಗಳು ನಡೆದಿದ್ದವು. ಮುಂಬರುವ ವರ್ಷಗಳಲ್ಲಿ ಈ ವಿಧಾನವನ್ನು ಜನ ದೊಡ್ಡಮಟ್ಟದಲ್ಲಿ ಸ್ವೀಕರಿಸುತ್ತಾರೆ.  ಇದು ಜನಪ್ರಿಯವಾಗುತ್ತದೆ ಎಂಬೆಲ್ಲ ಮಾತುಗಳು ಆಗಿಂದಲೇ ಪ್ರಚಲಿತದಲ್ಲಿವೆ.  2005ರಲ್ಲಿ ಆ್ಯಪಲ್‌ ಕಂಪೆನಿ ಲಾಂಚ್‌ ಮಾಡಿದ ಐಟ್ಯೂನ್ಸ್‌, ಪಾಡ್‌ಕಾಸ್ಟ್‌ಗೆ ಪ್ರಥಮ ಭೂಮಿಕೆಯನ್ನು ಒದಗಿಸುವಲ್ಲಿ ಯಶಸ್ವಿಯಾಯಿತು. ನ್ಯೂಯಾರ್ಕಿನ ಫೇರ್‌ಪೋರ್ಟ್‌ ಎಂಬ ಕಂಪೆನಿ, 2005ರಲ್ಲಿಯೇ ಪಾಡ್‌ಕಾಸ್ಟ್‌ ಎಂಬ ಹೆಸರಿನ ಮೇಲೆ ಟ್ರೇಡ್‌ ಮಾರ್ಕ್‌ ನೋಂದಣೆಗೆ ಅರ್ಜಿಸಲ್ಲಿಸಿತ್ತು.  ಆದರೆ ಅದನ್ನು ಪುರಸ್ಕರಿಸಲಾಗಲಿಲ್ಲ.  ನಂತರದ ವರುಷಗಳಲ್ಲಿ ಇ-ಪಾಡ್‌ ಕಾಸ್ಟ್‌, ಗಾಡ್‌ ಕಾಸ್ಟ್‌, ಮೈಪಾಡ್‌, ಪೊಡಂಗೋ, ಪೊಡ್‌ ಕ್ಯಾಬಿನ್‌, ಪಾಡ್‌ ಕಾಸ್ಟ್‌ ರಿಯಾಲ್ಟಿ, ಪಾಡ್‌ ಕಾಸ್ಟರ್‌, ಪಾಡ್‌ ಕಾಸ್ಟ್‌ ಪೀಪಲ್‌, ಪೋಡಗ್ರಾಮ್‌, ಪಾಡಿRಚನ್‌, ಪಾಡ್‌ ಶಾಪ್‌, ಪಾಡ್‌ ಅಡ್ವಟ್ರೆ„ಸರ್‌- ಹೀಗೆ ಬಗೆ ಬಗೆಯ ಹೆಸರುಗಳಲ್ಲಿ ಸಂಸ್ಥಾಪನೆಗಳು ಹುಟ್ಟಿಕೊಂಡವು. ಹೊಸ ಹೊಸ ಪ್ರೊಗ್ರಾಮ್‌ಗಳು ಸಿದ್ಧವಾದವು. ಅವೆಲ್ಲವಕ್ಕೂ ಟ್ರೇಡ್‌ ಮಾರ್ಕ್‌ ಕೋರಿ ಅರ್ಜಿಗಳ ಸಲ್ಲಿಕೆಯೂ ಆಯಿತು. ಅವುಗಳಲ್ಲಿ ಕೆಲವಕ್ಕೆ ಟ್ರೇಡ್‌ಮಾರ್ಕ್‌ ಸೌಭಾಗ್ಯ ಸಿಕ್ಕಿತು. 

