ಅರ್ಹರ ಆಯ್ಕೆಗೆ ಅಹರ್ನಿಶಿ ಆಂದೋಲನ ಅಗತ್ಯ


Team Udayavani, Feb 19, 2018, 8:15 AM IST

b-4.jpg

ರಾಜಕಾರಣ ಅಲ್ಲದ ಸಜ್ಜನರೂ ಸರ್ಕಾರದ ಭಾಗವಾಗಲಿ. ಅವರ ತಿಳಿವಳಿಕೆ ಮತ್ತು ಜ್ಞಾನದ ಸಹಾಯದಿಂದ ಆಡಳಿತ ನಡೆಸಲು ಅನುಕೂಲವಾಗಲಿ ಎಂಬ ಸದಾಶಯದಿಂದ ಮೇಲ್ಮನವಿಗೆ ಕವಿ, ನಾಟಕಕಾರರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈಗ ಅಲ್ಲಿ ಕೂಡ ವಶೀಲಿ, ಜಾತಿ, ಪ್ರಭಾವವೇ ಕೆಲಸ ಮಾಡತೊಡಗಿದೆ. 

ಈ ದೇಶದ ಕಾನೂನುಗಳು ನರಳುತ್ತಿವೆ. ಕಾಯ್ದೆಯ ಅಕ್ಷರಗಳಿಗಿಂತ ಅದನ್ನು ಅರ್ಥೈಸುವ ಮನಸ್ಸುಗಳು ಅದನ್ನು ಅನರ್ಥಗೊಳಿಸಿವೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ಗಳಂಥ ಮೇಲ್ಮನೆಯಲ್ಲಿ ಸರ್ಕಾರಕ್ಕೆ ಸದಸ್ಯರ ನಾಮಕರಣಕ್ಕೆ ಅವಕಾಶ ಇತ್ತಿದ್ದು ರಾಜಕಾರಣಿ ಅಲ್ಲದವರೂ ಕೂಡ ಇಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಅವರ ಕ್ಷೇತ್ರದ ಅನುಭವ ಆಡಳಿತದಲ್ಲಿ ಸಹಾಯವಾಗಬೇಕು ಎಂಬ ಉದ್ದೇಶದಿಂದ. ಆದರೆ ಆಗಿರುವುದೇನು? ಇದು ರಾಜಕಾರಣಿಗಳಿಗೆ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಸುಲಭ ಸೂತ್ರದಾಗಿದೆ ಮತ್ತು ಸಂಧಾನವನ್ನು ತೀರಾ ಗೌರವಿಸುವವರೂ ಕೂಡ ಈ ಸ್ಥಿತ್ಯಂತರವನ್ನು, ಅಧಿಕಾರಸಿಂಧು ಸೂತ್ರವನ್ನು ಒಪ್ಪಿಬಿಟ್ಟಿದ್ದಾರೆ. ನಿಗಮ ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರು, ಶಾಸಕರನ್ನು ನೇಮಿಸುವುದು ನಮಗೆ ಕೂಡ ಸಮ್ಮತ. ಅವರಿಗೆಲ್ಲ ಅವಕಾಶ ಕೊಡಬೇಕಲ್ಲವೇ ಎಂಬ ಸಮಾಜವಾದದ “ಕೋಟಿಂಗ್‌’ ಇರುವ ಸಿದ್ಧ ಹೇಳಿಕೆ ಕೇಳಿಬರುತ್ತಿದೆಯೇ ವಿನಃ, ವ್ಯವಸ್ಥೆಯ ಆಡಳಿತಕ್ಕೆ ಹೆಚ್ಚು ಪೂರಕವಾದ ಆಯ್ಕೆಗಳು ಬೇಕಿತ್ತಲ್ಲವೇ ಎಂಬ ಪ್ರಶ್ನೆಯನ್ನು ಯಾರೂ ಕೇಳುತ್ತಿಲ್ಲ. ಇಂಥದೊಂದು ಚಾಳಿ ಆರಂಭವಾದಾಗಲೇ ಅದರ ವಿರುದ್ಧ ದೊಡ್ಡ ಧ್ವನಿ ಎದ್ದಿದ್ದರೆ ಅಧಿಕಾರಸಿಂಧು ಮಾದರಿ ಹಿಂದೆಸರಿಯುತ್ತಿತ್ತೇನೋ.

