ಥರ್ಟಿ ಪಿಕ್ಚರ್‌


Team Udayavani, Oct 23, 2018, 6:00 AM IST

4.jpg

ಮೂವತ್ತು ದಾಟುತ್ತಲೇ ಮಕ್ಕಳು ಅಂಕಲ್‌ ಎನ್ನುತ್ತಾರೆ ಎಂದು ಧೈರ್ಯಗೆಡಬೇಕಿಲ್ಲ. ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾತಿ ಹಾಕುವ ವಯಸ್ಸೆಂದು ಗಾಬರಿಯಾಗಲೂ ಬೇಕಿಲ್ಲ. ಬದುಕು ನಮ್ಮನ್ನು ಪರೀಕ್ಷಿಸುವುದೇ ಮೂವತ್ತರ ಹೊಸ್ತಿಲಲ್ಲಿ. ಈ ಪರೀಕ್ಷೆಯಲ್ಲಿ ಫೇಲಾಗುವುದು, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗುವುದು ನಮಗೇ ಬಿಟ್ಟಿದ್ದು. ಆದರೆ ವಯಸ್ಸು ಮೂವತ್ತಾಗುವುದಕ್ಕೆ ಮುಂಚೆ ಮುಗಿಸಬೇಕಾದ ಹಲವು ಜವಾಬ್ದಾರಿಗಳಿವೆ. ಅದರ ಬಗೆಗಿನ ಸ್ಪಷ್ಟ ಚಿತ್ರಣವನ್ನು ಲೇಖಕರಿಲ್ಲಿ ನೀಡಿದ್ದಾರೆ.

ವಯಸ್ಸು ಮೂವತ್ತರ ಹತ್ತಿರ ಬರುತ್ತಿದ್ದಂತೆಯೇ ಆತಂಕವೊಂದು ಮನೆ ಮಾಡುತ್ತದೆ. ಮೂವತ್ತನ್ನು ಇಳಿ ವಯಸ್ಸಿನ ಕಡೆ ನಮ್ಮನ್ನು ಕೈಹಿಡಿದು ನಡೆಸುವ ವಯಸ್ಸೆಂದೇ  ಅನೇಕರು ತಿಳಿದಿರುವುದೇ ಅದಕ್ಕೆ ಕಾರಣ. ಆದರೆ ಒಂದು ವಿಷಯ ಗೊತ್ತಾ? ಬ್ರಿಟನ್‌ನಲ್ಲಿ ಕೆಲ ವರ್ಷಗಳ ಹಿಂದೆ ಈ ವಿಷಯವಾಗಿಯೇ ಸಮೀಕ್ಷೆ ಮಾಡಿದ್ದರು. ಎಲ್ಲಾ ವಯೋಮಾನದ ಸಾವಿರಾರು ಮಂದಿಯ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಯಾವ ವಯಸ್ಸಿನಲ್ಲಿ ನಿಮ್ಮ ಬದುಕು ಸಂತಸಕರದಿಂದ ಕೂಡಿತ್ತು ಎಂಬ ಪ್ರಶ್ನೆಯನ್ನು ಅವರೆಲ್ಲರಿಗೂ ಕೇಳಲಾಗಿತ್ತು. ಆಗ ತಿಳಿದು ಬಂದಿದ್ದು ಬಹುತೇಕರು ಖುಷಿಯಿಂದಿದ್ದು ಮೂವತ್ತರಲ್ಲಿದ್ದಾಗ ಎಂಬ ವಿಚಾರ. ಅನೇಕರಿಗೆ ಮೂವತ್ತರ ವಯಸ್ಸಿನಲ್ಲಿಯೇ ಬದುಕಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿತ್ತು. ಇದರಿಂದ ಎರಡು ವಿಚಾರಗಳನ್ನು ತಿಳಿದುಕೊಳ್ಳಬಹುದು. ಮೂವತ್ತು, ಜೀವನದ ಸಂತಸದ ಕ್ಷಣಗಳನ್ನು ಹುದುಗಿಸಿಕೊಂಡಿದೆ ಎನ್ನುವುದು ಒಂದು ವಿಚಾರವಾದರೆ, ಅವಕಾಶಗಳಿಗೆ ಬಾಗಿಲು ಆಗಲೂ ತೆರೆದಿರುತ್ತದೆ ಎನ್ನುವುದು ಎರಡನೇ ವಿಚಾರ. ಆದರೆ ವಯಸ್ಸು ಮೂವತ್ತಾಗುವುದಕ್ಕೆ ಮುಂಚೆ ಮುಗಿಸಬೇಕಾದ ಹಲವು ಜವಾಬ್ದಾರಿಗಳಿವೆ.

