ನೈವೇದ್ಯ ವೈವಿಧ್ಯ;ಅವರವರ ಭಾವಕ್ಕೆ, ಅವರವರ ಭಕುತಿಗೆ…

Team Udayavani, Sep 15, 2018, 4:03 PM IST

ದೇವರ ಮುಂದೆ ನೈವೇದ್ಯ ಇಡಲೂ ಒಂದು ಕ್ರಮವಿದೆ. ಸಾಮಾನ್ಯವಾಗಿ ಸ್ವತ್ಛಗೊಳಿಸಿದ ಬಾಳೆ ಎಲೆಯ ಮೇಲೆ ನೈವೇದ್ಯ ಬಡಿಸುತ್ತಾರೆ. ಅದಕ್ಕೂ ಮುನ್ನ ನೆಲದ ಮೇಲೆ ಸೆಗಣಿ ನೀರು ಚುಮುಕಿಸಿ ಸ್ವಚ್ಛಗೊಳಿಸುತ್ತಾರೆ. ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲೇ ನೀರು ಸಿಂಪಡಿಸಬೇಕು. ಇನ್ನು ಕೆಲವರು ನೈವೇದ್ಯವಿಡುವ ಸ್ಥಳದಲ್ಲಿ ರಂಗೋಲಿಯನ್ನೂ ಹಾಕುವುದುಂಟು. ನೈವೇದ್ಯದ ಮೇಲೆ ತುಳಸಿ ದಳವೊಂದನ್ನು ಹಾಕಿ ದೇವರಿಗೆ ಸಮರ್ಪಿಸುತ್ತಾರೆ.

ಹಿಂದಿನವರಿಗಾದರೆ ಯಾವ ದೇವರಿಗೆ ಯಾವ ನೈವೇದ್ಯ ಮಾಡಬೇಕು ಎಂಬುದು ಗೊತ್ತಿತ್ತು, ನಮಗೇನೂ ಗೊತ್ತಿಲ್ಲವಲ್ಲ ಎಂದೀಗ ಸಬೂಬು ಹೇಳುವಂತೆಯೂ ಇಲ್ಲ, ಏಕೆಂದರೆ, ಯಾವ ದೇವರಿಗೆ ಯಾವ ನೈವೇದ್ಯ ಇಷ್ಟ ಎಂಬುದನ್ನು ಇಲ್ಲಿ ಕಾರಣದೊಂದಿಗೆ ವಿವರಿಸಲಾಗಿದೆ.

ಹಾಗಿದ್ದರೆ ತಡ ಯಾಕೆ? ನಿಮ್ಮ ಇಷ್ಟ ದೇವರ ನೈವೇದ್ಯ ತಯಾರಿಸಿ, ದೇವರ ಮುಂದಿಟ್ಟು ಆತನ ಕೃಪೆಗೆ ಪಾತ್ರರಾಗಿ! ಸರಳವಾಗಿ ತಯಾರಿಸಬಹುದಾದ ಒಂದಷ್ಟು ನೈವೇದ್ಯದ ವಿಧಾನಗಳು ಇಲ್ಲಿವೆ. ಅದೇ ನೈವೇದ್ಯ ಯಾಕೆ ಎಂಬ ಪ್ರಶ್ನೆಗೆ ಸಕಾರಣವಾದ ಉತ್ತರಗಳು ನಿಮಗಿಲ್ಲಿ ಸಿಗುತ್ತವೆ. 

ಮೀರಾಬಾಯಿ, ಶ್ರೀಕೃಷ್ಣನ ಭಕ್ತೆ. ಈಕೆ ಸಂಸಾರದ ಗೋಜಲುಗಳಿಂದ ದೂರವಾಗಿ ಭಕ್ತಿಯನ್ನೇ ಬದುಕಾಗಿಸಿಕೊಂಡಾಕೆ. ಇದನ್ನು ಸಹಿಸದ ಮೀರಾಳ ಭಾವ, ರಾಣಾ, ವಿಷದ ಪಾತ್ರೆಯನ್ನು ಆಕೆಯ ಕೈಗಿತ್ತು ಇದೇ ಅಮೃತವೆಂದು ಹೇಳಿ ಸೇವಿಸಲು ಕೊಟ್ಟ. ಮೀರಾಬಾಯಿ ತಾನು ತಿನ್ನುವ ಮೊದಲು ಎಲ್ಲವನ್ನೂ ಶ್ರೀ ಕೃಷ್ಣನಿಗೆ ಸಮರ್ಪಿಸುತ್ತಿದ್ದಳು. ಅದರಂತೆ ಈ ವಿಷವನ್ನೂ ಅರ್ಪಿಸಿದಳು. ಭಕ್ತಿಯಿಂದ ನಿವೇದಿಸಿದ ಕಾರಣ ವಿಷವೂ ಅಮೃತವಾಯಿತು. ಆಕೆಯ ಪ್ರಾಣಕ್ಕೇನೂ ಅಪಾಯವಾಗಲಿಲ್ಲ. ವಿಷ  ಆಕೆಗೆ ಕೊಟ್ಟ ಧೂರ್ತರು, ಮೂಗಿನ ಮೇಲೆ ಬೆರಳಿಟ್ಟು ಕೊಂಡರು!