ಪಾಡ್‌ಕಾಸ್ಟ್‌ ಮೂಲಕವಾಗಿ ಏನೆಲ್ಲ ವ್ಯವಹಾರಗಳನ್ನು ಮಾಡಬಹುದು ಶ್ರವ್ಯ ಮಾಧ್ಯಮದ ಮೂಲಕವಾಗಿಯೇ ಜನರನ್ನು ತಲುಪುವಲ್ಲಿ ಹೇಗೆ ಸಫ‌ಲರಾಗಬಹುದು ಎಂಬ ಬಗ್ಗೆ ಅನೇಕ ಹೊಸಬಗೆಯ ಸಂಗತಿಗಳು ದಿನಗಳೆದಂತೆ ಗರಿಗೆದರ ತೊಡಗಿದವು.  

ರೇಡಿಯೋಗಳು ನಮ್ಮ ಜನಜೀವನದ ಭಾಗವಾಗಿ ಅನೇಕ ದಶಕಗಳ ಕಾಲ ಮೆರೆದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಟಿ.ವಿ ಮತ್ತು ಇಂಟರ್‌ನೆಟ್‌ಗಳು ದಾಂಗುಡಿ ಇಡುವ ಮುನ್ನ ವರ್ತಮಾನಗಳನ್ನರಿಯಲು, ಮನರಂಜನೆಯನ್ನು ಪಡೆಯಲು ಇದ್ದ ಏಕೈಕ ಸಾಧನವೆಂದರೆ ಅದು ರೇಡಿಯೋ.  ಅದರ ಮೂಲಕವಾಗಿ ಬರುತ್ತಿದ್ದ ವಿವಿಧ ಪೊ›ಗ್ರಾಮ್‌ ಗಳನ್ನು ಕೇಳುತ್ತಲೇ ಬೆಳೆದ ಪೀಳಿಗೆ ಇಂದು ಬಹುತೇಕ ಇಳಿವಯಸ್ಸಿನಲ್ಲಿದೆ.  ರೇಡಿಯೋದ ಆಧುನಿಕ ಅವತರಣಿಕೆಯೇ ಈ ಪಾಡ್‌ಕಾಸ್ಟ್‌ ಎನ್ನಬಹುದು. 

ಯಾಕೆ ಅದು ರಂಜನೀಯವೆನಿಸುತ್ತದೆ ?
ನಾವು ಒಂದು ಕಾದಂಬರಿಯನ್ನು ಓದುವಾಗ ನಮ್ಮದೇ  ಆದ ವಿಧಾನದಲ್ಲಿ ಓದುತ್ತೇವೆ, ಗಟ್ಟಿಯಾಗಿ ಓದಿದರೂ ನಮ್ಮ ಧ್ವನಿಯಲ್ಲಿ ಏರಿಳಿತಗಳಿರುವುದಿಲ್ಲ, ಏಕತಾನತೆ ಇರುತ್ತದೆ. ಮನಸ್ಸಿನಲ್ಲೇ ಓದಿಕೊಂಡರೂ ಆಗುತ್ತದೆ.  ಆದರೆ ಈ ಶ್ರವಣಮಾಧ್ಯಮದಲ್ಲಿ ನಾವು ಆಲಿಸುವ ಧ್ವನಿ ಆಕರ್ಷಕವಾಗಿರುತ್ತದೆ. ಕಾದಂಬರಿಯಲ್ಲಿ ಬರುವ ಸನ್ನಿವೇಶಕ್ಕೆ ತಕ್ಕಂತೆ ನವರಸಗಳನ್ನು ಮಾತಿನಲ್ಲೇ ಹೊಮ್ಮಿಸುವ ಏರಿಳಿತಗಳನ್ನು ಅದು ಸಾಕ್ಷೀಕರಿಸುತ್ತದೆ. ಆ ಮಾತುಗಳನ್ನು ಕೇಳುತ್ತಿದ್ದಂತೆ ಹೊಸತೊಂದು ಭಾವನಾಲೋಕ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ.  ನಾವು ಓದುವುದಕ್ಕಿಂತ ಈ ರೀತಿಯ ಕೇಳುಗ-ವಿಧಾನ ಹೆಚ್ಚು ಆಕರ್ಷಕವೆನಿಸುತ್ತದೆ.  ಹಾಗಾಗಿ ಇದು ರಂಜನೀಯವಾಗುವುದರಲ್ಲಿ ಯಾವುದೇ ಅನುಮಾನಲ್ಲ.  