ಅಧಿಕಾರ ಸಿಂಧು!
ಅಪಾಯ ಇನ್ನಷ್ಟು ದಟ್ಟವಾಗಿದೆ. ಇಂದು ಗ್ರಾಹಕ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರ ಹೊರತಾದ ಇನ್ನೆರಡು ಆಯ್ಕೆಗಳು ರಾಜಕಾರಣದಿಂದ ಪ್ರೇರಿತವಾದುದು. ಆಯೋಗಗಳ ಸದಸ್ಯರೂ ಇವರೇ, ವಿವಿಧ ಆಯ್ಕೆ ಸಮಿತಿಗೂ ರಾಜಕಾರಣಿಗಳನ್ನೇ ನೇಮಿಸಲಾಗುತ್ತಿದೆ. ಇತ್ತೀಚೆಗಂತೂ ಮಾಹಿತಿ ಆಯೋಗದ ಆಯುಕ್ತರಂಥ ಆರೋಗ್ಯಕರ ಸಮಾಜ ನಿರ್ಮಾಣದ ಪ್ರಮುಖ ಆಯಕಟ್ಟಿನ ಹುದ್ದೆಗೂ ರಾಜಕೀಯ ಪ್ರೇರಿತ ಆಯ್ಕೆಗಳೇ ಆಗುತ್ತಿವೆ ಮತ್ತು ದುರಂತವೆಂದರೆ, ಅದನ್ನು ನಾವು ಕಮಕ್‌ ಕಿಮಕ್‌ ಎನ್ನದೆ ಒಪ್ಪಿಕೊಳ್ಳುತ್ತಿದ್ದೇವೆ.

ಕರ್ನಾಟಕದಲ್ಲೂ ಮೊನ್ನೆ ಮೊನ್ನೆ ಮಾಹಿತಿ ಆಯೋಗದ ಆಯುಕ್ತರ ನೇಮಕ ನಡೆದಿದೆ. ಎಂದಿನಂತೆ ರಾಜಕೀಯ ಪ್ರಭಾವದ ಆಯ್ಕೆಗಳೇ ನಡೆದಿವೆ ಎಂಬ ಆರೋಪಗಳಿವೆ. ಆರಿಸಲ್ಪಟ್ಟ ಆಯುಕ್ತರು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಈ ನಡುವೆ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಅರ್ಹರು ಅರ್ಜಿ ಸಲ್ಲಿಸಿದ್ದರೂ ಅವರನ್ನು ಪರಿಗಣಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ರಮಬದ್ಧವಾಗಿ ಮಾಹಿತಿ ಆಯುಕ್ತರ ನೇಮಕವಾಗಬೇಕು ಎಂಬ ರಿಟ್‌ ಅರ್ಜಿ ರಾಜ್ಯದ ಹೈಕೋರ್ಟ್‌ನ ಮುಂದೆ ಬಂದಿದ್ದು, ಸದ್ಯ ಸರ್ಕಾರಕ್ಕೆ ಈ ಸಂಬಂಧ ನೋಟಿಸ್‌ ಜಾರಿಗೊಳಿಸಲಾಗಿದೆ.

ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ಪ್ರಶಸ್ತಿಯ ಆಕಾಂಕ್ಷಿಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದುಂಟು. ಇಂತಹ ಕ್ರಮಗಳು ಸರ್ಕಾರಗಳನ್ನು ತಪ್ಪು ಹೆಜ್ಜೆ ಇರಿಸುವ ಮುನ್ನ 10 ಬಾರಿ ಯೋಚಿಸುವಂತೆ ಮಾಡುತ್ತವೆ.  ಮಾಹಿತಿ ಆಯುಕ್ತರ ವಿಚಾರದಲ್ಲಂತೂ ಬೇರೆ ರಾಜ್ಯ ಸರ್ಕಾರಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಅನುಭವ ಆಗಿದ್ದೂ ಇದೆ. ಹೈದರಾಬಾದ್‌ನಲ್ಲಿ ಆಯ್ಕೆಯಾದ ಎಂಟು ಜನರಲ್ಲಿ ನಾಲ್ವರು ಮಾಹಿತಿ ಆಯುಕ್ತರ ಆಯ್ಕೆ ಸಮರ್ಪಕವಾಗಿ ಆಗಿಲ್ಲ ಎಂಬ ಎರಡು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ 2013ರಲ್ಲಿ ದಾಖಲಾಗುತ್ತದೆ. ಆಯ್ಕೆ ಸಮಿತಿಯಲ್ಲಿ ಕಾನೂನು ತಜ್ಞರು ಇಲ್ಲದಿರುವುದು. ವಿರೋಧ ಪಕ್ಷದ ನಾಯಕರು ತಾಂತ್ರಿಕ ಅಂಶಗಳನ್ನು ಎತ್ತಿ ಸಲ್ಲಿಸಿರುವ ಆಕ್ಷೇಪಣೆಗೆ ಉತ್ತರ ಕಂಡುಕೊಳ್ಳದೆ ಮತ್ತು ಅವರ ಸಹಿ ಇಲ್ಲದ ಸಭಾ ನಡವಳಿಕೆಗಳನ್ನು ಕಲ್ಯಾಣ ಜ್ಯೋತಿ ಸೇನ್‌ಗುಪ್ತ.  ಕೆ.ಸಿ.ಬಾನು ಅವರಿರುವ ಹೈಕೋರ್ಟ್‌ ಬೆಂಚ್‌ ಹೈದರಾಬಾದ್‌ನ ಕೆ. ಪದ್ಮನಾಭಯ್ಯ ಅವರ ಸಾರ್ವಜನಿಕ ತಾಸಕ್ತಿ ಅರ್ಜಿಯನ್ನು ಎತ್ತಿ ಹಿಡಿಯುತ್ತದೆ. 