ನೈವೇದ್ಯಕ್ಕಿರುವ ಶಕ್ತಿ ಅದು. ನಾವು ತಿನ್ನುವ ಆಹಾರ ದೇವರಿಗೆ ಅರ್ಪಿತಗೊಂಡ ಬಳಿಕ ಅದು ಪ್ರಸಾದವಾಗುತ್ತದೆ. ಅದರ ಮೇಲೊಂದು ತುಳಸಿ ಎಲೆ ಬಿದ್ದರೆ ಅದರ ರಜತಮಕಣಗಳ ಆವರಣ ಕಡಿಮೆಯಾಗುತ್ತದೆ. ಆಹಾರದಲ್ಲಿರುವ ಕೆಟ್ಟ ಅಂಶಗಳೆಲ್ಲ ಕಳೆದುಹೋಗಿ ಸೇವನೆಗೆ ಆರ್ಹವಾಗುತ್ತದೆ. ಹೀಗೆ ಅರ್ಪಣೆಗೊಂಡ ಪ್ರಸಾದದ ಸೇವನೆಯಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.

ನೈವೇದ್ಯ ಸಮರ್ಪಣೆ ಎಂಬುದು ಹಿಂದೂ ಧರ್ಮೀಯರ ಪೂಜೆಯ ಒಂದು ಭಾಗ. ಶೋಡಶೋಪಚಾರಗಳಲ್ಲಿ ಇದೂ ಒಂದು. ಮೂಲತಃ ನೈವೇದ್ಯ ಎಂಬುದು ಸಂಸ್ಕೃತ ಪದ. ಇದರ ಅರ್ಥ,ದೈನ್ಯದ ಬೇಡಿಕೆ ಅಥವಾ ನಿವೇದನೆ. ಅಚಾರ ಹಾಗೂ ಪ್ರಾರ್ಥನೆಯ ಮೂಲಕ ದೇವರಿಗೆ ಮಾಡುವ ನಿವೇದನೆ ಅಥವಾ ಅರ್ಪಣೆಯೇ ನೈವೇದ್ಯವಾಗುತ್ತದೆ. ಹೀಗೆ ಅರ್ಪಿಸುವ ನೇವೇದ್ಯದ ತಯಾರಿಕೆಯ ವೇಳೆಯಲ್ಲಿ ಅದರ ರುಚಿ ನೋಡುವಂತಿಲ್ಲ. ದೇವರ ಮುಂದಿಟ್ಟು ಅರ್ಚಿಸಿದ ಬಳಿಕವೇ ಅದು ಸೇವನೆಗೆ ಯೋಗ್ಯ.

ದೇವರ ಮುಂದೆ ನೈವೇದ್ಯ ಇಡಲೂ ಒಂದು ಕ್ರಮವಿದೆ. ಸಾಮಾನ್ಯವಾಗಿ ಸ್ವತ್ಛಗೊಳಿಸಿದ ಬಾಳೆ ಎಲೆಯ ಮೇಲೆ ನೈವೇದ್ಯ ಬಡಿಸುತ್ತಾರೆ. ಅದಕ್ಕೂ ಮುನ್ನ ನೆಲದ ಮೇಲೆ ಸೆಗಣಿ ನೀರು ಚುಮುಕಿಸಿ ಸcತ್ಛಗೊಳಿಸುತ್ತಾರೆ. ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲೇ ನೀರು ಸಿಂಪಡಿಸಬೇಕು. ಇನ್ನು ಕೆಲವರು ನೈವೇದ್ಯವಿಡುವ ಸ್ಥಳದಲ್ಲಿ ರಂಗೋಲಿಯನ್ನೂ ಹಾಕುವುದುಂಟು. ನೈವೇದ್ಯದ ಮೇಲೆ ತುಳಸಿ ದಳವೊಂದನ್ನು ಹಾಕಿ ದೇವರಿಗೆ ಸಮರ್ಪಿಸುತ್ತಾರೆ.