1) ಓದು, ಕೆಲಸ ಮತ್ತು ಕನಸು
ಓದು ಪದವಿಗಳು ಬದುಕಲ್ಲದಿದ್ದರೂ, ಶಿಕ್ಷಣ ಬದುಕಿಗೆ ಅಗತ್ಯವಾಗಿ ಬೇಕು. ಓದಿನಿಂದ ಕನಸಿನ ಕೆಲಸವನ್ನು ದಕ್ಕಿಸಿಕೊಳ್ಳಬಹುದು. ಅವೆಲ್ಲವೂ ಮೂವತ್ತರೊಳಗೆ ಮುಗಿದು ಹೋದರೆ ಚೆನ್ನ. ನಂತರ ಬೇರೆಯ ಗುರಿಗಳತ್ತ ಗಮನ ಹರಿಸಬಹುದು. ಶಿಕ್ಷಣಕ್ಕಾಗಿ ಜೀವನದಲ್ಲಿ ಹದಿನೆಂಟರಿಂದ ಮೂವತ್ತು ಬಂಗಾರದಂತಹ ಅವಧಿ. ಮೂವತ್ತರ ನಂತರ ಏನೂ ಸಾಧ್ಯವಾಗುವುದಿಲ್ಲವಾ? ಅಂತ ಕೇಳಬಹುದು, ಮೂವತ್ತರ ನಂತರ ಮಾಡಲು ಬೇರೆಯದೇ ಕೆಲಸಗಳಿರುತ್ತವೆ.

2) ಆರ್ಥಿಕ ಭದ್ರತೆ
ಮೂವತ್ತು ಮುಟ್ಟಿದರೂ ಮನೆಯವರನ್ನು ಅವಲಂಬಿಸುವ ಹಾಗಾಗಬಾರದು. ಒಂದು ವೇಳೆ ಅಂಥ ಸಂದರ್ಭ ಬಂದರೂ ಅದಕ್ಕೆ ಸಿದ್ಧರಾಗಿರಬೇಕು. ಅಷ್ಟರೊಳಗೆ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳಬೇಕು! ಸ್ಕಾಲರ್‌ಶಿಪ್ಪಿನಿಂದಲೋ, ಪಾರ್ಟ್‌ಟೈಮ್‌ ಕೆಲಸದ ಮೂಲಕವೋ ನಮ್ಮ ಹಣದ ಅಗತ್ಯವನ್ನು ನೀಗಿಸಿಕೊಳ್ಳಲು ದಾರಿ ಮಾಡಿಕೊಂಡಿರಬೇಕು. ಆಗ ಮನೆಯವರಿಗೂ ಹೆಮ್ಮೆ.  

3) ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
ಈ ಹೊತ್ತಿನಲ್ಲಿ ಆರೋಗ್ಯದ ಕಡೆ ಗಮನ ಹರಿಸಬೇಕಾದದ್ದು ಅತ್ಯಗತ್ಯ. ಏಕೆಂದರೆ ಈ ಸಮಯದಲ್ಲಿ ನಿರ್ಲಕ್ಷಿಸಿದರೆ ಮುಂಬಿದ ಭವಿಷ್ಯಕ್ಕೆ ತೊಂದರೆಯಾದೀತು. ಪದೇ ಪದೋ ಆರೋಗ್ಯ ಕೈಕೊಡಬಹುದು. ಆಗ ಎಷ್ಟು ಒಳ್ಳೆಯ ಕೆಲಸವಿದ್ದರೂ, ಆರ್ಥಿಕವಾಗಿ ಸದೃಢರಾಗಿದ್ದರೂ ಆ ಸುಖವನ್ನು ಅನುಭವಿಸಲು ನೆಮ್ಮದಿ ಇರದು. ಹೀಗಾಗಿ ಆರೋಗ್ಯವೂ ಐಶ್ವರ್ಯವೇ ಎಂಬುದನ್ನು ಮನಗಾಣಬೇಕು. 