ಪಾಡ್‌ ಕಾಸ್ಟ್‌ ಪ್ರಾರಂಭಿಸಲು ಏನು ವೆಚ್ಚ ತಗಲುತ್ತದೆ?
ಹವ್ಯಾಸಕ್ಕಾಗಿ ಪಾಡ್‌ ಕಾಸ್ಟ್‌ ಮಾಡುವುದಾದರೆ ನಮ್ಮಲ್ಲಿರುವ ಸಾಧನ-ಸಲಕರಣೆಗಳನ್ನು ಬಳಸಿ ಖರ್ಚಿಲ್ಲದೆಯೂ ಮಾಡಬಹುದು. ಆದರೆ ನಮ್ಮ ಪಾಡ್‌ ಕಾಸ್ಟ್‌ ವ್ಯವಸ್ಥಿತವಾಗಿ ಹೆಚ್ಚೆಚ್ಚು ಜನರನ್ನು ತಲುಪಬೇಕು,  ಸಕ್ಷಮವಾಗಿ ಗುಣಮಟ್ಟದ್ದಾಗಿ ಇರಬೇಕೆಂದರೆ ಕೊಂಚ ಖರ್ಚಿದೆ. ಪ್ರಾರಂಭಿಕ ವೆಚ್ಚವಾಗಿ ಐದಾರು ಸಾವಿರ ರೂ.ಗಳಷ್ಟು ವೆಚ್ಚ ತಗಲಬಹುದು. ಆದರೆ ಅದು ಜನಪ್ರಿಯವಾದಂತೆಲ್ಲ ನಮ್ಮ ಕೇಳುಗ ವಲಯದ ವರ್ಧನೆಯಾದಂತೆಲ್ಲ, ನಮಗೆ ಬರುವ ವರಮಾನವೂ ಆಕರ್ಷಕವಾಗಿರುತ್ತದೆ.  

ಪಾಡ್‌ಕಾಸ್ಟ್‌ ಮೂಲಕ ಗಳಿಕೆ ಸಾಧ್ಯವೇ?
ಹೌದು, ಇದು ಎಲ್ಲಕ್ಕಿಂತ ಮೊದಲು ಕೇಳಬೇಕಾದ ಪ್ರಶ್ನೆ. ಏಕೆಂದರೆ ಇಂದಿನ ವ್ಯಾವಹಾರಿಕ ಯುಗದಲ್ಲಿ ಯಾರೂ ಯಾವುದನ್ನೂ ಉಚಿತವಾಗಿ ಮಾಡುವುದಕ್ಕೆ ಸಿದ್ಧರಿರುವುದಿಲ್ಲ. ಎಲ್ಲವೂ ಹಣದೊಂದಿಗೆ ಹೆಣೆದುಕೊಂಡಿರುತ್ತದೆ. ಇಲ್ಲೂ ಅಷ್ಟೆ. ಯೂಟ್ಯೂಬ್‌ ಮೂಲಕ ಹಣ ಗಳಿಸುವುದು ನಿಮಗೆ ಗೊತ್ತೇ ಇದೆಯಲ್ಲವೇ? ಅಲ್ಲಿ ಎಷ್ಟು ಜನ ವೀಕ್ಷಿ$ಸಿದರು ಎಂಬುದರ ನೆಲೆಗಟ್ಟಿನಲ್ಲಿ ಜಾàರಾತುಗಳನ್ನು ಹಾಕಿ ಅದಕ್ಕೆ ತಕ್ಕಂತೆ ರೆವೆನ್ಯೂ ಹಂಚಿಕೆ ಮಾಡುವ ವಿಧಾನ ಇದೆ. ಇಲ್ಲೂ ಅಷ್ಟೆ. ನಿಮ್ಮ ಪಾಡ್‌ಕಾಸ್ಟನ್ನು ಎಷ್ಟು ಜನ ಆಲಿಸಿದರು ಎಂಬುದರ ಲೆಕ್ಕಾಚಾರದಲ್ಲಿ ಜಾಹೀರಾತುಗಳು ಬರುತ್ತವೆ ಮತ್ತು ಅದರ ಆಧಾರದ ಮೇಲೆ ಪಾಡ್‌ ಕಾಸ್ಟ್‌ ಮಾಡಿದ ವ್ಯಕ್ತಿಗೆ ರೆವಿನ್ಯೂ ಹಂಚಿಕೆಯಾಗುತ್ತದೆ.   ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನಿಮ್ಮ ಪಾಡ್‌ ಕಾಸ್ಟ್‌ ಆಲಿಸುವ ಕೇಳುಗರನ್ನು ಲೆಕ್ಕ ಹಾಕಿ ಒಂದು ಸಾವಿರ ಕೇಳುಗ ಸಂಖ್ಯೆಗೆ 25-40 ಡಾಲರ್‌ ತನಕ ಸಂಭಾವನೆ ಸಿಗುತ್ತದೆ ಎನ್ನಲಾಗಿದೆ.  ಅಂದರೆ ಹೆಚ್ಚು ಕಮ್ಮಿ ಎರಡರಿಂದ ಮೂರು ಸಾವಿರ ರೂ.  ಅದು ವಿಷಯಾಧಾರಿತವಾಗಿರುತ್ತದೆ ಮತ್ತು ಕಾಲಕಾಲಕ್ಕೆ ವ್ಯತ್ಯಾಸವಾಗುತ್ತಾ ಹೋಗಬಹುದು. 

ಇದನ್ನು ಜನಪ್ರಿಯಗೊಳಿಸುವುದು ಹೇಗೆ?
ನಾವು ಯಾವ ಮಾಧ್ಯಮದ ಮೂಲಕ ನಮ್ಮ ಪಾಡ್‌ಕಾಸ್ಟನ್ನು ಸಿದ್ಧಪಡಿಸಿದ್ದೇವೋ ಆ ಹೋಸ್ಟ್‌ ಮೂಲಕವಾಗಿ ಜಾಹೀರಾತುಗಳನ್ನು ಪಡೆಯಬಹುದು. ಇಲ್ಲವೇ ನಾವೇ ನಮ್ಮ ಪರಿಚಿತ ವಲಯದವರಿಗೆ ಜಾಹೀರಾತು ಅವಕಾಶಗಳನ್ನು ಬಿಟ್ಟು ಕೊಡುವ ಮೂಲಕ ಅಥವಾ ನಮ್ಮ ಕೇಳುಗವಲಯದ ಸಂವರ್ಧನೆಯಾದಂತೆ ಹೊಸ ಹೊಸ ಜಾಹೀರಾತುದಾರರು ನಮ್ಮತ್ತ ಬರುವಂತೆ ಮಾಡುವ ಮೂಲಕ ಜನಪ್ರಿಯಗೊಳಿಸಬಹುದು.  ಕೇಳುಗರನ್ನು ನಮ್ಮ ಪಾಡ್‌ಕಾಸ್ಟ್‌ ಆಲಿಸುವಂತೆ ಮಾಡಲು ಯೂಟ್ಯೂಬ್‌ ಮಾಧ್ಯಮವನ್ನು ಬಳಸಿಕೊಳ್ಳಬಹುದು. ಬಂಧು ಮಿತ್ರರಿಗೆ ಕೇಳುವಂತೆ ವಿನಂತಿಸಬಹುದು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬಹುದು, ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಅದು ಎಲ್ಲಡೆ ವೈರಲ್‌ ಆಗುವಂತೆಯೂ ಮಾಡಬಹುದು.  

ನಮ್ಮಲ್ಲಿ ಪಾಡ್‌ ಕಾಸ್ಟ್‌ ಫೀವರ್‌ ಹೇಗಿದೆ?