ತುಳಸಿ ಎಲ್ಲಾ ದೇವತೆಗಳಿಗೂ ಬಲು ಪ್ರಿಯವಾದ್ದರಿಂದ ನೈವೇದ್ಯ ದೇವರನ್ನು ಸುಲಭವಾಗಿ ತಲುಪುತ್ತದೆ. ಅಲ್ಲದೆ ದೇವತೆಗಳಿಂದ ಬರುವ ಚೈತನ್ಯವನ್ನು ಇದು ಗ್ರಹಿಸಿ ನೈವೇದ್ಯದಲ್ಲಿ ಹರಡುತ್ತದೆ.ಹೀಗಾಗಿ ತುಳಸಿ ದಳದÇÉೇ ನೈವೇದ್ಯ ಅರ್ಪಿಸುತ್ತಾರೆ. ಇನ್ನು ಕೆಲವೆಡೆ ಕಿಸ್ಕಾರ (ಕೇಪಳ), ಕಣಗಿಲೆ ಹೂವನ್ನೂ ನೈವೇದ್ಯದ ಮೇಲಿಡುವುದುಂಟು.

ಪ್ರತಿಯೊಂದು ದೇವತೆಗೂ ವಿಶಿಷ್ಟ ಬಗೆಯ ನೈವೇದ್ಯಗಳು ನಿಶ್ಚಿತವಾಗಿವೆ. ವಿಷ್ಣುವಿಗೆ ಕ್ಷೀರಾನ್ನ (ಖೀರು), ಗಣಪತಿಗೆ ಮೋದಕ, ದೇವಿಗೆ ಪಾಯಸ.. ಹೀಗೆ, ಆಯಾ ದೇವರ ನೈವೇದ್ಯವನ್ನು ತಯಾರಿಸಿ ಬಡಿಸಿದರೆ ಅಲ್ಲಿ ದೇವತೆಯ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾದವಾಗಿ ನಾವು ಸ್ವೀಕರಿಸಿದರೆ ಆ ಶಕ್ತಿ ನಮ್ಮ ದೇಹದಲ್ಲೂ ಪ್ರವಹಿಸುತ್ತದೆ ಎಂಬುದು ನಂಬಿಕೆ.

ಪೂಜೆಪುನಸ್ಕಾರಗಳ ಹೊರತಾಗಿಯೂ ನಿತ್ಯ ಪ್ರಾರ್ಥನೆ ಮಾಡುವವರೂ ನೈವೇದ್ಯ ತಯಾರಿಸಿ ದೇವರ ಮುಂದಿಡುವುದುಂಟು. ಭಗವದರ್ಪಿತ ನೈವೇದ್ಯವನ್ನೇ ಉಣ್ಣಬೇಕು. ಎಂಬುದು ವೈದಿಕರ ಪರಂಪರಾಗತ ಕ್ರಮ. ತಿನಿಸುಗಳ ಹೊರತಾಗಿ ಯುಗಾದಿ, ದೀಪಾವಳಿ ಮೊದಲಾದ ಹಬ್ಬದ ಸಂದರ್ಭದಲ್ಲಿ ಹೊಸ ವಸ್ತ್ರವನ್ನೂ ದೇವರ ಮುಂದಿಟ್ಟು ನಮಸ್ಕರಿಸಿ ಬಳಿಕ ಧರಿಸುತ್ತಾರೆ. 

ಸಾಮಾನ್ಯವಾಗಿ ನಿತ್ಯ ಪೂಜೆ ಮಾಡುವವರು ದೇವರಿಗೆ ತೆಂಗಿನಕಾಯಿ ನೈವೇದ್ಯ ಮಾಡುತ್ತಾರೆ. ಶುಕ್ರವಾರದಂದು ದೇವಿಗೆಂದು ಬಾಳೇಹಣ್ಣು ನೈವೇದ್ಯ ಮಾಡುತ್ತಾರೆ.ದೇವಸ್ಥಾನಕ್ಕೆ ತೆರಳುವಾಗ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ದೇವರ ನೈವೇದ್ಯಕ್ಕೆ ಕೊಂಡೊಯ್ಯುತ್ತಾರೆ. ಯಾಕೆಂದರೆ ಇವೆರಡೂ ಪವಿತ್ರ ಫ‌ಲಗಳು.

