Udayavni Special

ಮೂರು ಸಾವಿರ ಪತ್ನಿಯರೊಡೆಯನಿಗೆ ಸೀತೆ ಬೇಕಿತ್ತೇ?


Team Udayavani, Dec 10, 2019, 4:18 AM IST

ed-8

ರಾವಣನ ಅಂತಃಪುರದಲ್ಲಿ ಮೂರು ಸಾವಿರ ಸ್ತ್ರೀಯರು ಇದ್ದರು. ಮೂಲ ರಾಮಾಯಣದಲ್ಲಿ ಇವರಲ್ಲಿ ಯಾರನ್ನೂ ಅಪಹರಿಸಿಲ್ಲ, ಅವರೆಲ್ಲ ಒಲಿದುಬಂದವರು ಎಂದು ವರ್ಣಿಸಲಾಗಿದೆ. ಒಬ್ಬರಾದರೆ, ಇಬ್ಬರಾದರೆ, ನೂರು ಮಂದಿಯಾದರೆ, ರಾವಣನಂತಹ ಸಾಮ್ರಾಟನಿಗೆ ಒಲಿದುಬಂದವರು ಎನ್ನಬಹುದಿತ್ತು. ಮೂರು ಸಾವಿರ ಮಂದಿಯನ್ನೂ ಒಲಿದು ಬಂದವರು ಎನ್ನಲು ಸಾಧ್ಯವೇ? ಅಪಹರಣಕ್ಕೊಳಗಾದ ಜಾನಕಿ ಅಶೋಕವನದಲ್ಲಿ ರಾಮನಿಗಾಗಿ ಶೋಕಿಸುತ್ತಿರುವಾಗಲೇ, ಸುಂದರಕಾಂಡದಲ್ಲಿ ಅವರೆಲ್ಲ ಒಲಿದುಬಂದವರು ಎಂಬ ಮಾತು ಕೇಳಿಸುತ್ತದೆ. ಸೀತೆಯೊಬ್ಬಳೇ ಅಪಹರಣಕ್ಕೊಳಗಾದವಳು ಎಂಬ ಧ್ವನಿಯೂ ಇದರ ಹಿಂದಿದೆ. ವಸ್ತುಸ್ಥಿತಿಯಲ್ಲಿ ರಾವಣ ಸೀತೆಯನ್ನು ಅಪಹರಿಸಿದ್ದು, ತನ್ನ ಮಲತಾಯಿಯ ಮಗಳು ಶೂರ್ಪನಖಿಗಾಗಿ (ಮೊರದಂತಹ ಉಗುರುಗಳಿರುವವಳು ಶೂರ್ಪನಖಿ, ಈಕೆಯನ್ನು ಕುವೆಂಪು ತಮ್ಮ ರಾಮಾಯಣ ದರ್ಶನಂನಲ್ಲಿ ಚಂದ್ರನಖಿ ಎಂದು ವರ್ಣಿಸಿದ್ದಾರೆ).

