ಮೂರು ಸೂತ್ರಗಳಾ ಬಾಳು!


Team Udayavani, Feb 28, 2017, 3:45 AM IST

moorui-sutra.jpg

ಹಣ ಮಾಡಬೇಕೋ, ಬದುಕನ್ನು ಅನುಭವಿಸಬೇಕೋ? ಎಂಬುದರ ಕುರಿತು ಮಾತುಗಳು ಏನೇ ಇರಲಿ, ನಮ್ಮ ನಮ್ಮ ಪರಿಸ್ಥಿತಿಗಳಿಗೆ ತಕ್ಕಂತೆ ಸ್ಪಂದಿಸುತ್ತಾ ಹೋಗುವುದೇ ಸರಿ. ಎಂತಹ ಬದುಕಾದರೂ ಈ ಮೂರು ಸೂತ್ರಗಳನ್ನು ಪಾಲಿಸುವುದರಿಂದ ಬದಲಾವಣೆ ಸಾಧ್ಯ.

ಈ ದಿನಗಳಲ್ಲಿ ಯಾರಲ್ಲೂ ಸಮಯವಿಲ್ಲ. ಅದಕ್ಕೆ ಮಿಗಿಲಾಗಿ ಆ ಕಡಿಮೆ ಸಮಯದಲ್ಲೇ ಹೆಚ್ಚು ಹೆಚ್ಚು ಕೆಲಸ, ಜವಾಬ್ದಾರಿಗಳನ್ನು ಮುಗಿಸಿಬಿಡಬೇಕೆಂಬ ಧಾವಂತ ಎಲ್ಲರಲ್ಲೂ. ಬುಧಿœಶಕ್ತಿ- ಕಾರ್ಯಕ್ಷಮತೆಗೆ ಏನೇನೂ ಅವಕಾಶವಿಲ್ಲದ ಕೆಲಸ-ಕಾರ್ಯಗಳು. ಹೀಗಾದರೆ ಇಡೀ ಜೀವನವೇ ತುಕ್ಕು ಹಿಡಿದ ಅನುಭವ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು ಸಹಜವೇ… ಹಣ ಗಳಿಸುವ ಭರಾಟೆಯಲ್ಲಿ ಗಡಿಯಾರ ದೊಂದಿಗೆ ಓಡುವ ಬದುಕನ್ನು ಅಪ್ಪಿಕೊಳ್ಳುವ
ಅನಿವಾರ್ಯತೆ ಎಲ್ಲರಿಗೂ. ಈಗಿನ ಯುವಪೀಳಿಗೆ, ಏನಾದರಾಗಲಿ ತಾರುಣ್ಯವನ್ನು ಹಣಗಳಿಕೆಗೆ ಮೀಸಲಿಟ್ಟು ನಂತರ ರಿಟೈಡ್‌‌ì ಲೈಫ‌ನ್ನು ಎಂಜಾಯ್‌ ಮಾಡಿದರಾಯಿತು ಅಂದುಕೊಳ್ಳುತ್ತಾರೆ. ಆದರೆ ತಾರುಣ್ಯ ಕಳೆದ ಮೇಲೂ ಅವರ ಮನಸ್ಥಿತಿ ಹಾಗಿರುತ್ತದೆಯೇ ಎಂಬುದು ಅನುಮಾನ. ಸ್ಥಿತಿವಂತರಾಗಿದ್ದರೂ, ಎಷ್ಟೇ ಗಳಿಕೆ ಮಾಡಿದ್ದರೂ ಕೂಡ ಅವರ ಮನಸ್ಸಿನಲ್ಲಿ ಏನನ್ನೋ ಕಳೆದುಕೊಂಡ ಭಾವ ಒಂದು ಬಾರಿಯಾದರೂ ಮೂಡದೇ ಇರಲು ಸಾಧ್ಯವಿಲ್ಲ. ಕಡೆಗೆ ತಮ್ಮ ಬದುಕು ಹೇಗಿದ್ದರೂ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.