ಹೇಗೆನ್ನುತ್ತೀರಾ? ಭೂಮಿಯಲ್ಲಿ ಬೆಳೆವ ಎಲ್ಲಾ ಗಿಡದ ಹಣ್ಣುಗಳೂ ಪಶುಪಕ್ಷಿ$ ಅಥವಾ ಮನುಷ್ಯರೇ ತಿಂದೆಸೆದ ಎಂಜಲಿನಿಂದ ಬೆಳೆದವು. ಅಂದರೆ, ಬೀಜದಿಂದ ಮರುಹುಟ್ಟು ಪಡೆದವು. ಹೀಗಾಗಿ ಇವು ದೇವರಿಗೆ ಅರ್ಪಿಸಲು ಅರ್ಹವಾದುದಲ್ಲ. ಆದರೆ ತೆಂಗಿನಕಾಯಿ ಹಾಗೂ ಬಾಳೇಹಣ್ಣು ಮಾತ್ರ ಈ ವರ್ಗಕ್ಕೆ ಸೇರದ ಫ‌ಲಗಳು. ಅವು ಬೀಜ ಮೊಳಕೆಯೊಡೆದು ಸಸಿಯಾಗಿ ಅದರಲ್ಲಿ ಬೆಳೆದ ಹಣ್ಣುಗಳಲ್ಲ.

ದೇವರಿಗೆ ಅರ್ಪಿಸುವ ಬೆಲ್ಲವನ್ನು ಪ್ರಾಣಕ್ಕೂ, ತೆಂಗಿನಕಾಯಿಯನ್ನು ದೇಹಕ್ಕೂ ಹೋಲಿಸುತ್ತಾರೆ. ತೆಂಗಿನಕಾಯಿ ಒಡೆಯುವುದೆಂದರೆ ನಮ್ಮ ಅಹಂ ಅನ್ನು ಮುರಿದಂತೆ. ತೆಂಗಿನಕಾಯಿಯ ಒಳಗಿರುವ ನೀರು ಕೆಳಗೆ ಚೆಲ್ಲುವುದೆಂದರೆ, ನಮ್ಮೊಳಗಿರುವ ಅಹಂಕಾರವನ್ನು ಕಳೆದುಕೊಂಡು ದೇವರಿಗೆ ಸಂಪೂರ್ಣವಾಗಿ ಶರಣಾಗಿ ತಲೆಬಾಗುವುದು ಎಂದೂ ಹೇಳಲಾಗುತ್ತದೆ.

 ಹೀಗೊಂದು ಕಥೆ…
ತೆಂಗಿನಕಾಯಿ ನೈವೇದ್ಯದ ಹಿಂದೊಂದು ಪೌರಾಣಿಕ ಕತೆಯಿದೆ. ಬಾಲಕನಾಗಿದ್ದ ಗಣಪ ಶಿವನ ಮೂರನೇ ಕಣ್ಣಿನೊಂದಿಗೆ ಆಟವಾಡಲು ಮುಂದಾದನಂತೆ. ಶಿವನ ಮೂರನೇ ಕಣ್ಣನ್ನು ಮುಟ್ಟಿದರೆ ಸುಟ್ಟು ಕರಕಲಾಗುವ ಭೀತಿಯಿಂದ ಶಿವನೇ ಮೂರು ಕಣ್ಣುಳ್ಳ ತೆಂಗಿನ ಕಾಯನ್ನು ಸೃಷ್ಟಿಸಿ ಮಗನಿಗೆ ಆಟವಾಡಲು ಕೊಟ್ಟನಂತೆ. ಆದ್ದರಿಂದ ಇಂದಿಗೂ ಗಣಪನ ಪೂಜೆಯ ವೇಳೆ ಮರೆಯದೆ ತೆಂಗಿನಕಾಯಿ ಒಡೆಯುತ್ತಾರೆ.

ಯಜ್ಞ, ಪೂಜೆ ಹಾಗೂ ಭೋಜನಕ್ಕೆ ಮೊದಲು ನೈವೇದ್ಯ ಮಾಡುವ ಪದ್ಧತಿ ಅನಾದಿ ಕಾಲದಿಂದಲೂ ಹಿಂದೂ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ. ಯಜ್ಞ-ಹೋಮಗಳ ಸಂದರ್ಭ ಅರೆಬೆಂದ ಅನ್ನ (ಚರು), ಎಳ್ಳು, ತುಪ್ಪಗಳನ್ನು ನೈವೇದ್ಯವಾಗಿ ಅಗ್ನಿಗೆ ಸಮರ್ಪಿಸುತ್ತಾರೆ ಇದು ಸುಡುವಾಗ ಹೊರಬೀಳುವ ಹೊಗೆ, ಓಝೊàನ್‌ ಪದರವನ್ನು ತಲುಪುತ್ತದೆ. ಈ ಗಾಳಿಯ ಸೇವನೆ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗಿದೆ.