ಅಂತರ್ಜಾಲದ ಬಳಕೆಯ ವಿಸ್ತರಣೆಯಾದಂತೆಲ್ಲ ಇದು ಕೂಡ ನಮ್ಮ ದೇಶದಲ್ಲಿ ಜನಪ್ರಿಯತೆಯನ್ನು ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ. ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಮಂದಿಯ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಪ್ರಸ್ತುತ 5.60 ಕೋಟಿ ಪಾಡ್‌ ಕಾಸ್ಟ್‌ ಕೇಳುಗರು ನಮ್ಮಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಅದು ಇನ್ನೂ ಹೆಚ್ಚು ಪ್ರವರ್ಧಮಾನಕ್ಕೆ ಬರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಅಮೇರಿಕಾ, ಚೀನಾ, ಕೊರಿಯಾಗಳಲ್ಲಿ  ಪಾಡ್‌ ಕಾಸ್ಟ್‌ ಫೀವರ್‌ ತುಂಬಾ ಹೆಚ್ಚಿದೆ.  ಭಾರತದಲ್ಲಿ ಜನಸಂಖ್ಯೆಯ ಪ್ರಾಬಲ್ಯ ಮತ್ತು ಅಂತಜಾìಲದ ಜನಪ್ರಿಯತೆಯನ್ನು ಮಾನದಂಡವಾಗಿಟ್ಟುಕೊಂಡು ಗಮನಿಸುವುದಾದರೆ ಮುಂಬರುವ ವರುಷಗಳಲ್ಲಿ ಇದು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ.  ಗೂಗಲ್‌ನವರು ಪಾಡ್‌ ಕಾಸ್ಟ್‌ಗೆ ನವೀನ ವೇದಿಕೆಯನ್ನು ಒದಗಿಸಿಕೊಡುವುದರ ಜೊತೆಗೆ ಭಾರತದ ಪ್ರಾಂತೀಯ ಭಾಷೆಗಳಲ್ಲಿ ಪಾಡ್‌ ಕಾಸ್ಟ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ. 

ಏನಿದು ಪಾಡ್‌ಕಾಸ್ಟ್‌ ?
ಅಂತರ್ಜಾಲದ ಮಾಧ್ಯಮದಲ್ಲಿ ಡಿಜಿಟಲ್‌ ಆಡಿಯೋ ಅಥವಾ ವಿಡಿಯೋ ಫೈಲ್‌ಗ‌ಳನ್ನು ಡೌನ್‌ ಲೋಡ್‌ ಮಾಡಿಕೊಂಡು ಅದನ್ನು ಮೊಬೈಲ್‌ ಮೂಲಕವಾಗಿ ಕೇಳಿಸಿಕೊಳ್ಳುವ ಸುಮಧುರ ಶ್ರವಣ ಮಾಧ್ಯಮವೇ ಪಾಡ್‌ಕಾಸ್ಟ್‌. ಇದನ್ನು ನೆಟ್‌ಕಾಸ್ಟ್‌ ಎಂತಲೂ ಕರೆಯಲಾಗುತ್ತದೆ. ಮೊದಲ ಬಾರಿಗೆ ಇದನ್ನು ಬೆನ್‌ ಹ್ಯಾಮ್ಮರ್ಲಿ ಎನ್ನುವವರು 2004ರಲ್ಲಿ ಕಂಡು ಹಿಡಿದರು. ನಂತರ ಪ್ರಾಯೋಗಿಕವಾಗಿ ಜಾರಿಗೆ ತಂದರು. ಬೆನ್‌ ಆಗ ಇದನ್ನು ಐಪ್ಯಾಡ್‌ ಮೂಲಕವಾಗಿ ಪ್ರಯೋಗಕ್ಕೆ ತಂದಿದ್ದ.  ಸಾಮಾನ್ಯವಾಗಿ ಕಿವಿಯಲ್ಲಿ ಕೇಳಿಸಿಕೊಳ್ಳುವ ಶ್ರಾವ್ಯ ಸಂಗತಿಗಳ ಪ್ರಸರಣೆಯನ್ನು ಬ್ರಾಡ್‌ಕಾಸ್ಟಿಂಗ್‌ ಎಂದು ಕರೆಯುತ್ತಾರೆ.  ಐಪ್ಯಾಡಿನ ಪ್ಯಾಡ್‌ ಮತ್ತು ಬ್ರಾಡ್‌ ಕಾಸ್ಟಿಂಗ್‌ನ ಕಾಸ್ಟ್‌ ಇವೆರಡನ್ನೂ ಪೋಣಿಸಿ ಹೊಸತೊಂದು ಸಂವಹನ ಪರಿಭಾಷೆಯಾಗಿ ಪಾಡ್‌ಕಾಸ್ಟ್‌ ಹುಟ್ಟಿಕೊಂಡಿತು. ಇದು ಹೆಸರಿನ ಹಿಂದಿರುವ ಇತಿಹಾಸ. 