ಆಯ್ಕೆಯ ಪ್ರಕ್ರಿಯೆ ಪ್ರಶ್ನಾತೀತವಾಗಿರಲಿ…
ಇಡೀ ಪ್ರಕರಣದಲ್ಲಿ ಇನ್ನಷ್ಟು ಗಮನಿಸಬೇಕಾದ ಅಂಶಗಳಿವೆ. ರಾಜ್ಯ ಸರ್ಕಾರ ತನ್ನ ಆಯ್ಕೆಯ ನಾಲ್ವರನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿದಾಗ ಅವರು ಸಹಿ ಮಾಡಲು ನಿರಾಕರಿಸಿ ಅದನ್ನು ಮಂತ್ರಿಮಂಡಲಕ್ಕೆ ವಾಪಾಸು ಮಾಡಿರುತ್ತಾರೆ. ಆದರೆ ರಾಜ್ಯ ಸರ್ಕಾರ ಯಾವ ಸ್ಪಷ್ಟೀಕರಣವನ್ನೂ ಕೊಡದೆ ಮತ್ತೂಮ್ಮೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದಾಗ ಅವರು ಅನಿವಾರ್ಯವಾಗಿ ಅದಕ್ಕೆ ಸಹಿ ಮಾಡಿರುವುದನ್ನು ನ್ಯಾಯಾಲಯ ಗಮನಿಸುತ್ತದೆ. ಮಾಹಿತಿ ಆಯುಕ್ತರಾಗಿ ಆಯ್ಕೆಯಾದವರಲ್ಲಿ ಒಬ್ಟಾತ ಕಾಂಗ್ರೆಸ್‌ ಪ್ರಮುಖ, ಮೂವರು ಮಂತ್ರಿಗಳ ಶಿಫಾರಸು ಪತ್ರ ಅವರ ಪರ ಕೆಲಸ ಮಾಡಿರುತ್ತದೆ. ಇನ್ನೊಬ್ಬ 2009ರಲ್ಲಿ ಟಿಡಿಪಿ ಟಿಕೆಟ್‌ ಮೇಲೆ ಚಿತ್ತೂರು ಜಿಲ್ಲೆಯ ಪಿಲೆರು ಎಂಬಲ್ಲಿ ಸ್ಪರ್ಧಿಸಿರುತ್ತಾರೆ. ಆ ಸ್ಪರ್ಧೆ ಮುಖ್ಯಮಂತ್ರಿಗಳ ವಿರುದ್ಧ ಎಂಬುದು ಕೊನೆ ಗಳಿಗೆಯಲ್ಲಿ ಅವರಿಬ್ಬರ ನಡುವೆ ಒಳ ಒಪ್ಪಂದ ನಡೆದಿರುವ ಶಂಕೆಯನ್ನು ಹೊರಹಾಕುತ್ತದೆ. ಮತ್ತೋರ್ವ ಕೂಡ ಪ್ರಜಾರಾಜ್ಯ ಪಕ್ಷದ ಅಭ್ಯರ್ಥಿಯಾಗಿ 2009ರ ಚುನಾವಣೆಯಲ್ಲಿಯೇ ಕಣಕ್ಕಿಳಿದಂತಹವನು. ಈ ಮೂವರು ಅಡ್ವೊಕೇಟ್‌ ಆಗಿದ್ದರೂ, ಕಾಯ್ದೆಯ ಸೆಕ್ಷನ್‌ 15(6)ರ ಪ್ರಕಾರ ಅರ್ಜಿ ಸಲ್ಲಿಸಲೇ ಅನರ್ಹರಾಗುತ್ತಾರೆ. ಇಷ್ಟೇ ಅಲ್ಲ, ನ್ಯಾಯಾಲಯ ಇನ್ನಷ್ಟು ದೋಷಗಳನ್ನು ಈ ಆಯ್ಕೆ ಪ್ರಕ್ರಿಯೆಯಲ್ಲಿ ಗಮನಿಸುತ್ತದೆ.

