ಏನ್ ಹುಡ್ಗಾರೋ ಯಾಕಿಂಗ್ ಆಡ್ತಾರೋ…
Team Udayavani, Feb 21, 2017, 3:45 AM IST
ಈ ಹುಡುಗ್ರು ಅಂದ್ರೆ ಹಿಂಗೇನೇ. ಯಾವುದಾದ್ರು ಒಂದು ಹುಡ್ಗಿ ನೋಡೋಕೆ ಸಿಕ್ಕಿದ್ರೆ ಸಾಕು, ಅವರಿಗೆ ಲೈನ್ ಹೊಡೆಯೋದ್ರಲ್ಲಿ ಅವರಿಗೆ ಒಂದು ಥರ ಖುಷಿ ಅನ್ಸುತ್ತೆ. ಕಾಲೇಜು ಲೈಫಲ್ಲಾಂತೂ ಕೇಳ್ಳೋದೇ ಬೇಡ. ಕಾರಿಡಾರ್ನಲ್ಲಿ ನಿಂತು ಇದ್ದ ಹುಡ್ಗಿàರಿಗೆ ಕಮೆಂಟ್ ಮಾಡ್ತಾ- ಏನ್ ಮಚ್ಚಾ! ಸಖತ್ ಆಗಿದ್ದಾಳೆ ಅಲ್ವಾ? ಎಂದು ಹೇಳುತ್ತಾ ಗಮನ ಸೆಳೆಯುತ್ತಾರೆ. ಸ್ವಲ್ವ ದಿನ ಕಳೆದ ನಂತರ ಅವಳ ಹೆಸ್ರು, ನಂಬರ್, ಯಾವ ಕ್ಲಾಸು? ಅಂತೆಲ್ಲಾ ಮಾಹಿತಿಯನ್ನು ಕಲೆ ಹಾಕ್ತಾ ಮಾತುಕತೆ ಆರಂಭಿಸುತ್ತಾರೆ.
ಕೆಲವು ಹುಡುಗರಂತೂ ಕ್ಲಾಸ್ ಇದ್ರೂ ಸಹ ಕ್ಲಾಸಿಗೆ ಬಂಕ್ ಮಾಡಿ ಹುಡ್ಗಿàರ್ ಜೊತೆ ಸುತ್ತಾಡಲು ಕಾಯುತ್ತಿರುತ್ತಾರೆ. ಹಾಗೆಯೇ ಕ್ಲಾಸಲ್ಲಿ ಇದ್ರೂ ಇವ್ರು ಮಾಡೋದ್ ಏನಂದ್ರೆ ಲೆಕ್ಚರರ್ಗಳಿಗೂ ತಮಾಷೆ ಮಾಡ್ತಾ ಸರಿಯಾಗಿ ಪಾಠವನ್ನು ಕೇಳದೆ, ಉಳಿದ ಸ್ಟೂಡೆಂಟುಗಳಿಗೆ ತೊಂದ್ರೆ ಮಾಡ್ತಾ ಇರ್ತಾರೆ. ಎಷ್ಟು ಬೈದರೂ ಕ್ಯಾರೇ ಇಲ್ಲದಂತೆ ತಮ್ಮ ಇಚ್ಚೆಗನುಸಾರವಾಗಿ ನಡೆದುಕೊಳ್ಳುತ್ತಾರೆ. ಈ ಪಡ್ಡೆಗಳು ಕಾಲೇಜು ಲೈಫಲ್ಲಿ ಮಾಡೋ ತಲೆಹರಟೆಗಳು ಊಹಿಸಲಾಗದಷ್ಟು ಸಂಖ್ಯೆಯಲ್ಲಿವೆ.
– ಪಾರಿಜಾತ ಗುರುವಾಯನಕೆರೆ