ಬ್ಯಾಂಡ್‌ ಏಡ್‌ ಹುಟ್ಟಿದ್ದು ಹೇಗೆ?

ಗಾಯಕ್ಕೆ ಕ್ಷಣದಲ್ಲಿ ಮದ್ದು!

Team Udayavani, Nov 7, 2019, 3:35 AM IST

ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡ ಸಂದರ್ಭದಲ್ಲಿ ಆ ಕ್ಷಣಕ್ಕೆ ನಮಗೆಲ್ಲರಿಗೂ ಬೇಕಾಗುವ ವಸ್ತು “ಬ್ಯಾಂಡ್‌ ಏಡ್‌’. ಅದು ರೂಪ ತಳೆದ ಕಥೆ ಇಲ್ಲಿದೆ.

ಬ್ಯಾಂಡ್‌ ಏಡ್‌ ಆವಿಷ್ಕಾರವಾಗುವುದಕ್ಕೆ ಮುಂಚೆ ಜನರು ಹತ್ತಿಯ ಉಂಡೆಯನ್ನು ಗಾಯದ ಮೇಲಿಟ್ಟು ಅದರ ಸುತ್ತ ಬಟ್ಟೆ ಕಟ್ಟುತ್ತಿದ್ದರು. ಅದಕ್ಕೂ ಮುಂಚೆ ಎಲೆ ಮುಂತಾದ ಪ್ರಾಕೃತಿಕ ವಸ್ತುಗಳನ್ನೇ ಬಳಸಿ ಗಾಯದ ಮೇಲೆ ಹಚ್ಚುತ್ತಿದ್ದರು. ಇವ್ಯಾವುವೂ ಸುರಕ್ಷಿತ ವಿಧಾನ ಆಗಿರಲಿಲ್ಲ. ಅದರಿಂದ ಹುಣ್ಣಾಗುವ ಸಾಧ್ಯತೆ ಇದ್ದವು. ಈ ಕಾರಣಕ್ಕೇ ಬ್ಯಾಂಡ್‌ ಏಡ್‌ ಸಂಶೋಧನೆಯಾಗಿದ್ದು.

ಪತ್ನಿಯೇ ಸ್ಫೂರ್ತಿ
ಬ್ಯಾಂಡ್‌ ಏಡ್‌ಅನ್ನು ಆವಿಷ್ಕರಿಸಿದ್ದು ಅರ್ಲ್ ಡಿಕ್ಸನ್‌ ಎಂಬ ವ್ಯಕ್ತಿ. ಆತ 1920ರ ಸಮಯದಲ್ಲಿ ಕಾರ್ಖಾನೆಯೊಂದರಲ್ಲಿ ನೌಕರನಾಗಿದ್ದ. ಆತನ ಪತ್ನಿ ಅಪಘಾತಕ್ಕೀಡಾದಾಗ ಆಕೆಯ ಕೈಬೆರಳುಗಳು ಜಖಂಗೊಂಡಿದ್ದವು. ಎರಡು ಮೂರು ದಿನಗಳಿಗೆ ಒಮ್ಮೆಯಾದರೂ ಗಾಯದ ಸುತ್ತ ಸುತ್ತಿದ್ದ ಬಟ್ಟೆಯನ್ನು ಬದಲಿಸಬೇಕಿತ್ತು. ಅಲ್ಲದೆ ಆತ ನ ಪತ್ವಿ ಆಗಾಗ್ಗೆ ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವಾಗ ಗಾಯ ಮಾಡಿಕೊಳ್ಳುತ್ತಿದ್ದಳು. ಪದೇಪದೆ ಗಾಯದ ಸುತ್ತ ಬಟ್ಟೆ ಬದಲಿಸುವುದೇ ಕೆಲಸವಾದಾಗ ಅರ್ಲ್, ರೋಸಿ ಹೋಗಿದ್ದ.

ಮೊದಲ ಬ್ಯಾಂಡ್‌ ಏಡ್‌
ಅದಕ್ಕಾಗಿ ಆತ ಒಂದು ಪರಿಹಾರವನ್ನು ಕಂಡುಕೊಂಡ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸಲ್ಪಡುತ್ತಿದ್ದ ಟೇಪ್‌ ರೋಲನ್ನು ಕೈಗೆತ್ತಿಕೊಂಡು ಅದರ ಮೇಲೆ ಔಷಧಿ ಲೇಪಿಸಿದ. ಅದರ ಮೇಲೆ ತೆಳುವಾದ ಬಟ್ಟೆಯನ್ನು ಹೊದಿಸಿ ಕವರ್‌ ಮಾಡಿದ. ಈಗ ಬೇಕೆಂದಾಗ ಟೇಪ್‌ ರೋಲನ್ನು ತನಗೆ ಬೇಕಾದಷ್ಟು ಮಾತ್ರವೇ ಕಟ್‌ ಮಾಡಿಕೊಂಡು ಗಾಯದ ಮೇಲೆ ಕಟ್ಟಬಹುದಿತ್ತು. ಇದು ಜಗತ್ತಿನ ಮೊದಲ ಬ್ಯಾಂಡ್‌ ಏಡ್‌!