ಹಣ ಮಾಡಬೇಕೋ, ಬದುಕನ್ನು ಅನುಭವಿಸಬೇಕೋ? ಎಂಬುದರ ಕುರಿತು ದ್ವಂದ್ವ, ತಳಮಳಗಳು ಏನೇ ಇರಲಿ, ನಮ್ಮ ನಮ್ಮ ಪರಿಸ್ಥಿತಿಗಳಿಗೆ ತಕ್ಕಂತೆ ಸ್ಪಂದಿಸುತ್ತಾ ಹೋಗುವುದೇ ಸರಿ. ಪ್ರತಿಯೊಬ್ಬರ ಪರಿಸ್ಥಿತಿ ಬೇರೆ ಬೇರೆ ಇರುವುದರಿಂದ ಒಬ್ಬರನ್ನೊಬ್ಬರು ಹೋಲಿಸಿಕೊಳ್ಳಲು ಹೋಗುವುದು ಸರಿಯಲ್ಲ. ಆದ್ದರಿಂದ ನಮ್ಮದು ಎಂತಹ ಬದುಕಾದರೂ ಈ ಮೂರು ಸೂತ್ರಗಳನ್ನು ಪಾಲಿಸುವುದರಿಂದ ಕಿಂಚಿತ್ತಾದರೂ ಬದಲಾವಣೆ ಸಾಧ್ಯವಿದೆ.

ಸೌಜನ್ಯದಿಂದಲೇ ನಿರಾಕರಿಸಿ

“ಆಗದು- ಇಲ್ಲ- ಸಮಯವಿಲ್ಲ’ ಎನ್ನಲಾಗದೆ ದಾಕ್ಷಿಣ್ಯಕ್ಕೆ ಒಳಪಟ್ಟು, ಮುಜುಗರಕ್ಕೆ ಸಿಲುಕುವ ಪರಿಸ್ಥಿತಿ ಹಲವಾರು ಮಂದಿಯನ್ನು ಕಾಡುವದುಂಟು. ನಿರಾಕರಿಸಿದರೆ ಸಂಬಂಧ-ಸ್ನೇಹಗಳು ಎಲ್ಲಿ ಮುರುಟಿ ಹೋಗುವವೋ ಎಂಬ ಆತಂಕದಲ್ಲಿ ಹೇಳಿದ ಕೆಲಸ ಮಾಡಲಾಗದೆ, ಒತ್ತಡಕ್ಕೆ ಸಿಲುಕಿ ನರಳುವವರಿದ್ದಾರೆ.

ಕಚೇರಿಯಲ್ಲಿ ತಮ್ಮ ಪಾಲಿನ ಕೆಲಸಗಳನ್ನು ಇನ್ನೊಬ್ಬರಿಗೆ ವರ್ಗಾಯಿಸಿ ಹಾಯಾಗಿ ಕುಳಿತಿರುವವರ ಸಂಖ್ಯೆ
ಕಡಿಮೆಯದೇನಲ್ಲ.

ನಿಷ್ಟುರವಾಗಿ ಇಲ್ಲವೆನ್ನಲಾಗದೆ ಒಲ್ಲದ ಹೊರೆಯನ್ನು ಹೆಗಲಿಗೇರಿಸಿಕೊಳ್ಳುವುದಕ್ಕಿಂತ ನಯವಾಗಿ ನಿರಾಕರಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಸೌಜನ್ಯಯುತ ನಿರಾಕರಣೆಯಿಂದ, ಕಾಡುವ ಅಪರಾಧಿ ಪ್ರಜ್ಞೆಯನ್ನು ದೂರವಾಗಿಸಿಕೊಳ್ಳಬೇಕು. ಅನಗತ್ಯ ಕೆಲಸಗಳಲ್ಲಿ ಭಾಗಿಯಾಗುವುದನ್ನು ನಿರಾಕರಿಸಿದರೆ, ಅಗತ್ಯವೆನಿಸುವ ಕೆಲಸಗಳಿಗೆ ಸಮಯ-ಶ್ರಮಗಳನ್ನು ಮೀಸಲಾಗಿಸಿರಬಹುದು.

