ಹೊಸ ಮೈಲುಗಲ್ಲು ನೆಟ್ಟ ಜೂಲನ್‌


Team Udayavani, Feb 24, 2018, 10:18 AM IST

222.jpg

ವಯಸ್ಸು 35. ಈ ವಯಸ್ಸಿನಲ್ಲೂ ಫಿಟ್ನೆಸ್‌ ಕಾಯ್ದುಕೊಂಡಿರುವ ಆಟಗಾರ್ತಿ. ಈಗಲೂ ಕಿರಿಯ ಆಟಗಾರ್ತಿಯರು ನಾಚುವಂತೆ ವೇಗವಾಗಿ ಬೌಲಿಂಗ್‌ ಮಾಡುವ ಸಮರ್ಥ ಬೌಲರ್‌. ಈಗ ಆಕೆ ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಒಡತಿ.

ಯಾವುದೇ ಕ್ರೀಡಾ ಕ್ಷೇತ್ರ ಇರಬಹುದು ಒಂದು ನಿವೃತ್ತಿಗೆ ವಯಸ್ಸು ಇರುತ್ತದೆ. ಅಬ್ಟಾಬ್ಬ! ಅಂದರೆ ಸುಮಾರು 30ರಿಂದ 35 ವರ್ಷದೊಳಗೆ ಯಾವುದೇ ಆಟಗಾರ ತನ್ನ ಆಟಕ್ಕೆ ದೇಹ ಸ್ಪಂದಿಸುತ್ತಿಲ್ಲ. ತನ್ನ ಪ್ರದರ್ಶನ ಕಳಪೆಯಾಗುತ್ತಿದೆ ಎಂದು ನಿವೃತ್ತಿ ಘೋಷಿಸುತ್ತಾರೆ. ಆದರೆ, ಭಾರತ ಮಹಿಳಾ ಕ್ರಿಕೆಟ್‌ ತಂಡ ಹಿರಿಯ ಆಟಗಾರ್ತಿ ಜೂಲನ್‌ ಗೋಸ್ವಾಮಿ ಅದಕ್ಕೆ ವಿರುದ್ಧವಾಗಿದ್ದಾರೆ ಎಂದರೆ ತಪ್ಪಲ್ಲ. ವಯಸ್ಸು 35 ಆದರೂ ಆಟ ಮುಪ್ಪಾಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅದಕ್ಕೆ ಉದಾಹರಣೆ ಇತ್ತೀಚಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್‌ ಕಬಳಿಸುವ ಮೂಲಕ ವಿಶ್ವ ದಾಖಲೆ ಮಾಡಿ ಮೆರೆದಿದ್ದಾರೆ. ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಪಶ್ಚಿಮ ಬಂಗಾಳದ ಮೂಲದ ಜೂಲನ್‌ ಗೋಸ್ವಾಮಿ ಸಾಧನೆ ಸಾಮಾನ್ಯವಾದುದ್ದಲ್ಲ. 

2002ರಲ್ಲಿ ಇಂಗ್ಲೆಂಡ್‌ ವಿರುದ್ಧ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ ಲೋಕಕ್ಕೆ ಪದಾರ್ಪಣೆ ಮಾಡಿ ಸುಮಾರು 16 ವರ್ಷಗಳ ಸುದೀರ್ಘ‌ ಕ್ರಿಕೆಟ್‌ ಪಯಣದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮಹಿಳಾ ಕ್ರಿಕೆಟ್‌ ಜಗತ್ತಿನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. 166 ಏಕದಿನ ಪಂದ್ಯಗಳನ್ನು ಆಡಿರುವ “ಬಂಗಾಳ ಎಕ್ಸ್‌ಪ್ರೆಸ್‌’ ಗೋಸ್ವಾಮಿ 200 ವಿಕೆಟ್‌ಗಳನ್ನು ತನ್ನ ತೆಕ್ಕೆ ಹಾಕಿಕೊಳ್ಳುವ ಮೂಲಕ 11 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಕ್ಯಾಥರಿನ್‌ ಫಿಟ್‌ ಪ್ಯಾಟ್ರಿಕ್‌(180 ವಿಕೆಟ್‌) ಹೆಸರಲಿದ್ದ ಅತಿ ಹೆಚ್ಚು ವಿಕೆಟ್‌ ಗಳಿಸಿದ್ದ ದಾಖಲೆ ಅಳಿಸಿ ಬಹು ದೂರ ಸಾಗಿದ್ದಾರೆ. 10 ಟೆಸ್ಟ್‌ನಲ್ಲಿ 40 ಹಾಗೂ 60 ಟಿ-20 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಪತನಗೊಳಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ ಪಂದ್ಯಗಳಲ್ಲಿ 5 ವಿಕೆಟ್‌ ಗೊಂಚಲು ಪಡೆದು ಸಾಧನೆ ಮಾಡಿದ್ದಾರೆ.

