ಬೀದಿ ಗುಡಿಸಿದ ಐಷಾರಾಮಿ ಕಾರು


Team Udayavani, Feb 14, 2019, 12:30 AM IST

f-2.jpg

ಸ್ವಾತಂತ್ರ್ಯಕ್ಕೂ ಹಿಂದೆ ನಡೆಯಿತು ಎನ್ನಲಾದ ಘಟನೆಯಿದು. ಭಾರತದ ಮಹಾರಾಜನೊಬ್ಬ ಕಾರ್ಯನಿಮಿತ್ತ ಲಂಡನ್‌ಗೆ ಭೇಟಿದ. ಅವರಿಗೆ ಲಂಡನ್‌ನ ಬೀದಿಗಳನ್ನು ಸುತ್ತುವ ಮನಸ್ಸಾಯಿತು. ಅಧಿಕಾರಿಗಳನ್ನು ಬಿಟ್ಟು ತಾವೊಬ್ಬರೇ ನಗರ ಸಂಚಾರಕ್ಕೆ ಹೊರಟರು. ದಾರಿಯಲ್ಲಿ ಕಾರು ಶೋರೂಮ್‌ ಒಂದು ಅವರ ಗಮನ ಸಳೆಯಿತು. ಮೊದಲೇ ಮಹಾರಾಜರಿಗೆ ಐಷಾರಾಮಿ ಕಾರುಗಳ ಶೋಕಿ ಇತ್ತು. ಅವರು ಕಾತರರಾಗಿ ಕಾರಿನ ಬಗ್ಗೆ ವಿಚಾರಿಸಲು ಒಳಕ್ಕೆ ತೆರಳಿದರು. ಅದು ಪ್ರಸಿದ್ಧ ರೋಲ್‌ರಾಯ್ಸ ಮಳಿಗೆಯಾಗಿತ್ತು. ಭಾರತೀಯನೊಬ್ಬ ಒಳಪ್ರವೇಶಿಸಿದ್ದನ್ನು ಕಂಡ ಸೇಲ್ಸ್‌ಮನ್‌ಗೆ ಅವರು ಮಹಾರಾಜರೆಂದು ತಿಳಿಯಲಿಲ್ಲ. ಇವರೂ ಹೇಳಲಿಲ್ಲ. ಭಾರತೀಯರೆಂದರೆ ಅಸಡ್ಡೆ ತೋರುತ್ತಿದ್ದ ಸೇಲ್ಸ್‌ಮನ್‌ಗೆ ಭಾರತೀಯನೊಬ್ಬ ಒಳಪ್ರವೇಶಿಸಿದ್ದು ಸರಿಕಾಣಲಿಲ್ಲ. ಜಗತ್ತಿನ ಉತ್ಕೃಷ್ಟವಾದ ಕಾರನ್ನು ಭಾರತೀಯ ಕೊಳ್ಳಲಾರ ಎನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಆತ ಮಹಾರಾಜರನ್ನು ಕೀಳಾಗಿ ಕಂಡ. ಕುಪಿತರಾದ ಮಹಾರಾಜರು ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ವಾಪಸ್ಸಾದರು. ಅಧಿಕಾರಿಗಳನ್ನು ಕರೆದು ಮಹಾರಾಜರು ಬರುತ್ತಿರುವುದಾಗಿ ಶೋರೂಮಿನವರಿಗೆ ಸುದ್ದಿ ಮುಟ್ಟಿಸಲು ತಿಳಿಸಿದರು. ಈ ಬಾರಿ ಮಹಾರಾಜರನ್ನು ವೈಭವಯುತವಾಗಿ ಸ್ವಾಗತಿಸಲಾಯಿತು. ಮಳಿಗೆಯ ಮಾಲೀಕ  ಖುದ್ದು ಮಹಾರಾಜರನ್ನು ಬರಮಾಡಿಕೊಂಡ. ಆತಿಥ್ಯ ಸ್ವೀಕರಿಸಿದ ಮಹಾರಾಜರು ತಮಗಾದ ಅವಮಾನದ ಕುರಿತು ಬಾಯಿಬಿಡಲಿಲ್ಲ. ಆ ದಿನ ಒಂದಲ್ಲ, ಎರಡಲ್ಲ, ಆರು ಕಾರುಗಳನ್ನು ಭಾರತಕ್ಕೆ ಕೊಂಡು ತಂದರು. ಭಾರತಕ್ಕೆ ವಾಪಸ್ಸಾದವರೇ ಮಹಾರಾಜರು ಕಾರುಗಳನ್ನು ನಗರ ಸ್ವಚ್ಛಗೊಳಿಸುವ ಕೆಲಸಕ್ಕೆ ಹಚ್ಚಿದರು. ಅಷ್ಟೇ ಸಾಕಾಯಿತು. ಜಗತ್ಪ್ರಸಿದ್ಧ ಐಷಾರಾಮಿ ಕಾರು ಭಾರತದ ಬೀದಿಗಳಲ್ಲಿ ಕಸ ಗುಡಿಸಲು ಬಳಕೆಯಾಗುತ್ತಿದೆ ಎನ್ನುವ ಸುದ್ದಿ ಜಗತ್ತಿನಾದ್ಯಂತ ಹರಡಿತು. ಕಂಪನಿಯ ಹೆಸರಿಗೆ ಇದರಿಂದ ಕುಂದುಂಟಾಯಿತು. ಪರಿಣಾಮವಾಗಿ ಆ ಕಂಪನಿಯ ಕಾರನ್ನು ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತು. ಕೂಡಲೆ ಎಚ್ಚೆತ್ತ ಸಂಸ್ಥೆಯ ಸಿಬ್ಬಂದಿ ವರ್ಗ ನಡೆದ ಘಟನೆಯೆಲ್ಲವನ್ನೂ ತಿಳಿದುಕೊಂಡು ಮಹಾರಾಜರಿಗೆ ಕ್ಷಮಾಪಣಾ ಪತ್ರ ಬರೆದರು. ತಮ್ಮ ಸಂಸ್ಥೆಯ ಕಾರನ್ನು ಮುನಿಸಿಪಾಲಿಟಿ ವಾಹನವನ್ನಾಗಿ ಬಳಸದಂತೆ ಮನವಿ ಮಾಡಿದರು. ಅಲ್ಲದೆ ರೋಲ್ಸ್‌ರಾಯ್ಸ ಸಂಸ್ಥೆ , ತಮ್ಮಿಂದಾದ ಪ್ರಮಾದಕ್ಕೆ ಪ್ರಾಯಶ್ಚಿತವಾಗಿ ಮಹಾರಾಜರಿಗೆ ಆರು ಕಾರುಗಳನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿತು. ಈ ಮಹಾರಾಜ ಯಾರೆಂಬುದರ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಈ ಘಟನೆಯ ಕುರಿತು ಚರ್ಚೆಗಳು ಇನ್ನೂ ನಡೆದೇ ಇದೆ.

ಹವನ

ಟಾಪ್ ನ್ಯೂಸ್

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.