“ಆ್ಯಪಲ್‌’ನಿಂದ ದೂರವೇ ಉಳಿದು ಬಿಟ್ಟವ!

ವಿಂಡೋ ಸೀಟು

Team Udayavani, May 14, 2019, 6:00 AM IST

ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಮಕ್ಕಳಿಗೆ ಬಹುಮಾನಗಳನ್ನು ಕೊಡುವುದು ರೂಢಿ. ಮುದ್ದಾದ ಕೈ ಬರಹ ಇರುವ ಮಕ್ಕಳನ್ನು, ಹೆಚ್ಚು ಅಂಕ ಪಡೆದವರನ್ನು, ಒಂದು ದಿನವೂ ರಜೆ ಹಾಕದವರನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅದರ ಉದ್ದೇಶ. ಈ ವರ್ಷ ತನಗೆ ಒಂದಾದರೂ ಬಹುಮಾನ ಸಿಗಬೇಕು ಎಂಬುದು ಪ್ರತಿ ವಿದ್ಯಾರ್ಥಿಯ ಕನಸಾಗಿರುತ್ತೆ.

ಇಂಗ್ಲೆಂಡ್‌ನ‌ ಸ್ಯಾಮ್‌ ಸ್ಟನ್ನಾರ್ಡ್‌ಗೂ ಆ ಆಸೆಯಿತ್ತು. ಅವನ ಶಾಲೆಯಲ್ಲಿ, ಶೇ. 100ರಷ್ಟು ಹಾಜರಾತಿ ಇರುವ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷವೂ, “ಆ್ಯಪಲ್‌ ಐ ಪ್ಯಾಡ್‌’ ಅನ್ನು ಬಹುಮಾನವಾಗಿ ನೀಡುತ್ತಿದ್ದರು. ಸತತ ಐದು ವರ್ಷ, ಒಂದು ದಿನವೂ ಶಾಲೆಗೆ ಚಕ್ಕರ್‌ ಹೊಡೆಯದ ಸ್ಯಾಮ್‌ಗೆ ಮಾತ್ರ ಆ್ಯಪಲ್‌ ಐ ಪ್ಯಾಡ್‌ ಸಿಗಲೇ ಇಲ್ಲ.

ಯಾಕಂದ್ರೆ, ಶಾಲೆಯವರು ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತಿದ್ದರು. ದುರಾದೃಷ್ಟಕ್ಕೆ, ಮೊದಲ ನಾಲ್ಕು ವರ್ಷವೂ ಲಕ್ಕಿ ಡ್ರಾನಲ್ಲಿ, ಸ್ಯಾಮ್‌ನ ಹೆಸರು ಇರಲಿಲ್ಲ. ಕೊನೆಯ ವರ್ಷ, ಅವನ ಹೆಸರು ಆಯ್ಕೆಯಾದರೂ, ಶಾಲೆಯವರು ಆ ವರ್ಷ ಬಹುಮಾನವನ್ನೇ ಬದಲಿಸಿಬಿಟ್ಟಿದ್ದರಂತೆ! ಆ ವರ್ಷದ ವಿಜೇತರಿಗೆ ಸಿಕ್ಕಿದ್ದು, ಫೌಂಟನ್‌ ಪೆನ್‌ ಮತ್ತು ಸರ್ಟಿಫಿಕೇಟ್‌ ಮಾತ್ರ.

ಪಾಪ, ಸ್ಯಾಮ್‌ ಐದು ವರ್ಷಗಳಲ್ಲಿ ಒಂದು ದಿನವೂ ರಜೆ ಹಾಕಲಿಲ್ಲ. ಆತನ ಮನೆಯವರೆಲ್ಲ ಆಗಾಗ ಪ್ರವಾಸಕ್ಕೆ ಹೋಗುತ್ತಿದ್ದರು, ಪಾರ್ಟಿ ಮಾಡುತ್ತಿದ್ದರು. ಸ್ಯಾಮ್‌ ಅವನ್ನೆಲ್ಲ ಪಕ್ಕಕ್ಕಿಟ್ಟು ಐ ಪ್ಯಾಡ್‌ ಗೆಲ್ಲುವ ಹಠಕ್ಕೆ ಬಿದ್ದಿದ್ದನಂತೆ. ಪೆನ್ನು ಕೊಡ್ತಾರೆ ಅಂತ ಮೊದಲೇ ಗೊತ್ತಾಗಿದ್ದರೆ, ಈ ವರ್ಷವಾದರೂ ಹೆತ್ತವರ ಜೊತೆ ಟೂರ್‌ ಹೋಗುತ್ತಿದ್ದೆ ಅಂತ ಕೈ ಕೈ ಹಿಸುಕಿಕೊಳ್ತಾನೆ ಸ್ಯಾಮ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