4) ಸುಂದರ ಜೀವನ ಶೈಲಿ ರೂಪಿಸಿಕೊಳ್ಳಬೇಕು
ಈ ವಯಸ್ಸಿನಲ್ಲಿ ರೂಪಿಸಿಕೊಳ್ಳುವ ಜೀವನಶೈಲಿಯೇ ಜೀವನ ಪರ್ಯಂತ ನಮ್ಮ ಜೊತೆ ಇರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ನಮ್ಮ ಅಭ್ಯಾಸಗಳನ್ನು ಆರಿಸಿಕೊಳ್ಳಬೇಕು. ಚಿಕ್ಕಂದಿನಲ್ಲಿ, ಮನೆಯಲ್ಲಿ, ಶಾಲೆಯಲ್ಲಿ ಕಲಿತ ಪಾಠಗಳನ್ನು ಅಪ್ಲೆ„ ಮಾಡಬೇಕಾದ ಸಂದರ್ಭ ಎದುರಾಗುವುದೇ ಈ ಹಂತದಲ್ಲಿ. ಮೂಲಭೂತವಾದ ವಿಚಾರಗಳಿವು. ಆದರೆ ಅವುಗಳ ಪರಿಣಾಮ ಮಾತ್ರ ಗಾಢವಾದುದು. ಶಿಸ್ತು, ತಾಳ್ಮೆ, ಶ್ರದ್ಧೆ, ಆತ್ಮವಿಶ್ವಾಸಗಳಂಥ ಗುಣಗಳು ಬೇಕಾಗಿರುವುದೇ ಈ ಸಂದರ್ಭದಲ್ಲಿ.

ಖ್ಯಾತ ಮನೋವಿಜ್ಞಾನಿ ಹೇಳಿದ ಮಾತಿದು- “ಮೂವತ್ತರ ಬಳಿಕ ಬದುಕು ಸಿಮೆಂಟ್‌ ಇದ್ದ ಹಾಗೆ. 30ನೇ ವಯಸ್ಸಿನಲ್ಲಿ ಕಲ್ಲುಗಳನ್ನು ಪೇರಿಸಿ ಸಿಮೆಂಟ್‌ನಿಂದ ಮುಚ್ಚಿಬಿಡಬೇಕು. ಏನೇ ಕಟ್ಟುವುದಿದ್ದರೂ, ಪ್ಲ್ರಾನ್‌ ಮಾಡುವುದಿದ್ದರೂ ಸಿಮೆಂಟ್‌ ಹಾಕುವ ಮುನ್ನವೇ ಮಾಡಾಬಿಡಬೇಕು. ಏಕೆಂದರೆ ಸಿಮೆಂಟ್‌ ಗಟ್ಟಿಯಾದ ಮೇಲೆ ಯಾವ ಬದಲಾವಣೆಯನ್ನೂ ಮಾಡಲಾಗದು. ಸರಿಯಾಗಲಿಲ್ಲವೆಂದು ಒಡೆದು ಮತ್ತೆ ಕಟ್ಟಲು ಬದುಕು ಗೋಡೆಯಲ್ಲವಲ್ಲ!’

 ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

Railway ಮೂರು ವಿಭಾಗದ ರೈಲ್ವೇ ಅಧಿಕಾರಿಗಳ ಸಮಿತಿ ರಚನೆಗೆ ಸೋಮಣ್ಣ ಸೂಚನೆ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Jaiswal

T20 Batting Ranking: ಮೂರಕ್ಕೇರಿದ ಯಶಸ್ವಿ ಜೈಸ್ವಾಲ್‌

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

Railway ಮೂರು ವಿಭಾಗದ ರೈಲ್ವೇ ಅಧಿಕಾರಿಗಳ ಸಮಿತಿ ರಚನೆಗೆ ಸೋಮಣ್ಣ ಸೂಚನೆ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.