ಸಂಬಂಧಗಳನ್ನು ಕಡೆಗಣಿಸಿದರಿ

ಈ ದಿನ ನೆಟ್‌ ವರ್ಕ್‌ ಸರಿಯಿರಲಿಲ್ಲ. ಆಗ ಸಿಕ್ಕಿದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿರುವ ಎಲ್ಲ ಸದಸ್ಯರ ಬಳಿಯೂ ಮಾತನಾಡಿದೆ. ನಮ್ಮ ಮನೆಯಲ್ಲಿರುವವರೆಲ್ಲಾ ತುಂಬಾ ಒಳ್ಳೆಯವರು ಎನಿಸಿತು. ಇಂತಹದೊಂದು ಜೋಕ್‌ ಸಾಮಾಜಿಕ ಜಾಲತಾಣವೊಂದರಲ್ಲಿ ಹರಿದು ಬಂದಿತ್ತು. ಈ ಮಾತುಗಳಲ್ಲಿ ಅತಿಶಯೋಕ್ತಿಯೇನಿಲ್ಲ. ಗಡಿಬಿಡಿಯಲ್ಲಿ, ಮೊಬೈಲ್‌ನಲ್ಲಿ ಮಾತನಾಡುತ್ತಾ, ಕಾಟಾಚಾರಕ್ಕೆನ್ನುವಂತೆ ತಿನ್ನುವ ಕೆಲಸ ಮುಗಿಸಿ, ಕಚೇರಿಗೆ ದೌಡಾಯಿಸಿದರೆ, ರಾತ್ರಿಯಾಗುವವರೆಗೂ ಇಹಪರಗಳ ಯೋಚನೆಗಳಿಲ್ಲ. ವಾರದ ರಜಾದಿನಗಳು ಸಹ ಕೆಲಸ ಮಾಡಬೇಕೆಂದು ಕಂಪನಿಗಳು ಬಯಸುವ ಈ ದಿನಗಳಲ್ಲಿ ಸಂಬಂಧಗಳನ್ನು ನಿಭಾಯಿಸಲು ಸಮಯವೆಲ್ಲಿಯದು, ಎಂದು ಗೊಣಗುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಎಷ್ಟೇ ಹಣವಿದ್ದರೂ ಪ್ರೀತಿಸುವ ಹೆಂಡತಿ, ಮುದ್ದಾದ ಮಕ್ಕಳು, ಮಾರ್ಗದರ್ಶಕರಾಗಿ ಹಿರಿಯರು, ಉತ್ತಮ ಗೆಳೆಯರ ಸಹವಾಸಗಳಿದ್ದರೆ ಕ್ಷುಲ್ಲಕ ಚಿಂತೆ-ಆತಂಕಗಳು ಮರೆಯಾಗುತ್ತವೆ.

ನಿಮಗಾಗಿ ಸಮಯವಿರಲಿ

ಬಿರುಸಿನ ಓಟದಲ್ಲಿ ದಣಿವ ಮನಸ್ಸಿಗೆ, ತಂಪು ನೀಡುವ ಹವ್ಯಾಸಗಳನ್ನು ರೂಢಿಸಿಕೊಂಡರೆ, ಬದುಕಿನ ಲಯ ತಪ್ಪದು. ಛಾಯಾಚಿತ್ರಗಳಲ್ಲಿ, ದಿನಚರಿಗಳಲ್ಲಿ ದಾಖಲಾಗಿರಿಸಿದ ಸಂತಸದ ಕ್ಷಣಗಳು, ಸುಮಧುರ ಸಂದರ್ಭಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ಧನಾತ್ಮಕ ಯೋಚನೆಗಳು ಬದುಕನ್ನು ಆವರಿಸಿಕೊಳ್ಳುತ್ತವೆ. ಪ್ರಕೃತಿ ಅತಿ ಸುಂದರವಾಗಿ ಕಾಣುವ ಬೆಳಗಿನ ಸಮಯದಲ್ಲಿ, ಲಘು ವ್ಯಾಯಾಮಗಳೂ ಸಹ ಚೇತೋಹಾರಿ. 

– ಜಯಶ್ರೀ ಕಾಲ್ಕುಂದ್ರಿ

ಟಾಪ್ ನ್ಯೂಸ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.