ಕೇಂದ್ರ ಸರ್ಕಾರದ ವಿರುದ್ಧ ವಿನುತ್‌ ಶರ್ಮ ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಆಕ್ಷೇಪಣಾ ಅರ್ಜಿಯಲ್ಲಿ ಇಂತಹ ಪ್ರಕ್ರಿಯೆಗಳನ್ನು ಉಲ್ಲಂ ಸಿದ ಪ್ರಕರಣದಲ್ಲಿ 2012ರ ತೀರ್ಪಿನಲ್ಲಿ ನ್ಯಾಯಾಲಯ ಆಯ್ಕೆಯನ್ನು ಅಸಿಂಧುಗೊಳಿಸಿರುವುದು ಹೆಚ್ಚು ಗಮನಾರ್ಹ. ಈ ನಡುವೆ ನಾಲ್ಕು ವರ್ಷಗಳ ನಂತರ ಹೈಕೋರ್ಟ್‌ ಆದೇಶದ ವಿರುದ್ಧ ತಡೆಯಾಜ್ಞೆ ತಂದಿದ್ದ ನಾಲ್ವರು ಮಾಹಿತಿ ಆಯುಕ್ತರಿಗೆ ಮುಖಭಂಗವಾಗುತ್ತದೆ. ಸುಪ್ರೀಂಕೋರ್ಟ್‌ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿಯುತ್ತದೆ. ಗಮನಿಸಲೇಬೇಕಾದ ಅಂಶವೆಂದರೆ, ಅಂದು ನ್ಯಾಯಾಲಯದಲ್ಲಿ ಪಿಎಲ್‌ಐ ಹಾಕಿದ ಹೈದರಾಬಾದ್‌ನ ಕೆ.ಪದ್ಮನಾಭಯ್ಯ ಅವರಿಗೆ ಅವತ್ತು ಕೇವಲ 74 ವರ್ಷ ಆಗಿತ್ತು!

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ನೂತನ ರಾಜ್ಯ ಮಾಹಿತಿ ಆಯುಕ್ತರಾಗಿ ಎಸ್‌.ಎಲ್‌. ಪಾಟೀಲ್‌, ಎಚ್‌.ಪಿ. ಸುಧಾಮದಾಸ್‌, ಡಾ. ಕೆ.ಇ.ಕುಮಾರಸ್ವಾಮಿ ಹಾಗೂ ಡಾ. ಕೆ. ಲಿಂಗರಾಜು ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಆಯ್ಕೆ ಕುರಿತು ರಾಜ್ಯಪಾಲರು ಜ. 11ರಂದು ಅಧಿಸೂಚನೆ ಹೊರಡಿಸಿದ್ದರು. ಆಯ್ಕೆ ಆದವರು ತಮ್ಮ ಸಾಮರ್ಥ್ಯದ ಬಗ್ಗೆ ಸಮರ್ಥಿಸಿಕೊಳ್ಳಬೇಕು. ಸರ್ಕಾರ ತಾವು ಅರ್ಹರನ್ನು ಆಯ್ಕೆ ಮಾಡಿದ್ದೇವೆ ಎಂಬುದನ್ನು ಪ್ರತಿಪಾದಿಸಬೇಕು. ಆದರೆ ಈಗಾಗಲೇ ಹೈಕೋರ್ಟ್‌, ಸುಪ್ರೀಂಕೋರ್ಟ್‌ ತರಹದ ಉನ್ನತ ವ್ಯವಸ್ಥೆಗಳು ಕೂಡ ಆಯ್ಕೆಗಳು ಪಾರದರ್ಶಕವಾಗಿರಬೇಕು, ನಿಯಮಬದ್ಧವಾಗಿರಬೇಕು ಎಂದು ಸಾರಿ ಸಾರಿ ಹೇಳಿದ್ದರೂ, ಆಡಳಿತ ವ್ಯವಸ್ಥೆ ಅದನ್ನು ಗಾಳಿಗೆ ತೂರುತ್ತಿರುವುದು ಅಕ್ಷಮ್ಯ. ಈ ಪ್ರಕರಣವನ್ನೇ ತೆಗೆದುಕೊಂಡರೆ ಆಕ್ಷೇಪಣೆಯ ನಂತರ ನೋಟೀಸ್‌, ಅದಕ್ಕೆ ಸರ್ಕಾರದ ಉತ್ತರ, ವಿಚಾರಣೆಗಳು ನಡೆಯುತ್ತ ಸಮಯ ಕಳೆದುಹೋಗುತ್ತದೆ. ಆಯುಕ್ತರಾಗಿರುವವರ ಅಧಿಕಾರಕ್ಕೆ ತಡೆ ಬರುವವರೆಗೂ ಕಾರ್ಯನಿರ್ವಹಿಸುತ್ತಾರೆ. ಒಂದೊಮ್ಮೆ ವರ್ಷವೊಪ್ಪತ್ತಿನ ನಂತರ ಆಯ್ಕೆ ಅಸಿಂಧು ಎಂದಾದರೆ ಅವರ ತೀರ್ಪುಗಳ ಗತಿಯೇನು? ಸರ್ಕಾರಗಳು ಇಷ್ಟು ನಿರ್ಲಜ್ಜಗೊಳ್ಳಬಾರದು.