ಕರಾವಳಿಯ ಜನರಲ್ಲಿ ನೈವೇದ್ಯಕ್ಕೆ ಪರ್ಯಾಯವಾಗಿ ಎಡೆ ಇಡುವುದು ಎಂಬ ಒಂದು ಕ್ರಮವಿದೆ. ಕುಟುಂಬದಲ್ಲಿ ಸತ್ತ ಹಿರಿಯರಿಗೆ, ಮನೆಯ ಊರಿನ ದೈವಗಳಿಗೆ ಇದೇ ಪ್ರಕಾರದಲ್ಲಿ ನೈವೇದ್ಯ ಬಡಿಸುತ್ತಾರೆ. ನಿತ್ಯದ ಅಡುಗೆಯ ಹೊರತಾದ ಎಲ್ಲಾ ವಿಶೇಷ ತಿನಿಸುಗಳನ್ನು, ಸಿಹಿ ತಿಂಡಿಗಳನ್ನು, ಮಾಂಸಾಹಾರದ ಅಡುಗೆಗಳನ್ನು ದೈವಕ್ಕೆ ಅರ್ಪಿಸಿಯೇ ಸೇವಿಸುತ್ತಾರೆ.

ಇನ್ನು ಕೆಲವು ದೈವಗಳಿಗೆ ಸಾರಾಯಿ, ಬೀಡಿ, ಬೀಡಾಗಳನ್ನೂ ಒಂದು ಮರದ ಮಣೆಯಲ್ಲಿ ವ್ಯವಸ್ಥಿತವಾಗಿ ಇರಿಸಿ ಅರ್ಪಿಸುವುದುಂಟು. ಮನೆಯಲ್ಲಿ ಹೊಸ ಅಡುಗೆ ತಯಾರಾದರೆ, ಹೊಸ ವಸ್ತ್ರ ಅಥವಾ ಆಭರಣವನ್ನು ಮನೆಗೆ ತಂದರೆ ಅದನ್ನೂ ಮಣೆಯ ಮೇಲಿಟ್ಟು ನಮಸ್ಕರಿಸಿ, ಬಳಿಕವೇ ಉಪಯೋಗಿಸುತ್ತಾರೆ. ಕರಾವಳಿಯ ತುಳುವರು ಜಾನಪದ ಮೂಲದ ದೈವಗಳನ್ನು, ಕುಟುಂಬದ ಹಿರಿಯರನ್ನು(ಗತಿಸಿದ ಪಿತೃಗಳನ್ನು) ನೆಚ್ಚಿ ನಂಬುವುದೂ ಇದಕ್ಕೊಂದು ಕಾರಣವಿರಬಹುದು.

ಇಂದು ಪೂಜೆಯ ವಿಧಾನ ವೈವಿಧ್ಯಮಯವಾಗಿದೆ. ಪೂಜಾ ಸಂದರ್ಭದಲ್ಲಿ ಆಹಾರ ವಸ್ತುಗಳನ್ನು ದೇವರಿಗೆ ಅರ್ಪಿಸಿದ ಬಳಿಕವಷ್ಟೇ ಪ್ರಸಾದದ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ಉತ್ತರ ಕರ್ನಾಟಕಕ್ಕೆ ಹೋದಂತೆÇÉಾ,ನೈವೇದ್ಯ ಸಮರ್ಪಿಸುವ ರೀತಿಯೂ ಬದಲಾಗುತ್ತದೆ. ಅಲ್ಲಿ ಮಹಿಳೆಯರು ಮಡಿಯುಟ್ಟು, ಬೆಳ್ತಿಗೆ ಅನ್ನ ತಯಾರಿಸಿ ಪೂಜೆ ನೈವೇದ್ಯ ಮುಗಿಸಿ ಬಳಿಕ ಪ್ರಸಾದವಾಗಿ ಅದೇ ಅನ್ನವನ್ನು ಉಣ್ಣುತ್ತಾರೆ. ಸ್ಥಳೀಯ ಪದ್ಧತಿ ಆಚಾರ ವಿಚಾರಗಳಿಗೆ ಅನುಗುಣವಾಗಿ ಬದಲಾಗುತ್ತವೆ.

(ಮುಂದುವರಿಯುವುದು)

ವಿಷ್ಣು ಭಟ್ಟ ಹೊಸ್ಮನೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