ಯಾವ ಕೀಲಿ, ಯಾವ ಜಾದೂ 


Team Udayavani, May 3, 2018, 11:26 AM IST

1000.jpg

ಕೀಲಿ ಕೈಯನ್ನು ಯಾವುದಕ್ಕೆ ಬಳಸುತ್ತಾರೆ? ಅಯ್ಯೋ ಅಷ್ಟೂ ಗೊತ್ತಿಲ್ವಾ, ಬೀಗ ತೆರೆಯೋಕೆ ಅಂದಿರಾ? ಈ ಪ್ರಶ್ನೆ ಕೇಳಿದ್ದು ಯಾಕೆ ಅಂದರೆ ಅದೇ ಕೀಲಿ ಕೈಯನ್ನು ಬಳಸಿ ಮಾಯಾಲೋಕದ ಬೀಗವನ್ನು ತೆಗೆಯಬಹುದು. ಕೀಲಿಯಿಂದ ಜಾದೂ ಮಾಡಿ ಮಾಯಾವಿ ಅನ್ನಿಸಿಕೊಳ್ಳಲು ಸ್ವಲ್ಪ ದುಡ್ಡು ಖರ್ಚಾಗುತ್ತದೆ. ಎಷ್ಟು ಗೊತ್ತಾ? ಒಂದು ರೂಪಾಯಿ! ಯಾವ ಕೀಲಿ, ಯಾವ ಜಾದೂ ಅಂತ ತಿಳಿಯಲು ಮುಂದೆ ಓದಿ.

ಬೇಕಾಗುವ ವಸ್ತುಗಳು: ಕೀಲಿ ಕೈ, ನಾಣ್ಯ
ಪ್ರದರ್ಶನ: ಜಾದೂಗಾರನ ಅಂಗೈಯಲ್ಲಿ ಒಂದು ನಾಣ್ಯವಿರುತ್ತದೆ. ಆತ ಮುಷ್ಟಿಯನ್ನು ಒಂದು ಬಾರಿ ಮುಚ್ಚಿ, ಕೈಯನ್ನು ಎರಡು ಬಾರಿ ಆಚೀಚೆ ಆಡಿಸುತ್ತಾನೆ. ನಂತರ ನಿಧಾನಕ್ಕೆ ಮುಷ್ಟಿ ತೆಗೆದಾಗ ಒಳಗೆ ನಾಣ್ಯದ ಬದಲು ಒಂದು ಕೀಲಿ ಕೈ ಇರುತ್ತದೆ.

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನಾಣ್ಯ ಮತ್ತು ಅದನ್ನು ಹಿಡಿದುಕೊಳ್ಳುವ ರೀತಿಯಲ್ಲಿ. ಇಲ್ಲಿರುವ ಗಮ್ಮತ್ತೇನು ಗೊತ್ತಾ? ನಾಣ್ಯವನ್ನು, ಕೀಲಿ ಕೈಯ ತಲೆಯ ಭಾಗಕ್ಕೆ ಅಯಸ್ಕಾಂತ ಅಥವಾ ಗಮ್‌ನ ಸಹಾಯದಿಂದ ಅಂಟಿಸಬೇಕು. ಎರಡೂ ಬೇರೆ ಬೇರೆಯಾಗಿರದೆ ಒಂದಕ್ಕೊಂದು ಅಂಟಿಕೊಂಡಿರಬೇಕು. ಅದಕ್ಕಾಗಿ ನೀವು ತೆಗೆದುಕೊಳ್ಳುವ ನಾಣ್ಯದ ಅಗಲ ಮತ್ತು ಕೀಲಿ ಕೈಯ ಅಗಲ ಒಂದೇ ಆಗಿರಬೇಕು (25 ಪೈಸೆ, 50 ಪೈಸೆ ಅಥವಾ ಹೊಸ 1 ರೂ. ನಾಣ್ಯಗಳನ್ನು ಬಳಸಬಹುದು) ನಾಣ್ಯವನ್ನು ಪ್ರೇಕ್ಷಕರಿಗೆ ತೋರಿಸುವಾಗ ಒಂದು ಟ್ರಿಕ್‌ ಉಪಯೋಗಿಸಬೇಕು. ಅದೇನೆಂದರೆ, ಕೀಲಿ ಕೈಗೆ ನಾಣ್ಯವನ್ನು ಅಂಟಿಸಿದ ಮೇಲೆ ಅದನ್ನು ಬಲಗೈ ಮೇಲೆ ಇರಿಸಿ, ಕೀಲಿಯ ಉದ್ದದ ಭಾಗ ಕಾಣಿಸದಂತೆ ಎಡಗೈಯ ತೋರುಬೆರಳಿನಿಂದ ಅದನ್ನು ಮುಚ್ಚಿ (ಚಿತ್ರದಲ್ಲಿ ತೋರಿಸುವಂತೆ) ಆಗ ನಾಣ್ಯ ಮಾತ್ರ ಕಾಣಿಸುತ್ತದೆ. ಮುಷ್ಟಿಯನ್ನು ಮುಚ್ಚಿ, ಕೈಯನ್ನು ಆಚೀಚೆ ಅಲ್ಲಾಡಿಸುತ್ತಾ ನಿಧಾನವಾಗಿ ಮುಷ್ಟಿಯೊಳಗೇ ನಾಣ್ಯದ ಮಗ್ಗಲು ಮಡಚಿ. ಮುಷ್ಟಿ ಬಿಡಿಸಿದಾಗ ನಾಣ್ಯ ಕಾಣಿಸುವುದಿಲ್ಲ. ಬದಲಿಗೆ ಕೀಲಿ ಕೈ ಅಲ್ಲಿರುತ್ತದೆ. ಪ್ರದರ್ಶನಕ್ಕೂ ಮೊದಲು ಹಲವಾರು ಬಾರಿ ಅಭ್ಯಾಸ ಮಾಡಿದರೆ ಈ ಮ್ಯಾಜಿಕ್‌ ಸುಲಭವಾಗುವುದು.  

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.