ಶ್ರೀರಾಮನ ಮೇಲೆ ಮೋಹಗೊಂಡ ಶೂರ್ಪನಖಿ, ಜನಸ್ಥಾನದಲ್ಲಿದ್ದ ರಾಮನ ಬಳಿ ತೆರಳಿ, ತನ್ನನ್ನು ಮದುವೆಯಾಗು ಎಂದು ಬೇಡಿಕೆಯಿಡುತ್ತಾಳೆ. ನಾನು ವಿವಾಹಿತ, ನನ್ನ ತಮ್ಮನ ಬಳಿ ಹೋಗು ಎಂದು ರಾಮ ತಪ್ಪಿಸಿಕೊಳ್ಳುತ್ತಾನೆ. ಲಕ್ಷ್ಮಣ, ನಾನೂ ಒಲ್ಲೆ ಎನ್ನುತ್ತಾನೆ. ಆಕೆ ಮತ್ತೆ ರಾಮನ ಬಳಿ ಬರುತ್ತಾಳೆ. ಆಗ ಲಕ್ಷ್ಮಣ ಅವಳ ಮೂಗನ್ನು ಕತ್ತರಿಸಿ ವಿಕಾರಗೊಳಿಸುತ್ತಾನೆ. ಆಕೆ ಸಿಟ್ಟು, ಬೇಸರ, ಹತಾಶೆಯಿಂದ ಪೂತ್ಕರಿಸುತ್ತ ತನ್ನ ಸಹೋದರರಾದ ಖರದೂಷಣರ (ಇವರೂ ರಾವಣನಿಗೆ ಮಲತಾಯಿಯ ಮಕ್ಕಳು) ಬಳಿ ದೂರು ಸಲ್ಲಿಸುತ್ತಾಳೆ. ಅವರೆಲ್ಲ ಒಂದು ದೊಡ್ಡ ದಂಡನ್ನೇ ಕಟ್ಟಿಕೊಂಡು ಬಂದು ರಾಮನ ಮೇಲೆ ದಾಳಿ ಮಾಡುತ್ತಾರೆ. 14 ಕೋಟಿ ರಾಕ್ಷಸರನ್ನು ಏಕಾಂಗಿಯಾಗಿ ರಾಮ ಸಂಹರಿಸುತ್ತಾನೆ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಅಂತಹ ಭೀಕರ ಯುದ್ಧದಲ್ಲಿ ಖರದೂಷಣರು ಮೃತರಾದಾಗ ರಾವಣ ಕೆರಳುತ್ತಾನೆ. ತನ್ನ ಅತ್ಯಾಪ್ತ ಸೋದರರ ಸಾವು, ತಂಗಿಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಅವನು ಸೀತೆಯನ್ನು ಅಪಹರಿಸುತ್ತಾನೆ. ಆಕೆಯ ಅಪಹರಣವನ್ನು ಬಹಳ ಯೋಜಿತವಾಗಿ, ಶಿಸ್ತುಬದ್ಧವಾಗಿ ಮಾರೀಚನ ಸಹಾಯದಿಂದ ರಾವಣ ಮಾಡಿ ಮುಗಿಸುತ್ತಾನೆ. ಅವನ ಉದ್ದೇಶ ರಾಮನ ಮೇಲೆ ಸೇಡು ತೀರಿಸಿಕೊಳ್ಳುವುದು, ಅವನನ್ನು ಅವಮಾನಿಸುವುದು. ಸೀತೆಯನ್ನು ಅಪಹರಿಸಿದ ನಂತರ ರಾವಣನ ಯೋಚನೆ ಬದಲಾಗುತ್ತದೆ. ಅವಳ ಸೌಂದರ್ಯ ನೋಡಿ ಮಾರುಹೋದ ಅವನು, ಅವಳನ್ನು ತನ್ನ ಪತ್ನಿಯಾಗಿ ಹೊಂದಲು ಬಯಸುತ್ತಾನೆ. ಬೇರೊಬ್ಬನ ಪತ್ನಿಯನ್ನು ಬಲಾತ್ಕಾರವಾಗಿ ಅಪಹರಿಸಿ ತನ್ನ ಪತ್ನಿಯಾಗಿ ಮಾಡಿಕೊಳ್ಳಲು ಬಯಸಿದ ರಾವಣ, ಆಕೆಯನ್ನು ಸತತವಾಗಿ ಅನುನಯಿಸುತ್ತಲೇ ಹೋಗುತ್ತಾನೆ. ಎಲ್ಲಿಯೂ ಬಲಾತ್ಕರಿಸುವುದಿಲ್ಲ. ಇದಕ್ಕೆ ಕಾರಣ ತಲೆ ಸಿಡಿದು ಹೋಳಾಗುವ ಶಾಪದ ಭೀತಿ. ಸೀತೆ ಇನ್ನೊಂದು ಕಡೆ ಶಪಥ ಮಾಡಿರುತ್ತಾಳೆ. ಇನ್ನೊಂದು ವರ್ಷದೊಳಗೆ ಶ್ರೀರಾಮ ಬಂದು ತನ್ನನ್ನು ಕರೆದುಕೊಂಡು ಹೋಗದಿದ್ದರೆ, ತಾನು ಪ್ರಾಯೋಪವೇಶ (ಉಪವಾಸ ಮಾಡಿ ಮಾಡಿಯೇ ಸಾಯುವುದು) ಮಾಡಿ ಸಾಯುತ್ತೇನೆ ಎನ್ನುವುದು ಅವಳ ಪ್ರತಿಜ್ಞೆ. ಅಚ್ಚರಿಯೆಂದರೆ ಅಷ್ಟರೊಳಗೆ ರಾಮಬಂದು ಆಕೆಯನ್ನು ಬಿಡಿಸಿಕೊಳ್ಳುತ್ತಾನೆ. ಆಗ ಸರಿಯಾಗಿ ಒಂದುವರ್ಷ ಮುಗಿದಿರುತ್ತದೆ.