ನಾವೇ ಪಾಡ್‌ಕಾಸ್ಟ್‌ ಮಾಡಲು ಏನೇನು ಬೇಕು?
ನಮ್ಮದೇ ಧ್ವನಿಯನ್ನು ಬಳಸಿ ಅದಕ್ಕೊಂದು ಹಿನ್ನೆಲೆ ಸಂಗೀತವನ್ನು ಒದಗಿಸಿ ನಾವೇ ಪಾಡ್‌ಕಾಸ್ಟ್‌ ವಿಡಿಯೋ ಒಂದನ್ನು ಸಿದ್ಧಪಡಿಸಬಹುದು. ಅದಕ್ಕೆ ಅಗತ್ಯವಾಗಿ ಬೇಕಿರುವ ಸಾಮಗ್ರಿಗಳೆಂದರೆ ಒಂದು ಗುಣಮಟ್ಟದ ಮೈಕ್ರೋಫೋನ್‌, ಹೆಡ್‌ ಫೋನ್‌, ಪಾಪ್‌ ಫಿಲ್ಟರ್‌, ಬೂಮ್‌, ಒಂದು ಸ್ಕೈಪ್‌ ಖಾತೆ, ರೆಕಾರ್ಡಿಂಗ್‌ ಮತ್ತು ಎಡಿಟಿಂಗ್‌ ಸಾಫ್ಟ್ವೇರ್ , ಜೊತೆಗೆ ಪಾಡ್‌ ಕಾಸ್ಟ್‌ ಹೋಸ್ಟಿಂಗ್‌ ಅಕೌಂಟ್‌, ಇಷ್ಟಿದ್ದರೆ ನಾವೇ ಒಂದು ಪಾಡ್‌ಕಾಸ್ಟ್‌ ಸಿದ್ಧಪಡಿಸಬಹುದು.  ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಪರಿಚಯವಿರುವ, ನಮ್ಮನ್ನು ಅನುಸರಿಸುವ ಮಂದಿಗೆ ತಲುಪಿಸಬಹುದು.  ಅವರ ಮೂಲಕವಾಗಿ ಇನ್ನಷ್ಟು ಮಂದಿಗೆ ತಲುಪಿ ದೊಡ್ಡಮಟ್ಟದಲ್ಲಿ ಕೇಳುಗವಲಯವನ್ನು ಸಂಪಾದಿಸಲೂಬಹುದು. ಇದು  ಬಹುತೇಕ ಉಚಿತವಾಗಿ ಡೌನ್‌ ಲೋಡ್‌ ಮಾಡುವುದಕ್ಕೆ ಲಭ್ಯರುವಂತಹ ಸಂಗತಿ.  ಇದಕ್ಕೆ ಹೆಚ್ಚಿನ ವೆಚ್ಚವೇನೂ ತಗಲುವುದಿಲ್ಲ.  ಬೇಕೆಂದರೆ ಲೈವ್‌ ಪಾಡ್‌ಕಾಸ್ಟ್‌ ಕೂಡ ಮಾಡಬಹುದು.   

– ನಿರಂಜನ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.