ವಿಶ್ವದ 2ನೇ ವೇಗದ ಮಹಿಳಾ ಬೌಲರ್‌

ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಕ್ಯಾಥರಿನ್‌ ಫಿಟ್‌ ಪ್ಯಾಟ್ರಿಕ್‌ ವಿಶ್ವದ ಅತಿ ವೇಗದ ಮಹಿಳಾ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ನಿವೃತ್ತಿಯಾದ ನಂತರ ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ಅವರ ಜಾಗವನ್ನು ತುಂಬಿದ್ದವರೇ ಭಾರತದ ಬಂಗಾಳ ಎಕ್ಸ್‌ಪ್ರೆಸ್‌ ಜೂಲನ್‌. ಎದುರಾಳಿ ಆಟಗಾರ್ತಿಯರ ಎದೆಯಲ್ಲಿ ನಡುಕು ಹುಟ್ಟಿಸಿದ್ದಾರೆ. ಪುರುಷ ಬೌಲರ್‌ಗಳೇ ಇವರ ವೇಗವನ್ನು ನೋಡಿ ದಂಗಾಗಿದ್ದಾರೆ. ಸುಮಾರು 120 ಸರಾಸರಿ ವೇಗದಲ್ಲಿ ಬಾಲ್‌ ಎಸೆಯುವ ಗೋಸ್ವಾಮಿ ಮಹಿಳಾ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ವಿಶ್ವ ಮಹಿಳಾ ಬೌಲಿಂಗ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ ಭಾರತೀಯ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದ ಛಲಗಾತಿ
ಭಾರತ ಮಹಿಳಾ ತಂಡದ ಮಾಜಿ ನಾಯಕಿ ಜೂಲನ್‌ ಗೋಸ್ವಾಮಿ ಪಶ್ಚಿಮ ಬಂಗಾಳ ನಾಡಿಯಾ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ 1982ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ ಕಡೆ ಆಕರ್ಷಿತರಾದ ಜೂಲನ್‌ ಮನೆಯ ಸಮೀಪದಲ್ಲಿ ಗಂಡು ಮಕ್ಕಳೊಂದಿಗೆ ಕ್ರಿಕೆಟ್‌ ಆಡಲು ಆರಂಭಿಸಿದ್ದರು. ಪ್ರಾರಂಭದಲ್ಲಿ ಮುಜುಗರ ಅನುಭವಿಸಿದರು. ಆದರೆ, ಕ್ರಿಕೆಟ್‌ ಮೇಲಿನ ಪ್ರೀತಿ ಮಾತ್ರ ಕಡಿಮೆ ಆಗಲಿಲ್ಲ. ತಾನು ಕ್ರಿಕೆಟ್‌ನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬೆಳೆಯಿತು. ಎಷ್ಟೇ ಆದರೂ ಪುರುಷರು ಆಡುವ ಆಟ ಎಂದೇ ಅನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಆದ್ಯತೆ ಕಡಿಮೆ. ಅದನ್ನು ಲೆಕ್ಕಿಸದೇ ತನ್ನ ಜೀವನವನ್ನು ಕ್ರಿಕೆಟ್‌ನಲ್ಲಿ ಕಂಡುಕೊಳ್ಳಬೇಕೆಂಬ ಹಟಕ್ಕೆ ಬಿದ್ದ ಜೂಲನ್‌ ಕೊನೆಗೂ ಕ್ರಿಕೆಟ್‌ ಅಭ್ಯಾಸ ಮಾಡಲು ತನ್ನ ತಂದೆ-ತಾಯಿಯ ಪ್ರೋತ್ಸಾಹದಿಂದ ಕೋಲ್ಕತ್ತಕ್ಕೆ ಹೊರಟು ನಿಂತರು.

ಪ್ರತಿ ದಿನ ಕೋಲ್ಕತ್ತದಿಂದ ರೈಲಿನಲ್ಲಿ ಪ್ರಯಾಣ ಮಾಡಿ ತರಬೇತಿ ಪಡೆಯುತ್ತಿದ್ದರು. ಕೊನೆಗೂ ಶ್ರಮಕ್ಕೆ ಫ‌ಲ ಫ‌ಲಿಸಿ 2002ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲದೆ, ತಂಡದಲ್ಲಿ ಇದ್ದ ವೇಗದ ಬೌಲರ್‌ ಕೊರತೆ ನೀಗಿಸಿದರು. ಬ್ಯಾಟಿಂಗ್‌ನಲ್ಲಿ ಇತರೆ ಆಟಗಾರ್ತಿಯರು ಕೈಕೊಟ್ಟರೂ ತಾನೊಬ್ಬ ಆಲ್‌ರೌಂಡರ್‌ ಎನ್ನುವುದನ್ನು ಕೆಲವು ಸಲ ಸಾಬೀತು ಮಾಡಿ ತೋರಿಸಿದ್ದಾರೆ. ತಂಡದ ಆಧಾರ ಸ್ತಂಭವಾಗಿ, ವೇಗದ ಬೌಲಿಂಗ್‌ ಸಾರಥಿಯಾಗಿ, ತಂಡವನ್ನು ಮುನ್ನಡಿಸಿದ ಓರ್ವ ಸಮರ್ಥ ನಾಯಕಿಯಾಗಿ, ಕಿರಿಯರ ಆಟಗಾರ್ತಿಯರ ಪಾಲಿಗೆ ಮಾರ್ಗದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ.

ಈಗಾಗಲೇ ಹಲವು ಪ್ರಶಸ್ತಿಗೆ ಕೊರಳೊಡ್ಡಿರುವ ಜೂಲನ್‌ ಗೋಸ್ವಾಮಿ 2007ರಲ್ಲಿ ಐಸಿಸಿ ವರ್ಷದ ಆಟಗಾರ್ತಿ, ಭಾರತದ ನಾಲ್ಕನೇ ಪುರಸ್ಕಾರ ಪದ್ಮಶ್ರೀ ಹಾಗೂ ಅರ್ಜುನ್‌ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಪಾತ್ರರಾಗಿರುವ ಜೂಲನ್‌ ಗೋಸ್ವಾಮಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸೋಣ.

ದೇವಲಾಪುರ ಮಹದೇವಸ್ವಾಮಿ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.