ಸೇಡಿಗೆ ಅಪಹರಿಸಿ ನಂತರ, ಸೀತೆಯನ್ನು ಮದುವೆಯಾಗಲು ಬಯಸಿದ ರಾವಣ, ಉಳಿದ 3000 ಪತ್ನಿಯರನ್ನು ಅಪಹರಿಸಿಲ್ಲ ಎಂದರೆ ನಂಬಲು ಸಾಧ್ಯವೇ? ಅಷ್ಟಕ್ಕೂ ಇಷ್ಟು ಹೆಂಡತಿಯರು ಯಾಕೆ ಬೇಕು? ಇವೆಲ್ಲ ಒಂದು ಶೋಕಿಯಲ್ಲವೇ? ಅವರಾಗಿಯೇ ಒಲಿದು ಬಂದರೂ ಎಂದಿಟ್ಟುಕೊಂಡರೂ, ಅವರನ್ನೆಲ್ಲ ಇಟ್ಟುಕೊಂಡು ಏನು ಮಾಡಬೇಕೆಂಬ ವಿವೇಚನೆ ಆತನಿಗಿರಲಿಲ್ಲವೇ? ರಂಭೆಯನ್ನು ಅತ್ಯಾಚಾರ ಮಾಡಿದ ಆ ವ್ಯಕ್ತಿಯ ಚಾರಿತ್ರ್ಯವನ್ನು ನಂಬಲು ಸಾಧ್ಯವೇ? ತನ್ನ ಹಿತಕ್ಕಾಗಿ, ತನ್ನ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಮಾತನಾಡುವ, ಬದಲಾಗುವ ರಾವಣ ಒಬ್ಬ ಸ್ತ್ರೀಲಂಪಟ. ಅವನ ಅತಿದೊಡ್ಡ ದೌರ್ಬಲ್ಯವೂ ಹೌದು. ಅವನ ನಾಶಕ್ಕೆ ಕಾರಣವಾದ ಸತ್ಯವೂ ಹೌದು.

-ನಿರೂಪ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

duty episode

ಮೊದಲ ದಿನದ ಡ್ಯೂಟಿ ಪ್ರಸಂಗ

kot taraha

ಕೈ ಬರಹ ಕೋಟಿ ತರಹ…

lov adjust

ಕೊಂಚ ಹೆಚ್ಚೆನಿಸಿದರೆ ಅಡ್ಜೆಸ್ಟ್‌ ಮಾಡ್ಕೋ…

lati-hidi

ಲಾಠಿ ಹಿಡಿವ ಬದಲು ಬೆತ್ತ ಹಿಡಿದೆ..!

shale-jail

ಶಾಲೆಯೆಂದರೆ ಅದೊಂದು ಜೈಲು ಅನಿಸುತ್ತಿತ್ತು!

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

ಗ್ರೀನ್ ಜೋನ್ ಶೃಂಗೇರಿಗೂ ಕೋವಿಡ್-19 ಸೋಂಕಿನ ಕಾಟ

ಗ್ರೀನ್ ಜೋನ್ ಶೃಂಗೇರಿಗೂ ಕೋವಿಡ್-19 ಸೋಂಕಿನ ಕಾಟ

28-May-14

ಕೋವಿಡ್ ಸೋಂಕಿತರ ಹಾಸ್ಟೇಲ್‌ ಚಿಕಿತ್ಸೆಗೆ ವಿರೋಧ

28-May-13

ಅಭಿವೃದ್ಧಿ-ಕೃಷಿ ಚಟುವಟಿಕೆ ನಿರಂತರವಾಗಿರಲಿ

ದಕ್ಷಿಣಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ದಕ್ಷಿಣ ಕನ್ನಡದಲ್ಲಿ 6 ಹೊಸ ಕೋವಿಡ್ ಪ್ರಕರಣ ಪತ್ತೆ !

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

ಚಿತ್ರದುರ್ಗಕ್ಕೆ ಆಘಾತ ನೀಡಿದ ಉತ್ತರ ಪ್ರದೇಶದ ಕಾರ್ಮಿಕರ ಲಾರಿ! ಆರು ಜನರಿಗೆ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.