ಆದರ್ಶಗಳು ಬೇರೆಯವರಿಗೆ ಮಾತ್ರ!
ಇಂಥ ಪ್ರಕರಣಗಳು ಇನ್ನೊಂದು ಪಾಠವನ್ನು ಕೂಡ ಕಲಿಸುತ್ತದೆ. ಇತ್ತೀಚೆಗೆ ನಾವು ಸರ್ಕಾರಗಳು, ವ್ಯವಸ್ಥೆಗಳು ಇಷ್ಟೇ ಎಂಬ ಸಿನಿಕ ನಿರಾಶಾವಾದವನ್ನು ವ್ಯಕ್ತಪಡಿಸುತ್ತೇವೆ. 74 ವಯಸ್ಸಿನ  ಹೈದರಾಬಾದ್‌ನ ವೃದ್ಧ, ನೌಕರಿಯಲ್ಲಿದ್ದೂ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಕನ್ನಡನಾಡಿನ ವ್ಯಕ್ತಿಗಳಂಥವರು ನಮಗೆ ಆದರ್ಶರಾಗುತ್ತಿಲ್ಲ ಎಂಬುದು ದುರಂತ. ಇಂತಹ ಘಟನೆಗಳನ್ನು ಉಲ್ಲೇಖೀಸಿದ ಸಂದರ್ಭದಲ್ಲೂ ನಾವು ಉಘೇ ಉಘೇ ಎನ್ನಬಲ್ಲೆವು. ಅವರಂತೆ ನಾವೂ ಏಕಾಗಬಾರದು ಎಂಬ ಸಣ್ಣ ಚಿಂತನೆಯನ್ನೂ ಮಾಡುವುದಿಲ್ಲ. ರಾಜ್ಯ ಸಭೆ, ವಿಧಾನ ಪರಿಷತ್‌ನಿಂದ ಹಿಡಿದು ಸ್ಥಳೀಯ ನಗರಸಭೆಯವರೆಗಿನ ನಾಮಕರಣ ಸದಸ್ಯರ ಆಯ್ಕೆಯಲ್ಲಿ ಲೋಪವಾಗಿದ್ದರೆ ಪ್ರಶ್ನಿಸುವಂತಾಗಬೇಕು. ಕೊನೆಪಕ್ಷ ಇಂತಹದುದರ ನಿರ್ವಹಣೆಗೆ ಸರ್ಕಾರೇತರ ಸಂಸ್ಥೆಗಳನ್ನು ಹುಟ್ಟುಹಾಕಬೇಕಾದ ಕಾಲ ಬಂದಿದೆ. ಏಕೆಂದರೆ, ಅಕ್ಷರಶಃ ಪ್ರಜಾಪ್ರಭುತ್ವ ಅಪಾಯದಲ್ಲಿದೆ.

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.