ಬದಲಾಯ್ತು ಸ್ವರೂಪ
ಜಗತ್ತಿನ ಮೊದಲ ಬ್ಯಾಂಡ್‌ ಏಡ್‌ ಮಾರುಕಟ್ಟೆಗೆ ಬಂದಿದ್ದು 1921ರಲ್ಲಿ. ಖಾಸಗಿ ಸಂಸ್ಥೆ ಜಾನ್ಸನ್‌ ಅಂಡ್ ಜಾನ್ಸನ್‌ ಅದರ ಮೂಲ ಸ್ವರೂಪವನ್ನು ಬದಲಿಸಿ ಮೇಲಿಂದ ಮೇಲೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿತು. ಬ್ಯಾಂಡ್‌ ಏಡ್‌ ಮೇಲೆ ಗಾಳಿಯಾಡಲು ಚಿಕ್ಕ ಚಿಕ್ಕ ರಂಧ್ರಗಳು, ಔಷಧ ಪಟ್ಟಿ ಇವೆಲ್ಲವೂ ಆನಂತರದ ಸುಧಾರಣೆಗಳು.

ಹಿತ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅದು ಪರಿಶುದ್ಧವಾದ ಕೊಳ. ಬಣ್ಣ ಬಣ್ಣದ ನೂರಾರು ಮೀನುಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆನಂದದಿಂದಿದ್ದವು. ಇದೇ ಕೊಳದಲ್ಲಿ ಒಂದು ಚಿಕ್ಕ ಮೀನು ತನ್ನ...

  • ನಮಗೆ ನಿದ್ರೆ ಕಾರಣ ಎಡೆನೋಸಿಸ್‌. ಇದು ಹೆಚ್ಚಾದಷ್ಟು ನಿದ್ರೆ ಹೆಚ್ಚು, ಕಡಿಮೆ ಆದಷ್ಟು ನಿದ್ರೆ ಇಳಿಯುತ್ತದೆ. ರಾತ್ರಿ ಹೊತ್ತು ಇದು ದೇಹದಲ್ಲಿ ತುಂಬಿ ತುಳಕುವುದರಿಂದ...

  • ಚೀಟಿ ತೆರೆಯದೆಯೇ ಅದರೊಳಗೇನಿದೆ ಎನ್ನುವುದನ್ನು ಹೇಳುವ ಮ್ಯಾಜಿಕ್‌ ಇದು. ಪ್ರದರ್ಶನ: ಸಭೆಯಲ್ಲಿ ಹತ್ತು ಮಂದಿ ಪ್ರೇಕ್ಷಕರಿಗೆ ಒಂದೊಂದು ಚೀಟಿ ಮತ್ತು ಒಂದೊಂದು...

  • ಆನಂದನಿಗೆ ಮೂಗಿನ ತುದಿಯಲ್ಲೇ ಕೋಪ. ಅಮ್ಮ ಅಡುಗೆ ಮಾಡುವುದು ತಡವಾಯಿತೆಂದು ಅಮ್ಮನ ಜೊತೆ ಠೂ ಬಿಟ್ಟ. ಮುಂದೇನಾಯ್ತು? ಒಂದೂರಿನಲ್ಲಿ ಚಿಕ್ಕ ಮನೆಯಿತ್ತು. ಅಲ್ಲಿ...

  • ಪ್ರತಿ ವರ್ಷ ಮೇ 10ರಂದು ತಾಯಂದಿರ ದಿನವೆಂದು ಆಚರಿಸಲಾಗುತ್ತದೆ. ಆ ಪರಿಪಾಠವನ್ನು ಶುರುಮಾಡಿದ್ದು ಆ್ಯನ್ನಾ ಜಾರ್ವಿಸ್‌ ಎಂಬ ಮಹಿಳೆ. ಅಮೆರಿಕ ಪ್ರಜೆಯಾದ ಆ್ಯನ್ನಾ...

ಹೊಸ ಸೇರ್ಪಡೆ